ಬೇಲೂರು ರಥೋತ್ಸವ : ಊರುಸ್‌ ಅಥವಾ ರಂಜಾನ್ ನಲ್ಲಿ ಎಂದಾದರೂ ಭಗವದ್ಗೀತೆ ಪಠಣ ಆಗಿದೆಯಾ ? – ಹಿಂದೂ ಜನಜಾಗೃತಿ ಸಮಿತಿ

ಶ್ರೀ. ಗುರುಪ್ರಸಾದ ಗೌಡ

ಬೇಲೂರು : ‘ಇತಿಹಾಸ ಪ್ರಸಿದ್ಧ ಬೇಲೂರು ಚೆನ್ನಕೇಶ್ವರ ದೇವಾಲಯದಲ್ಲಿ ತಲೆಮಾರುಗಳಿಂದ ರಥೋತ್ಸವ ನಡೆದು ಬರುತ್ತಿದೆ. ಆದರೆ ಈ ಸಾಂಪ್ರದಾಯಿಕ ರಥೋತ್ಸವದಲ್ಲಿ ಕೆಲವೇ ದಶಕಗಳ ಹಿಂದೆ ಈ ವೇಳೆ ಕುರಾನ್ ಪಠಣ ಮಾಡುವ ಅಯೋಗ್ಯ ವಾಡಿಕೆಯನ್ನು ತುರುಕಿಸಲಾಗಿದೆ. ಇದೊಂದು ಸುಳ್ಳು ಸಂಪ್ರದಾಯವಾಗಿದ್ದು ಹಿಂದೂ ಜನಜಾಗೃತಿ ಸಮಿತಿ ಇದನ್ನು ಖಂಡಿಸುತ್ತದೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿದ ಶ್ರೀ. ಗುರುಪ್ರಸಾದ ಗೌಡರವರು, `ಚನ್ನಕೇಶವ ದೇವರಿಗೆ ಕುರಾನ್ ಪಠಣದ ಅಗತ್ಯವಿಲ್ಲ ಎಂದು ವೈದ್ಯ ಡಾಕ್ಟರ್ ರಮೇಶರವರು ಇತ್ತೀಚಿನ ಅವರ ‘ಬೇಲೂರು ಶ್ರೀ ಚನ್ನಕೇಶವನಿಗೆ ಬೇಕಿಲ್ಲ ಕುರಾನ್ ಪಠಣ’ ಪುಸ್ತಕದಲ್ಲಿ ಬರೆದಿದ್ದಾರೆ. ಹಿಂದೂಗಳ ದೇವಸ್ಥಾನಗಳಲ್ಲಿ ಯಾವ ಆಚರಣೆಗಳು ಇರಬೇಕು ಮತ್ತು ಯಾವ ಆಚರಣೆಗಳು ಇರಬಾರದು ಇದನ್ನು ನಿರ್ಧರಿಸುವ ಅಧಿಕಾರ ಹಿಂದೂ ಭಕ್ತಾದಿಗಳ ಕೈಯಲ್ಲಿದೆ, ಯಾವುದಾದರೂ ಊಡುಸ್‌, ರಂಜಾನ್ ಸಮಯದಲ್ಲಿ ಭಗವದ್ಗೀತೆ ಪಠಣ ಮಾಡುವುದು ನೋಡಿದ್ದೀರಾ ? ಹಿಂದೂ ಸಮಾಜವು ಈಗ ಜಾಗೃತವಾಗುತ್ತಿದೆ, ಆದ್ದರಿಂದ ಯಾರೋ ಹಾಕಿರುವ ಈ ಅಯೋಗ್ಯ ಪದ್ಧತಿಯನ್ನು ಹಿಂದೂ ಸಮಾಜವು ಇನ್ನು ಸಹಿಸುವುದಿಲ್ಲ, ಈ ಬಾರಿ ಏಪ್ರಿಲ್ ನಲ್ಲಿ ನಡೆಯಲಿರುವ ಬೇಲೂರಿನ ರಥೋತ್ಸವದ ಸಮಯದಲ್ಲಿ ಯಾವುದೇ ಕಾರಣಕ್ಕೂ ಕುರಾನ್ ಪಠಣಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದ್ದಾರೆ.