ತೆಲಂಗಾಣದ ಭಾಜಪ ಪ್ರದೇಶಾಧ್ಯಕ್ಷ ಬಂಡಿ ಸಂಜಯ ಬಂಧನ !

ಪೇಪರ ಲೀಕ್ ಪ್ರಕರಣದಲ್ಲಿ ಬಂಧನ

ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್

ಭಾಗ್ಯನಗರ (ತೆಲಂಗಾಣ) – ತೆಲಂಗಾಣಾದ ಭಾಜಪ ಪ್ರದೇಶಾಧ್ಯಕ್ಷ ಬಂಡಿ ಸಂಜಯ ಇವರನ್ನು ಏಪ್ರಿಲ್ ೪ ರಂದು ಪೇಪರ ಲೀಕ್ ಪ್ರಕರಣದಲ್ಲಿ ಪೊಲೀಸರು ತಡರಾತ್ರಿ ಅವರ ಮನೆಯಿಂದ ಬಂದಿಸಿದ್ದಾರೆ. ಪೊಲೀಸರು ಬಂಡಿ ಸಂಜಯ ಇವರ ಮನೆಗೆ ಬಂಧಿಸಲು ಹೋಗುತ್ತಿರುವ ವಿಷಯ ಭಾಜಪದ ಕಾರ್ಯಕರ್ತರಿಗೆ ತಿಳಿದ ನಂತರ ಅವರು ಹೆಚ್ಚಿನ ಸಂಖ್ಯೆಯಲ್ಲಿ ಬಂಡಿ ಸಂಜಯ ಇವರ ಮನೆಯ ಹೊರಗೆ ಸೇರಿದರು. ಅವರು ಪೊಲೀಸರಿಗೆ ತಡೆಯುವ ಪ್ರಯತ್ನ ಮಾಡಿದರು.

೧. ಬಂಡಿ ಸಂಜಯ ಇವರು ತಮ್ಮ ಬಂಧನದ ವಿಷಯ ಒಂದು ವಿಡಿಯೋ ಟ್ವೀಟ್ ಮಾಡಿ, ಭಾರತ ರಾಷ್ಟ್ರ ಸಮಿತಿ ಪಕ್ಷದಲ್ಲಿ (ಬಿ.ಆರ್.ಎಸ್. ನಲ್ಲಿ) ಭಯದ ವಾತಾವರಣ ಇದೆ. ಹಿಂದೆ ಅವರು ನನಗೆ ಪತ್ರಕರ್ತರಿಗೆ ಸಂದರ್ಶನ ನೀಡಲು ತಡೆದಿದ್ದರು ಮತ್ತು ಈಗ ರಾತ್ರಿಯ ಸಮಯದಲ್ಲಿ ನನ್ನನ್ನು ಬಂಧಿಸಿದ್ದಾರೆ. ನಾನು ಬಿ.ಆರ್.ಎಸ್. ಸರಕಾರದ ತಪ್ಪಾದ ಕೆಲಸದ ಬಗ್ಗೆ ಪ್ರಶ್ನೆಗಳನ್ನು ಕೇಳಲು ಆರಂಭಿಸಿದ್ದೆ ತಪ್ಪು ಮಾಡಿದ್ದೆ. ನಾನು ಜೈಲಿನಲ್ಲಿ ಇದ್ದರೂ ನೀವೆಲ್ಲರು ಬಿ.ಆರ್.ಎಸ್. ಗೆ ಪ್ರಶ್ನೆ ಕೇಳುವುದನ್ನು ನಿಲ್ಲಿಸಬೇಡಿ ಎಂದು ಹೇಳಿದರು.

೨. ಭಾಜಪದ ಪ್ರದೇಶ ಕಾರ್ಯದರ್ಶಿ ಪ್ರೇಮೆಂದ್ರ ರೆಡ್ಡಿ ಇವರು, ಬಂಡಿ ಸಂಜಯ ಇವರನ್ನು ಕಾನೂನಬಾಹಿರವಾಗಿ ಬಂಧಿಸಿದ್ದಾರೆ. ಇದು ಒಂದು ರೀತಿಯಲ್ಲಿ ರಾಜ್ಯದಲ್ಲಿನ ಪ್ರಧಾನ ಮಂತ್ರಿಯ ಕಾರ್ಯಕ್ರಮ ವಿಫಲಗೊಳಿಸುವ ಪ್ರಯತ್ನವಾಗಿದೆ. ತಡರಾತ್ರಿಯಲ್ಲಿ ಬಂಡಿ ಸಂಜಯ ಇವರನ್ನು ಬಂಧಿಸುವ ಅವಶ್ಯಕತೆ ಏನಿತ್ತು ? ಅವರಿಗೆ ಯಾವ ಪ್ರಕರಣದಲ್ಲಿ ಬಂಧಿಸಲಾಗಿದೆ, ಇದು ಕೂಡ ನಮಗೆ ತಿಳಿಸಲಾಗಿಲ್ಲ ಎಂದು ಸರಕಾರದ ಬಗ್ಗೆ ಆರೋಪಿಸಿದ್ದಾರೆ. ಬಂಡಿ ಸಂಜಯ ಇವರ ಬಂಧನದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು, ಎಂದು ಹೇಳಿದರು.