ಭಾರತದಲ್ಲಿ ಕರೋನಾ ಪ್ರಸರಣದ ವೇಗ ದ್ವಿಗುಣ !

 ಸತತ ಎರಡನೇ ದಿನ ೩ ಸಾವಿರ ಹೊಸ ರೋಗಿಗಳು !

ನವ ದೆಹಲಿ – ದೇಶದಲ್ಲಿ ಕೊರೊನಾ ಪ್ರಸರಣದ ವೇಗ ದ್ವಿಗುಣಗೊಂಡಿದೆ. ಮಾರ್ಚ್ ೩೦ ರಂದು, ಅಂದರೆ ಸತತ ಎರಡನೇ ದಿನ, ದೇಶದಲ್ಲಿ ೩ ಸಾವಿರದ ೯೫ ನಾಗರಿಕರು ಕರೋನಾ ಸೋಂಕಿಗೆ ಒಳಗಾಗಿರುವುದು ಕಂಡುಬಂದಿದೆ . ಈ ದಿನ ೫ ಜನರು ಸಾವನ್ನೊಪ್ಪಿದ್ದಾರೆ ಮತ್ತು ೧ ಸಾವಿರ ೩೯೬ ಜನರು ಚೇತರಿಸಿಕೊಂಡಿದ್ದಾರೆ. ಮೃತಪಟ್ಟವರಲ್ಲಿ ಮೂವರು ಕೇರಳ ರಾಜ್ಯದವರಾಗಿದ್ದರೆ, ತಲಾ ಒಬ್ಬರು ಗುಜರಾತ್ ಮತ್ತು ಗೋವಾ ರಾಜ್ಯದವರು. ಪ್ರಸ್ತುತ ದೇಶದಲ್ಲಿ ೧೫ ಸಾವಿರದ ೨೦೮ ನಾಗರಿಕರು ಕರೋನಾದಿಂದ ಪೀಡಿತರಾಗಿದ್ದಾರೆ.

೬ ತಿಂಗಳಲ್ಲಿ ಮೊದಲ ಬಾರಿಗೆ ಒಂದೇ ದಿನದಲ್ಲಿ ೩ ಸಾವಿರ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ. ಕಳೆದ ವಾರ, ಕರೋನಾ ಸೋಂಕಿನ ದೈನಂದಿನ ಸರಾಸರಿ ೧ ಸಾವಿರ ೫೦೦ ಆಗಿತ್ತು. ಈ ಹಿಂದೆ ಅಕ್ಟೋಬರ್ ೨, ೨೦೨೨ ರಂದು ೩ ಸಾವಿರದ ೩೭೫ ಕರೋನಾ ಸೋಂಕಿನ ಪ್ರಕರಣಗಳು ವರದಿಯಾಗಿದ್ದವು.

(ಸೌಜನ್ಯ : DNA INDIA)