ಸುಳ್ಳು ಚಕಮಕಿಯಲ್ಲಿ ಪ್ರಧಾನಿ ಮೋದಿ ಇವರನ್ನು ಸಿಲುಕಿಸುವುದಕ್ಕಾಗಿ ನನ್ನ ಮೇಲೆ ಸಿಬಿಐನ ಒತ್ತಡ ಇತ್ತು !

ಕೇಂದ್ರ ಗೃಹ ಸಚಿವ ಅಮಿತ ಶಹಾ ಇವರ ದಾವೆ !

ಎಚ್ಎಂ ಮತ್ತು ಬಿಜೆಪಿ ನಾಯಕ ಅಮಿತ್ ಶಾ

ನವ ದೆಹಲಿ – ಕೇಂದ್ರದಲ್ಲಿ ಕಾಂಗ್ರೆಸ್ ಮೈತ್ರಿ ಸರಕಾರ ಇರುವಾಗ ಗುಜರಾತ್ ನ ತತ್ಕಾಲಿನ ಮುಖ್ಯಮಂತ್ರಿ ನರೇಂದ್ರ ಮೋದಿ ಇವರನ್ನು ಸುಳ್ಳು ಚಕಮಕಿಯ ಪ್ರಕರಣದಲ್ಲಿ ಸಿಲುಕಿಸಲು ಸಿಬಿಐ ವಿಚಾರಣೆಯ ಸಮಯದಲ್ಲಿ ನನ್ನ ಮೇಲೆ ಒತ್ತಡ ಹೇರಿತ್ತು, ಎಂದು ಕೇಂದ್ರ ಸಚಿವ ಅಮಿತ ಶಹಾ ಇವರು ಒಂದು ವಾರ್ತಾವಾಹಿನಿಯ ಕಾರ್ಯಕ್ರಮದಲ್ಲಿ ದಾವೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಅಮಿತ ಶಹಾ ಇವರಿಗೆ ಕೇಳಲಾದ ಪ್ರಶ್ನೆಗೆ, ವಿರೋಧಿ ಪಕ್ಷ ಕೇಂದ್ರ ಸರಕಾರದ ಮೇಲೆ ತನಿಖಾ ವ್ಯವಸ್ಥೆಯ ದುರುಪಯೋಗ ಮಾಡುವ ಆರೋಪ ಮಾಡುತ್ತಿದೆ. ಅದರ ಬಗ್ಗೆ ಅವರು ಮೇಲಿನ ಉತ್ತರ ನೀಡಿದರು. ಹಾಗೂ ನನ್ನ ಮೇಲೆ ಒತ್ತಡ ಹೇರುವಾಗ ಭಾಜಪ ಎಂದೂ ರಂಪಾರಾದ್ಧಾಂತ ಮಾಡಲಿಲ್ಲ, ಎಂದು ಶಹಾ ಹೇಳಿದರು.

ರಾಹುಲ್ ಗಾಂಧಿ ಇವರ ಪ್ರಕರಣದಲ್ಲಿ ಶಹಾ ಇವರು, ನ್ಯಾಯಾಲಯ ತಪ್ಪಿತಸ್ಥರನ್ನಾಗಿ ಮಾಡಿ ಸಂಸತ್ತಿನ ಸದಸ್ಯತ್ವ ಅನರ್ಹಗೊಳಿಸಿದವರಲ್ಲಿ ರಾಹುಲ್ ಗಾಂಧಿ ಇವರು ಒಬ್ಬರೇ ರಾಜಕಾರಣಿ ಏನೂ ಅಲ್ಲ, ಉಚ್ಚ ನ್ಯಾಯಾಲಯಕ್ಕೆ ಪ್ರಶ್ನಿಸುವ ಬದಲು ರಾಹುಲ ಗಾಂಧಿ ಇವರು ಈ ವಿಷಯದ ಬಗ್ಗೆ ಗಲಾಟೆ ಮಾಡುತ್ತಿದ್ದಾರೆ. ಇದಕ್ಕಾಗಿ ಪ್ರಧಾನಿ ಮೋದಿಯನ್ನು ಹೊಣೆಗಾರರನ್ನಾಗಿ ಮಾಡುತ್ತಿದ್ದಾರೆ. ರಾಹುಲ ಗಾಂಧಿ ಇವರು ಪ್ರಧಾನಮಂತ್ರಿಗಳ ಮೇಲೆ ಆರೋಪ ಮಾಡುವ ಬದಲು ಉಚ್ಚ ನ್ಯಾಯಾಲಯಕ್ಕೆ ಹೋಗಿ ಮೊಕ್ಕಾದಮೆ ದಾಖಲಿಸಬೇಕು.

‘ಶಿಕ್ಷೆ ತಡೆಯಲು ಆಗುವುದಿಲ್ಲ’, ಇಂತಹ ತಪ್ಪು ವಿಷಯವನ್ನು ಕಾಂಗ್ರೆಸ್ ಹಬ್ಬಿಸುತ್ತಿದೆ. ನ್ಯಾಯಾಲಯವು ತಡೆದರೆ ಶಿಕ್ಷೆ ಸ್ಥಾಗಿತಗೊಳಿಸಬಹುದು. ನೀವು ಸಂಸದರೆಂದು ಮುಂದುವರೆಯ ಬೇಕೆಂದರೆ ಮತ್ತು ನೀವು ನ್ಯಾಯಾಲಯಕ್ಕೂ ಕೂಡ ಹೋಗೋದಿಲ್ಲ ಎಂದರೆ, ಇಷ್ಟು ಅಹಂಕಾರ ಎಲ್ಲಿಂದ ಬಂದಿದೆ ? ಈ ಹಿಂದೆ ಲಾಲು ಪ್ರಸಾದ ಯಾದವ, ಜಯಲಲಿತಾ ಮತ್ತು ರಾಶಿದ್ ಅಲ್ವಿ ಇವರಂತಹ ೧೭ ಹಿರಿಯ ನಾಯಕರು ಸಂಸತ್ತಿನ ಸದಸ್ಯತ್ವ ಕಾಂಗ್ರೆಸ್ಸಿನ ಸಮಯದಲ್ಲಿ ಕಳೆದುಕೊಂಡಿದ್ದರು, ಆಗ ಯಾರು ಕೂಡ ಕಪ್ಪು ಬಟ್ಟೆ ಧರಿಸಿ ವಿರೋಧ ಮಾಡಿರಲಿಲ್ಲ ಎಂದು ಹೇಳಿದರು.