ನನ್ನ ಪೂರ್ವಜರು ಭಾರತದಿಂದ ಪಾಕಿಸ್ತಾನಕ್ಕೆ ಬಂದು ದೊಡ್ಡ ತಪ್ಪು ಮಾಡಿದರು ! – ಪಾಕಿಸ್ತಾನಿ ಪತ್ರಕರ್ತೆ ಆರ್ಜು ಕಾಝ್ಮಿ

ಪಾಕಿಸ್ತಾನಿ ಪತ್ರಕರ್ತ ಆರ್ಜು ಕಾಝ್ಮಿಯ ನೇರ ಮಾತು

ಇಸ್ಲಾಮಾಬಾದ – ಪಾಕಿಸ್ತಾನದಲ್ಲಿನ ಪ್ರಸಿದ್ಧ ಪತ್ರಕರ್ತ ಆರ್ಜು ಕಾಝ್ಮಿ ಇವರು ಮಾಡಿರುವ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೈರಲ್ ಆಗಿದೆ. ಇದರಲ್ಲಿ ಅವರು ’೧೯೪೭ ರಲ್ಲಿ ವಿಭಜನೆಯ ಸಮಯದಲ್ಲಿ ನನ್ನ ಪೂರ್ವಜರು ಉಜ್ವಲ ಭವಿಷ್ಯಕ್ಕಾಗಿ ಭಾರತದಲ್ಲಿನ ದೆಹಲಿ ಮತ್ತು ಪ್ರಯಾಗರಾಜದಿಂದ ಪಾಕಿಸ್ತಾನಕ್ಕೆ ಬಂದರು; ಆದರೆ ಪಾಕಿಸ್ತಾನದಲ್ಲಿ ನಮಗೆ ಭವಿಷ್ಯವೇ ಇಲ್ಲ ಎಂದು ನನ್ನ ಸಹೋದರ ಮತ್ತು ಅವರ ಕುಟುಂಬದಲ್ಲಿನ ಇತರ ಸದಸ್ಯರಿಗೆ ಅನಿಸುತ್ತದೆ, ನಮ್ಮ ಅಜ್ಜ ನಮ್ಮ ಭವಿಷ್ಯ ಹಾಳು ಮಾಡಿದರು.’ ಎಂದು ಬರೆದಿದ್ದಾರೆ.

(ಸೌಜನ್ಯ : Aaj Tak)

ಕಳೆದ ಕೆಲವು ತಿಂಗಳಿಂದ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು ಅಲ್ಲಿ ಜೀವನಾವಶ್ಯಕ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಈ ಹಿನ್ನೆಲೆಯಲ್ಲಿ ಆರ್ಜು ಆಝ್ಮಿ ಇವರು ಟ್ವೀಟ್ ಮಾಡಿದ್ದಾರೆ. ಭಾರತೀಯ ವಾರ್ತಾ ವಾಹಿನಿಯಲ್ಲಿನ ಅನೇಕ ಚರ್ಚಾಕೂಟಗಳಲ್ಲಿ ಕಾಝ್ಮಿ ಇವರು ಸಹಭಾಗಿಯಾಗುತ್ತಾರೆ.

ಆರ್ಜು ಕಾಝ್ಮಿ ಇವರಿಗೆ ಅನೇಕ ಪಾಕಿಸ್ತಾನಿಗಳಿಂದ ಬೆಂಬಲ !

ಕಾಝ್ಮಿ ಇವರ ಈ ಟ್ವೀಟ್ ಗೆ ಪಾಕಿಸ್ತಾನದಲ್ಲಿ ನಾಗರಿಕರಿಂದ ಸಕಾರಾತ್ಮಕ ಅಭಿಪ್ರಾಯ ದೊರೆತಿದ್ದು ಅನೇಕರು ಅವರಿಗೆ ಬೆಂಬಲ ಸೂಚಿಸಿದ್ದಾರೆ. ಆಫಸಾನ್ ಹೆಸರಿನ ಒಬ್ಬ ವ್ಯಕ್ತಿಯು, ’ನನ್ನ ಅಜ್ಜ ಅಜ್ಜಿ ಬಿಹಾರ ಮತ್ತು ಉತ್ತರ ಪ್ರದೇಶದಿಂದ ಪಾಕಿಸ್ತಾನಕ್ಕೆ ಬಂದರು. ಅವರ ಕೊನೆಯ ಉಸಿರು ಇರುವವರೆಗು ಅವರ ನಿರ್ಣಯಕ್ಕೆ ಪಶ್ಚಾತಾಪ ಪಟ್ಟರು.’ ಎಂದು ಹೇಳಿದ. ಸಮೀರ್ ಅಹ್ಮದ್ ಹೆಸರಿನ ಇನ್ನೊಬ್ಬ ಪಾಕಿಸ್ತಾನ ನಾಗರಿಕನು, ‘ನಾನು ನಿಮ್ಮ ಭಾವನೆ ಸರಿಯಾಗಿ ತಿಳಿಯಬಲ್ಲೆ. ನನ್ನ ಅಜ್ಜ ಕೂಡ ಇದನ್ನೇ ಮಾಡಿದ್ದರು. ಕೊನೆಗೆ ನಮ್ಮ ಪರಿಸ್ಥಿತಿ ಗಂಭೀರವಾಯಿತು.’ ಎಂದು ಹೇಳಿದ. ಈ ಬಗ್ಗೆ ಅನೇಕ ಭಾರತೀಯರು ಆರ್ಜು ಕಾಝ್ಮಿ ಇವರಿಗೆ ಭಾರತಕ್ಕೆ ಬರಲು ಆಮಂತ್ರಣ ನೀಡಿದರು. (ಇಂತಹವರಿಗೆ ಭಾರತಕ್ಕೆ ಕರೆಯುವುದಕ್ಕೆ ಭಾರತವೇನು ಧರ್ಮಛತ್ರ ಅಲ್ಲ ! – ಸಂಪಾದಕರು)

ಸಂಪಾದಕೀಯ ನಿಲುವು

ಭಾರತದಲ್ಲಿ ವಾಸಿಸುವ ಪಾಕಿಸ್ತಾನ ಪ್ರೇಮಿ ಮುಸಲ್ಮಾನರು ಇದರ ಬಗ್ಗೆ ಏನು ಹೇಳುವರು ? ಭಾರತದಲ್ಲಿನ ಪಾಕಿಸ್ತಾನ ಪ್ರೇಮಿ ಅವರ ಪಾಕಿಸ್ತಾನದಲ್ಲಿನ ಧರ್ಮ ಬಾಂಧವರ ಸಹಾಯಕ್ಕಾಗಿ ಪಾಕಿಸ್ತಾನಕ್ಕೆ ಹೋದರೆ ಪಾಕಿಸ್ತಾನದಲ್ಲಿನ ಸಮಸ್ಯೆಗಳಿಗೆ ಪರಿಹಾರ ಸಿಗುವುದು ಮತ್ತು ಅದಕ್ಕಿಂತ ಹೆಚ್ಚಾಗಿ ಭಾರತದ ಸಮಸ್ಯೆ ಕೂಡ ಪರಿಹಾರವಾಗುವುದು !