ಪಂಢರಪುರದ ಶ್ರೀ ವಿಠ್ಠಲ್-ರುಕ್ಮಿಣಿ ದೇವಸ್ಥಾನದ ಪ್ರದೇಶದಲ್ಲಿ ಚೈತ್ರ ಯಾತ್ರೆಯ ಸಮಯದಲ್ಲಿ ತೆಂಗಿನಕಾಯಿ ಮಾರಾಟ ಮತ್ತು ಬೆಳೆಯುವುದು ನಿಷೇಧ !

ಪಂಢರಪುರ – ತೆಂಗಿನ ಎಲೆಗಳು ದೇವಸ್ಥಾನದ ಪರಿಸರದಲ್ಲಿ ಹಾಕಿದ್ದರಿಂದ ಹಾಗೂ ತೆಂಗಿನಕಾಯಿ ಒಡೆದಿದ್ದರಿಂದ ಕೆಸರಾಗುವ ಸಾಧ್ಯತೆ ಇರುವುದರಿಂದ ಭಕ್ತಾದಿಗಳು ಜಾರಿ ಯಾವುದೇ ಅನಾಹುತ ಸಂಭವಿಸದಂತೆ ಆಡಳಿತ ಮಂಡಳಿಯು ಕ್ರಿಮಿನಲ್ ಕೋಡ್ ಸೆಕ್ಷನ್ ೧೪೪ರ ಅಡಿಯಲ್ಲಿ ಎಪ್ರಿಲ್ ೧ ರಿಂದ ೩ ರವರೆಗೆ ದೇವಸ್ಥಾನ ಮತ್ತು ಪರಿಸರದಲ್ಲಿ ತೆಂಗಿನಕಾಯಿ ಬೆಳೆಯುವುದು ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಿದೆ. ಉಪವಿಭಾಗ ಅಧಿಕಾರಿ ಗಜಾನನ ಗುರವ ಇವರು ಈ ಆದೇಶ ಹೊರಡಿಸಿದ್ದಾರೆ.

ಇದರೊಂದಿಗೆ ಯಾತ್ರೆಯ ವೇಳೆ ಪಂಢರಪುರದಲ್ಲಿ ಮಾಂಸ ಮತ್ತು ಕುರಿ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ ಮತ್ತು ಪ್ರಾಣಿ ಹತ್ಯೆಯನ್ನು ನಿಷೇಧಿಸಲಾಗಿದೆ. ಉಪವಿಭಾಗಾಧಿಕಾರಿ ಗಜಾನನ ಗುರವ ಅವರು ಈ ಆದೇಶ ಹೊರಡಿಸಿದ್ದಾರೆ. (ದೇಗುಲ, ತೀರ್ಥಕ್ಷೇತ್ರಗಳ ಪರಿಸರದಲ್ಲಿ ಕೇವಲ ಯಾತ್ರೆಯ ಸಂದರ್ಭದಲ್ಲಿ ಮಾತ್ರ ಮಾಂಸ ಮತ್ತು ಕುರಿ ಮಾಂಸ ಮಾರಾಟವನ್ನು ನಿಷೇಧಿಸಬೇಕು ಹಾಗೆಯೇ ಪ್ರಾಣಿ ಹತ್ಯೆ ನಿರ್ಬಂಧ ಎಕೆ ? ವಾಸ್ತವವಾಗಿ ಈ ನಿಷೇಧ ವರ್ಷವಿಡೀ ಇರಬೇಕು ! – ಸಂಪಾದಕರು)

ಸಂಪಾದಕೀಯ ನಿಲುವು

ದೇವಸ್ಥಾನ ಸರಕಾರಿಕಣದ ದುಷ್ಪರಿಣಾಮ !

ಇಲ್ಲಿಯವರೆಗೆ, ಯಾವುದೇ ಯಾತ್ರೆಯ ಸಮಯದಲ್ಲಿ ತೆಂಗಿನಕಾಯಿಯನ್ನು ಬೆಳೆಸುವುದರಿಂದ ಕೆಸರು ತುಂಬಿ ಭಕ್ತರು ಗಾಯಗೊಂಡ ಬಗ್ಗೆ ಸುದ್ಧಿ ಇಲ್ಲ !

ಅನ್ಯ ಧರ್ಮೀಯರ ಹಬ್ಬ ಹರಿದಿನಗಳಲ್ಲಿ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವ ಧೈರ್ಯವನ್ನು ಆಡಳಿತದವರು ತೋರುವರೆ ?