‘ರಾಮನವಮಿಯ ಮೆರವಣಿಗೆಯ ಸಮಯದಲ್ಲಿ ಮುಸ್ಲಿಮ ಬಹುಸಂಖ್ಯಾತ ಪ್ರದೇಶದಲ್ಲಿ ದಾಳಿ ಮಾಡಿದರೆ, ಕ್ರಮ ! (ಅಂತೆ) – ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಹಿಂದೂಗಳಿಗೆ ಎಚ್ಚರಿಕೆ ನೀಡಿದ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ !

ನವ ದೆಹಲಿ – ಒಬ್ಬ ರೌಡಿ, ‘ರಾಮನವಮಿಯ ದಿನದಂದು ಯಾವ ಶಸ್ತ್ರ ಕೈಗೆ ಸಿಗುತ್ತದೆ ಅದನ್ನು ತೆಗೆದುಕೊಂಡು ಹೊರಗೆ ಬರುವೆ, ಯಾರು ಏನು ಮಾಡುವರು ನಾನು ನೋಡುತ್ತೇನೆ, ನಿಮ್ಮ ಬಳಿ ಯಾವ ಶಸ್ತ್ರಾಸ್ತ್ರಗಳು ಇದೆ, ಅದನ್ನು ತೆಗೆದುಕೊಳ್ಳಿ, ನಾನು ರಾಮನವಮಿಯ ಮೆರವಣಿಗೆ ತಡೆಯುವುದಿಲ್ಲ; ಆದರೆ ಗಮನದಲ್ಲಿಡಿ ನಾವು ಕೂಡ ಕಾರ್ಯಾಚರಣೆ ಮಾಡುವೇವು. ರಮಜಾನ ತಿಂಗಳು ನಡೆಯುತ್ತಿದೆ. ನೀವು ಏನಾದರು ಮುಸಲ್ಮಾನ ಪ್ರದೇಶದಲ್ಲಿ ಹೋಗಿ ದಾಳಿ ಮಾಡಿದರೆ ನಿಮ್ಮ ಮೇಲೆ ಕ್ರಮ ಕೈಗೊಳ್ಳಲಾಗುವುದು, ಎಂದು ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವರು ರಾಮನವಮಿಯ ಮೆರವಣಿಗೆಯ ಹಿನ್ನೆಲೆಯಲ್ಲಿ ಎಚ್ಚರಿಕೆ ನೀಡಿದರು. ಬಂಗಾಲದಲ್ಲಿ ಹಿಂದೂತ್ವನಿಷ್ಠ ಸಂಘಟನೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರಾಮನವಮಿಯ ಪ್ರಯುಕ್ತ ಮೆರವಣಿಗೆ ನಡೆಯುತ್ತವೆ. ಇದರ ಹಿನ್ನೆಲೆಯಲ್ಲಿ ಅವರು ಎಚ್ಚರಿಕೆ ನೀಡಿದ್ದಾರೆ.

‘ಮೆರವಣಿಗೆ ನಡೆಸುವುದು, ಸಭೆ ತೆಗೆದುಕೊಳ್ಳುವುದು ಎಲ್ಲರ ಹಕ್ಕಾಗಿದೆ; ಆದರೆ ಆ ಸಮಯದಲ್ಲಿ ಗಲಭೆ ನಡೆಸುವ ಅಧಿಕಾರ ಯಾರಿಗೂ ಇಲ್ಲ. ರಾಮನವಮಿಯ ಪೂಜೆ ಶಾಂತಿಯಿಂದ ಮಾಡಿರಿ; ಆದರೆ ರಮಜಾನ ತಿಂಗಳು ನಡೆಯುತ್ತಿದೆ. ಅದರ ಪಾಲನೆ ಮಾಡಿರಿ’, ಎಂದೂ ಸಹ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವರು ಕರೆ ನೀಡಿದರು.

(ಸೌಜನ್ಯ : KADAK)

ಸಂಪಾದಕೀಯ ನಿಲುವು

ಹಿಂದೂಗಳ ಧಾರ್ಮಿಕ ಮೆರವಣಿಗೆ ಮುಸಲ್ಮಾನರ ಪ್ರದೇಶದಿಂದ ಹೋಗಲು ಪೊಲೀಸರು ಮೊದಲೇ ಅನುಮತಿ ನೀಡುವುದಿಲ್ಲ . ಅದರಲ್ಲಿ ಮೆರವಣಿಗೆ ಅಲ್ಲಿಂದ ಹೋದರೆ, ಮುಸಲ್ಮಾನರು ವಾದ್ಯ ನುಡಿಸಲು ಬೀಡುವುದಿಲ್ಲ ಮತ್ತು ಅದನ್ನು ನಿರಾಕರಿಸಿದರೇ, ಮಸೀದಿ, ಮನೆಯ ಛಾವಣಿಯಿಂದ ಹಿಂದೂಗಳ ಮೇಲೆ ಕಲ್ಲುತೂರಾಟ ನಡೆಸುತ್ತಾರೆ. ಇದು ನೈಜ ಸ್ಥಿತಿ ಇರುವಾಗ ಬಂಗಾಲದ ಮುಖ್ಯಮಂತ್ರಿ ಹಿಂದೂಗಳನ್ನೇ ತಪ್ಪಿತಸ್ಥರನ್ನಾಗಿ ಮಾಡಿ ಅವರಿಗೆ ಬೆದರಿಕೆ ನೀಡುತ್ತಾರೆ, ಇದು ಖೇದಕರವಾಗಿದೆ !

ನಿರಂತರವಾಗಿ ಮತಾಂಧರನ್ನು ರಕ್ಷಿಸುತ್ತಾ ಹಿಂದೂಗಳನ್ನು ನಿರ್ಲಕ್ಷಿಸುತ್ತಿರುವ ಮುಖ್ಯಮಂತ್ರಿ, ಬಂಗಾಲದ ಹಿಂದೂಗಳಿಗೆ ಲಭಿಸಿರುವುದು ಇದು ಹಿಂದೂಗಳ ದುರ್ದೈವವೇ ಆಗಿದೆ. ಇದನ್ನು ತಡೆಯಲು ಹಿಂದೂಗಳು ತೃಣಮೂಲ ಕಾಂಗ್ರೆಸ್ ನ ರಾಜಕೀಯ ಅಸ್ತಿತ್ವವನ್ನು ಮುಗಿಸಲು ಪ್ರಯತ್ನಿಸುವುದು ಅವಶ್ಯಕ !