ಶಾಲೆಯ ಉತ್ಸವದಲ್ಲಿನ ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸುತ್ತಿದ್ದ ನಾಟಕದಲ್ಲಿ ಭಯೋತ್ಪಾದಕನನ್ನು ಮುಸಲ್ಮಾನ ಎಂದು ತೋರಿಸಿದ್ದರಿಂದ ೧೦ ಜನರ ಬಂಧನ !

  • ಪೇರಾಂಬರ (ಕೇರಳ) ದಲ್ಲಿಯ ಘಟನೆ !

  • ನ್ಯಾಯಾಲಯದ ಆದೇಶದ ನಂತರ ಕ್ರಮ

ಪೇರಾಂಬರ (ಕೇರಳ) – ಇಲ್ಲಿಯ ರಾಜ್ಯ ಮಟ್ಟದ ಶಾಲೆಯ ಉತ್ಸವದ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಒಂದು ನಾಟಕದ ಕಾರ್ಯಕ್ರಮದಲ್ಲಿ ಮುಸಲ್ಮಾನರನ್ನು ಭಯೋತ್ಪಾದಕನೆಂದು ತೋರಿಸಿದ್ದರಿಂದ ಪೊಲೀಸರು ೧೦ ಜನರನ್ನು ಬಂಧಿಸಿದ್ದಾರೆ. ಇದರಲ್ಲಿ ‘ಮಲಯಾಳಂ ಥಿಯೇಟ್ರಿಕಲ್ ಹೆರಿಟೇಜ್ ಅಂಡ್ ಆರ್ಟ್ಸ್’ನ ಇವರು ಒಂದು ಸಂಗೀತಮಯ ಪ್ರಸ್ತುತಿಕರಣ ಮಾಡಿದರು. ಅದರಲ್ಲಿ ಭಾರತೀಯ ಸೈನ್ಯವು ಒಬ್ಬ ಭಯೋತ್ಪಾದಕನನ್ನು ಬಂಧಿಸಿದ್ದಾರೆ, ಹೇಗೆ ತೋರಿಸಲಾಗಿತ್ತು. ಭಯೋತ್ಪಾದಕನಿಗೆ ಅರಬಿ ಮುಸಲ್ಮಾನ ಸ್ವರೂಪದಲ್ಲಿ ತೋರಿಸಲಾಗುತ್ತು.

೧. ಈ ವಿಷಯವಾಗಿ ‘ರಾಜೀವ ಗಾಂಧಿ ಸ್ಟಡಿ ಸರ್ಕಲ್’ ನ ಸಂಚಾಲಕರಾದ ಅನೂಪ ವಿ.ಆರ್. ಇವರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ದೂರ ದಾಖಲಿಸಿಕೊಳ್ಳಲು ನಿರಾಕರಿಸಿದರು. ಆದ್ದರಿಂದ ಅನುಪ ಇವರು ಕೊಳಿಕೊಡ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದರು. ನ್ಯಾಯಾಲಯದ ಆದೇಶದ ಮೇರೆಗೆ ಪೋಲಿಸರು ದೂರು ದಾಖಲಿಸಿಕೊಂಡು ಕ್ರಮ ಕೈಗೊಂಡರು. ಈ ಕಾರ್ಯಕ್ರಮ ಜನವರಿ ೩, ೨೦೨೩ ರಂದು ನಡೆದ್ದಿತ್ತು.

೨. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಮಾಥಾ’ವು, ಭಯೋತ್ಪಾದಕನಿಗೆ ಮುಸಲ್ಮಾನ ತೋರಿಸುವ ನಮಗೆ ಯಾವುದೇ ಉದ್ದೇಶ ಇರಲಿಲ್ಲ ಮತ್ತು ನಮ್ಮ ಸಂಘಟನೆ ಯಾವುದೇ ರಾಜಕೀಯ ವಿಚಾರಗಳಿಗೆ ಸಂಬಂಧಿತವಲ್ಲ. ನಮ್ಮ ಮೇಲೆ ಸಂಘದ ವಿಚಾರ ಪಸರಿಸುವ ಆರೋಪ ಆಧಾರವಿಲ್ಲದ್ದಾಗಿದೆ ಎಂದು ಹೇಳಿದರು.