ಭೋಪಾಲ್ (ಮಧ್ಯಪ್ರದೇಶ) – ಮಧ್ಯಪ್ರದೇಶದ ಭಾಜಪ ಸರಕಾರವು ರಾಜ್ಯದ ನಸ್ರುಲ್ಲಾಗಂಜ್ ನಗರದ ಹೆಸರನ್ನು ಭೈರುಂದಾ ಎಂದು ಬದಲಾಯಿಸಿದೆ. ಸರಕಾರವು ಈ ವಿಷಯದ ಕುರಿತು ಸೂಚನೆ ಹೊರಡಿಸಿದೆ. ಕೇಂದ್ರ ಸರಕಾರಕ್ಕೆ ಈ ವಿಷಯದ ಕುರಿತು ಪ್ರಸ್ತಾವನೆ ಕಳುಹಿಸಲಾಗಿತ್ತು. ಕೇಂದ್ರ ಗೃಹ ಸಚಿವಾಲಯದ ಒಪ್ಪಿಗೆಯ ನಂತರ ಹೆಸರನ್ನು ಬದಲಾಯಿಸಲಾಗಿದೆ. ಈ ಹಿಂದೆ ಸರಕಾರವು ಭೋಪಾಲ್‌ನ ಇಸ್ಲಾಂನಗರವನ್ನು ಜಗದೀಶ್‌ಪುರ ಮತ್ತು ಹೋಶಂಗಾಬಾದ್‌ಗೆ ನರ್ಮದಾಪುರಂ ಎಂದು ಮರುನಾಮಕರಣ ಮಾಡಿತ್ತು.
ಚುನಾವಣೆ ಸಮೀಪಿಸುತ್ತಿದ್ದಂತೆ ಎಂಪಿಯಲ್ಲಿ ಮರುನಾಮಕರಣ ರಾಜಕೀಯ, ನಸ್ರುಲ್ಲಾಗಂಜ್ ಪಟ್ಟಣ ಹೆಸರು ಬದಲಾವಣೆ!#Nasarullaganj #Rename #Madhyapradesh #Politicshttps://t.co/nfqyqkF0jD
— Asianet Suvarna News (@AsianetNewsSN) April 2, 2023