ಜಾಗತಿಕ ಅರ್ಥವ್ಯವಸ್ಥೆಯ ದೃಷ್ಠಿಯಿಂದ ಈ ದಶಕವು ಕೈ ತಪ್ಪಿತು ! – ವಿಶ್ವ ಬ್ಯಾಂಕ

ವಾಶಿಂಗ್‌ಟನ್ (ಅಮೇರಿಕಾ) – ಕರೋನಾ ಮಹಾಮಾರಿ, ರಷ್ಯಾ-ಯುಕ್ರೇನ್ ಘರ್ಷಣೆ ಹಾಗೂ ಅಮೇರಿಕಾ ಮತ್ತು ಯುರೋಪ ಇಲ್ಲಿನ ಆರ್ಥಿಕ ಕ್ಷೇತ್ರದ ಮೇಲೆ ಬಂದಿರುವ ಬಿಕ್ಕಟ್ಟು ಇವು ಇಡಿ ದಶಕದ ಮೇಲೆ ಪರಿಣಾಮ ಬೀರಿದೆ. ಹಾಗಾಗಿ ೨೦೩೦ ರ ತನಕ ಪ್ರತಿವರ್ಷ ಶೇ. ೨.೨ ರಷ್ಟು ಆರ್ಥಿಕ ಬೆಳವಣಿಗೆಯ ಸಾಧ್ಯತೆ ಇದೆ, ಎಂದು ವಿಶ್ವ ಬ್ಯಾಂಕ ಅನುಮಾನ ಮಾಡಿದೆ. ಬ್ಯಾಂಕ್ ನ ಮುಖ್ಯ ಅರ್ಥಶಾಸ್ತ್ರಜ್ಞ ಇಂದರಮಿತ ಗಿಲ್ ಅವರ ಪ್ರಕಾರ, ಜಾಗತಿಕ ಅರ್ಥವ್ಯವಸ್ಥೆಯ ದೃಷ್ಟಿಯಿಂದ ಈ ದಶಕವು ಕೈ ತಪ್ಪಿದೆ !

ವಿಶ್ವ ಬ್ಯಾಂಕ ತನ್ನ ವರದಿಯಲ್ಲಿ,

೧. ಆರ್ಥಿಕ ಬೆಳವಣಿಗೆಯ ಮೇಲಿನ ನಕರಾತ್ಮಕ ಪರಿಣಾಮ ತೀವ್ರವಾದ ಬಡತನ, ಆದಾಯದಲ್ಲಿ ಹೆಚ್ಚುತ್ತಿರುವ ಅಂತರ ಮತ್ತು ಹವಾಮಾನ ಬದಲಾವಣೆಯಂತಹ ಸಮಯದಲ್ಲಿ ಗಂಭೀರವಾಗ ಬಿಕ್ಕಟ್ಟುಗಳನ್ನು ಎದುರಿಸಲು ಒಂದು ಸವಾಲಾಗಿದೆ. ಆರ್ಥಿಕ ಹಿಂಜರಿತ ಉಂಟಾದರೆ ಪರಿಸ್ಥಿತಿ ಇನ್ನಷ್ಟು ಭೀಕರವಾಗಲಿದೆ.

೨. ಜಾಗತಿಕ ವ್ಯಾಪಾರದಲ್ಲಿ ಬೆಳವಣಿಗೆ ಕಡಿಮೆಯಾಗಿದೆ.

೩. ಮುಂದಿನ ೭ ವರ್ಷಗಳಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಸರಾಸರಿ ಒಟ್ಟು ಆಂತರಿಕ ಉತ್ಪನ್ನವು ಶೇಕಡಾ ೪ ರಷ್ಟು ಕುಸಿಯುವ ಸಾಧ್ಯತೆಯಿದೆ. ಕಳೆದ ದಶಕದಲ್ಲಿ ಶೇ.೫ ರಷ್ಟಿದ್ದು, ೨೦೦೦-೧೦ರ ದಶಕದಲ್ಲಿ ಶೇ.೬ ರಷ್ಟಿತ್ತು.

೪. ಹಣದುಬ್ಬರದ ಮೇಲೆ ನಿಯಂತ್ರಣ ಮತ್ತು ಹಣಕಾಸು ಕ್ಷೇತ್ರವನ್ನು ಸ್ಥಿರಗೊಳಿಸಲು ಮತ್ತು ಸಾಲವನ್ನು ಕಡಿಮೆ ಮಾಡಲು ಪ್ರಯತ್ನಿಸಿದರೆ, ಜಾಗತಿಕ ಆರ್ಥಿಕ ಬೆಳವಣಿಗೆಯು ಕನಿಷ್ಠ ಶೇ. ೨.೯ ರಷ್ಟು ತಲುಪುತ್ತದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.