ಚಂದ್ರನ ಮೇಲೆ ೩೦ ಸಾವಿರಕೋಟಿ ಲೀಟರ ನೀರು ಇರುವ ಸಾಧ್ಯತೆ ! – ಸಂಶೊಧನೆ

ಬಿಜಿಂಗ (ಚೀನಾ) – ಚಂದ್ರನ ಮೇಲೆ ೩೦ ಸಾವಿರ ಕೋಟಿ ಲೀಟರ್ ನೀರು ಇರುವ ಸಾಧ್ಯತೆ ಇದೆ. ಯಾವಾಗ ಧುಮಕೇತು ಬೀಳುತ್ತವೆ, ಆಗ ಗಾಜಿನಂತೆ ಗೋಲಾಕಾರದ ವಸ್ತು ರೂಪುಗೊಳ್ಳುತ್ತದೆ. ಅದರಲ್ಲಿ ನೀರು ನಿರ್ಮಾಣ ಆಗಿರುತ್ತದೆ. ಎಂದು ಚೀನಾದ ‘೨೦೨೦ ಚಾಂಗಿ-೫ ಬಾಹ್ಯಾಕಾಶ ತನಿಖೆಯ ಸಮಯದಲ್ಲಿ ತಂದ ಮಣ್ಣಿನ ಮಾದರಿಗಳ ಅಧ್ಯಯನ ಮಾಡಿದನಂತರ ಅಭಿಪ್ರಾಯ ವ್ಯಕ್ತಪಡಿಸಲಾಯಿತು. ಜಾಗತಿಕ ವಿಜ್ಞಾನ ನಿಯತಕಾಳಿಕೆಯ ಇಂದಿನ ಅಂಕಣವಾದ ’ನೇಚರ್ ಜಿಯೋಸೈನ್ಸ್’ನ ಲ್ಲಿ ಈ ಕುರಿತ ಮಾಹಿತಿ ಪ್ರಕಟವಾಗಿದೆ.

ಧೂಮಕೇತು ಅಥವಾ ಉಲ್ಕಾಪಾತದ ಪ್ರಭಾವದ ನಂತರ, ಚಂದ್ರನ ಮೇಲ್ಮೈಯಲ್ಲಿ ಕೆಲವು ಮೈಕ್ರಾನ್ ಗಳಿಂದ ಒಂದು ಮಿಲಿಮೀಟರ್ ವ್ಯಾಸದವರೆಗಿನ ಶತಕೋಟಿ ಗಾಜಿನಂತೆ ಗೋಲಾಕಾರವು ರೂಪುಗೊಳ್ಳುತ್ತವೆ. ಸೌರ ಮಾರುತವು ಚಂದ್ರನನ್ನು ಅಪ್ಪಳಿಸಿದಾಗ ದೊಡ್ಡ ಪ್ರಮಾಣದ ಹೈಡ್ರೋಜನ್ ಮತ್ತು ಆಮ್ಲಜನಕ ಅದರೊಂದಿಗೆ ಬರುತ್ತದೆ. ಚಂದ್ರನ ಮೇಲಿನ ಗೋಲಾಕಾರದ ವಸ್ತುಗಳು ಸಹ ಆಮ್ಲಜನಕವನ್ನು ಹೊಂದಿರುತ್ತವೆ. ಅವುಗಳು ಒಟ್ಟಾಗಿ ನೀರು ರೂಪಗೊಳ್ಳುತ್ತದೆ. ಎಂದು ಗ್ರಹಗಳಿಗೆ ಸಂಬಂಧಿಸಿದ ವಿಜ್ಞಾನಿ ಸೆನ್ ಹೂ ಇವರು ಮಾಹಿತಿ ನೀಡಿದ್ದಾರೆ. ಪ್ರತಿ ಕೆಲವು ವರ್ಷಗಳಿಗೊಮ್ಮೆ ಈ ನೀರು ನವೀಕರಣವಾಗುತ್ತದೆ, ಎಂದು ಈ ಅಧ್ಯಯನವು ಬಹಿರಂಗಪಡಿಸಿದೆ.

ಬ್ರಿಟನ್ ನ ’ಓಪನ್ ಯುನಿವರ್ಸಿಟಿ’ಯ ಖಗೋಳಶಾಸ್ತ್ರದ ಪ್ರಾಧ್ಯಾಪಕ ಮಹೇಶ್ ಆನಂದ್ ಅವರು ಈ ಸಂಶೋಧನೆಯನ್ನು ಅತ್ಯಂತ ರೋಚಕವಾಗಿದೆ ಎಂದು ಕರೆದಿದ್ದಾರೆ ಮತ್ತು ಈ ಸಂಶೋಧನೆಯು ನಮಗೆ ಚಂದ್ರನ ಬಗ್ಗೆ ಹೆಚ್ಚು ವಿಶ್ವಾಸಾರ್ಹ ಮಾಹಿತಿಯನ್ನು ನೀಡಲು ಉಪಯುಕ್ತವಾಗಿದೆ ಎಂದು ಹೇಳಿದ್ದಾರೆ.