ನವ ದೆಹಲಿ – ದೆಹಲಿಯಲ್ಲಿನ ಶಾಸ್ತ್ರೀ ಪಾರ್ಕ್ ಪರಿಸರದಲ್ಲಿ ರಾಮನವಮಿಯ ದಿನದಂದು ಹಾಕಲಾದ ಕೇಸರಿ ಧ್ವಜದ ಅವಮಾನ ಮಾಡಿರುವ ಪ್ರಕರಣದಲ್ಲಿ ಆಝೀಮ್ ಎಂಬ ಮುಸಲ್ಮಾನ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
Delhi man Azim tramples Ram Navami saffron flags and dumps them in a drain, arrested after a complaint filedhttps://t.co/Bcdwo8cc5G
— OpIndia.com (@OpIndia_com) April 5, 2023
ಏಪ್ರಿಲ್ ೪ ರಂದು ರಾತ್ರಿ ೯ ಗಂಟೆಗೆ ಸಾಗರ ಎಂಬ ವ್ಯಕ್ತಿಯು ಆಝೀಮ ಇವನ ವಿರುದ್ಧ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಾಗರ ಇವರು ದೂರಿನಲ್ಲಿ, ‘ರಾತ್ರಿ ೧೨:೩೦ ಸುಮಾರಿಗೆ ‘ಬ್ಲಾಕ್ ಸ್ಟ್ರೀಟ್’ ನ ಪರಿಸರದಲ್ಲಿ ಚಿಕ್ಕದಾದ ಕೇಸರಿ ಧ್ವಜಗಳು ಹಾಕಲಾಗಿತ್ತು. ಆಝೀಮ್ ಇವನು ಆ ಧ್ವಜಗಳನ್ನು ತೆಗೆದು ಅದರಲ್ಲಿನ ಕೆಲವು ಹರಿದನು, ಕೆಲವು ಕಾಲಿನಂದ ತುಳಿದನು ಮತ್ತು ಕೆಲವು ಹತ್ತಿರದ ಕಾಲುವೆಗೆ ಎಸೆದನು.’ ಅವನ ಈ ಕೃತ್ಯದ ಯಾರೋ ವಿಡಿಯೋ ಮಾಡಿದ್ದಾರೆ. ಅದು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಅದರ ನಂತರ ಆಝೀಮ್ ನ ವಿರುದ್ಧ ಕಲಂ ೧೫೩ ಅ (ಎರಡು ಧಾರ್ಮಿಕ ಗುಂಪಿನಲ್ಲಿ ಬಿರುಕು ನಿರ್ಮಾಣ ಮಾಡುವುದು) ಮತ್ತು ಕಲಂ ೨೯೫ ಅ (ಉದ್ದೇಶಪೂರ್ವಕ ಒಂದು ಧಾರ್ಮಿಕ ಗುಂಪಿನ ಶ್ರದ್ದೆಯ ಅವಮಾನ ಮಾಡುವುದು) ಈ ಕಲಂ ಪ್ರಕಾರ ದೂರು ಕಲಿಸಿಕೊಂಡು ಪೊಲೀಸರು ಅವನನ್ನು ಬಂಧಿಸಿದ್ದಾರೆ.
ಮೇಲೆ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ತರುವುದಾಗಿರದೇ ನಿಜ ಸ್ಥಿತಿ ತಿಳಿಸುವುದಾಗಿದೆ – ಸಂಪಾದಕರು |