ಭೋಪಾಲ(ಮಧ್ಯಪ್ರದೇಶ) – ಭಾರತ ಮತ್ತು ಪಾಕಿಸ್ತಾನದ ವಿಭಜನೆಯು ಕೃತಕವಾಗಿತ್ತು. ಪಾಕಿಸ್ತಾನದಲ್ಲಿನ ಜನರಿಗೂ ಈಗ ವಿಭಜನೆಯು ಒಂದು ತಪ್ಪಾಗಿತ್ತು ಎಂದು ಅನಿಸುತ್ತದೆ, ಎಂದು ಪ.ಪೂ. ಸರಸಂಘಚಾಲಕರಾದ ಡಾ. ಮೋಹನಜಿ ಭಾಗವತ ರವರು ಹೇಳಿಕೆ ನೀಡಿದ್ದಾರೆ. ಅವರು ಇಲ್ಲಿನ ಸಿಂಧಿ ಸಮಾಜದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಆಗ ಅಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಶಿವರಾಜ ಸಿಂಹ ಚೌಹಾನರೂ ಉಪಸ್ಥಿತರಿದ್ದರು. ಮುಖ್ಯಮಂತ್ರಿಗಳು ಮಾತನಾಡುತ್ತ `ಮಧ್ಯಪ್ರದೇಶದ ಶಾಲಾಪಠ್ಯಕ್ರಮದಲ್ಲಿ ಸಿಂಧಿ ಮಹಾಪುರುಷರ ಇತಿಹಾಸವನ್ನೂ ಕಲಿಸಲಾಗುವುದು. ಸಾಮ್ರಾಟ ದಾಹಿರ ಸೇನ , ಹೇಮೂ ಕಾಲಾಣಿಯವರ ಜೀವನ ಚರಿತ್ರೆಯನ್ನೂ ಪಠ್ಯಕ್ರಮದಲ್ಲಿ ಸೇರಿಸಲಾಗುವುದು’ ಎಂದು ಘೋಷಿಸಿದರು.
People in Pakistan unhappy, they believe Partition was mistake, says RSS chief https://t.co/vd0dlpphdW
— The Times Of India (@timesofindia) March 31, 2023
ಸರಸಂಘಚಾಲಕರು ಮಂಡಿಸಿರುವ ಅಂಶಗಳು
೧. ನಾವು ಹೊಸ ಭಾರತವನ್ನು ನಿರ್ಮಿಸಬೇಕಿದೆ. ಭಾರತವು ತುಂಡಾಗಿದೆ. ನಮ್ಮ ಆ (ಪಾಕಿಸ್ತಾನ ಜೊತೆಗೆ) ಭೂಮಿಯೊಂದಿಗಿನ ಸಂಬಂಧವು ಶಾಶ್ವತವಾಗಿರುವುದು. ನಾವು ಸಿಂಧೂ ಸಂಸ್ಕೃತಿಯನ್ನು ಮರೆಯಲು ಸಾಧ್ಯವಿಲ್ಲ. ಸಿಂಧೂ ನದಿಯ ಸೂಕ್ತಗಳು ವೇದಗಳಲ್ಲಿ ಸಿಗುತ್ತವೆ. ಈ ಸಂಬಂಧವನ್ನು ನಾವು ಕಳೆದುಕೊಳ್ಳಲು ಸಾಧ್ಯವಿಲ್ಲ. ನಾವು ಸಿಂಧ ಪ್ರದೇಶವನ್ನು ಮರೆಯುವುದಿಲ್ಲ; ಏಕೆಂದರೆ ಇದು ಕೃತಕ ವಿಭಜನೆಯಾಗಿದೆ. ಇಂದು ನಾವು ಅದನ್ನು ಪಾಕಿಸ್ತಾನವೆಂದು ಕರೆಯುತ್ತೇವೆ. ಅಲ್ಲಿನ ಜನರು ತಪ್ಪಾಗಿದೆ ಎಂದು ಹೇಳುತ್ತಿದ್ದಾರೆ, ಇದನ್ನು ಅವರು ಒಪ್ಪಿಕೊಳ್ಳುತ್ತಾರೆ. ಅವರು ತಮ್ಮ ಹಠದಿಂದ ಭಾರತದಿಂದ ಬೇರ್ಪಟ್ಟರು. ಸಂಸ್ಕೃತಿಯಿಂದ ಬೇರ್ಪಟ್ಟರು. ಆದರೆ ಅವರು ಸುಖವಾಗಿದ್ದಾರೆಯೇ?
೨. ಭಾರತದೊಂದಿಗೆ ವಾಸಿಸಲು ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವವರು ಪುರುಷಾರ್ಥದಿಂದ ತಮ್ಮನ್ನು ರೂಪಿಸಿಕೊಂಡಿದ್ದಾರೆ. ಅಖಂಡ ಭಾರತವು ಸತ್ಯವಾಗಿದೆ. ತುಂಡಾದ ಭಾರತವು ದುಃಸ್ವಪ್ನವಾಗಿದೆ. ಅಲ್ಲಿ ಮತ್ತೊಮ್ಮೆ ಭಾರತವನ್ನು ಸ್ಥಾಪಿಸಬೇಕಾಗುವುದು. ಸಮಯ ಬಂದರೆ ನೀವು ಪುನಃ ಅಲ್ಲಿ ಭಾರತವನ್ನು ನಿರ್ಮಿಸಬಹುದು. ಇದಕ್ಕಾಗಿ ಮೊದಲ ಅವಶ್ಯಕತೆ ಎಂದರೆ ಸರ್ವಸ್ವದ ತ್ಯಾಗಕ್ಕಾಗಿ ಆಗಿನ ಸಮಾಜದ ಸಿದ್ಧತೆಯನ್ನು ಗಮನದಲ್ಲಿಟ್ಟುಕೊಳ್ಳುವುದಾಗಿದೆ. ಸಿಂಧನ್ನು ಮರೆಯದಿರಲು ಹೊಸ ಪೀಳಿಗೆಯನ್ನು ಅದರೊಂದಿಗೆ ಜೋಡಿಸಬೇಕು, ಅದಕ್ಕಾಗಿ ಸಮಾಜವು ಒಟ್ಟಾಗಬೇಕು.
(ಸೌಜನ್ಯ : The Print)
ಸಂಪಾದಕೀಯ ನಿಲುವುಭಾರತದ ವಿಭಜನೆಯು ಒಂದು ತಪ್ಪಾಗಿತ್ತು. ಆದರೆ ಈ ತಪ್ಪನ್ನು ಮಾಡಿದವರು ಯಾರು? ಎಂಬುದೂ ಈಗ ಜನರೆದುರು ಸ್ಪಷ್ಟವಾಗಬೇಕು ಮತ್ತು ಅವರನ್ನು ಈ ದೇಶವು ಎಲ್ಲ ಮಟ್ಟದಲ್ಲಿ ಬಹಿಷ್ಕರಿಸಬೇಕು ! |