ದೆಹಲಿಯ ಭುರೆ ಶಾಹ ದರ್ಗಾ ಬಳಿಯ ಕಾನೂನು ಬಾಹಿರ ಮಜಾರ್ ನೆಲಸಮ

(ಮಜಾರ್ ಎಂದರೆ ಮುಸ್ಲಿಂ ಫಕೀರನ ಗೋರಿ)

ನವ ದೆಹಲಿ – ಇಲ್ಲಿಯ ಭೂರೆ ಶಾ ದರ್ಗಾ ಬಳಿಯ ಕಾನೂನು ಬಾಹಿರ ಗೋರಿಯ ಮೇಲೆ ಅತಿಕ್ರಮಣ ವಿರೋಧಿ ತಂಡವು ಕ್ರಮ ಕೈಗೊಳ್ಳುತ್ತಾ ಅದನ್ನು ನೆಲಸಮಗೊಳಿಸಿದೆ. ಈ ಗೋರಿಯು ಕಾಲುದಾರಿಯ ಮೇಲೆ ನಿರ್ಮಿಸಲಾಗಿದೆ. ಕ್ರಮ ಕೈಗೊಳ್ಳುವಾಗ ದೆಹಲಿ ಪೊಲೀಸರು, ಅರೆಸೇನಾ ಪಡೆ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಜರಿದ್ದರು. ಈ ಗೋರಿಯನ್ನು ಕೆಡುವಲು ಲೋಕೋಪಯೋಗಿ ಇಲಾಖೆಯಿಂದ ದರ್ಗಾ ಸೇವಕರಿಗೆ ಹಲವು ಬಾರಿ ನೋಟೀಸ್ ನೀಡಲಾಗಿತ್ತು; ಆದರೆ ಅವರು ಅದನ್ನು ತೆಗೆದು ಹಾಕಿರಲಿಲ್ಲ.

ಸಂಪಾದಕರ ನಿಲುವು

ಈ ರೀತಿಯ ಅಕ್ರಮ ಕಾಮಗಾರಿ ನಿರ್ಮಾಣ ಆಗುವವರೆಗೆ ಆಡಳಿತ ನಿದ್ದೆ ಮಾಡುತ್ತಿತ್ತೇ ? ಅದನ್ನು ತಕ್ಷಣ ಏಕೆ ತಗೆದು ಹಾಕುವುದಿಲ್ಲ ?