ಖಲಿಸ್ತಾನಿ ‘ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ’ಯ ಎಚ್ಚರಿಕೆ

  • ’24 ಗಂಟೆಗಳ ಒಳಗೆ ಅಮೃತಪಾಲ್ ನ ಸಹಚರರನ್ನು ಮುಕ್ತಗೊಳಿಸಿ !’ (ಅಂತೆ)

  • ಬಿಡುಗಡೆ ಮಾಡದಿದ್ದರೆ ಹಳ್ಳಿ ಹಳ್ಳಿಗೆ ತೆರಳಿ ಸರಕಾರದ ವಿರುದ್ಧ ಜನಜಾಗೃತಿ ಮೂಡಿಸಿ, ನ್ಯಾಯಾಲಯದಲ್ಲಿ ಅರ್ಜಿಯನ್ನೂ ಸಲ್ಲಿಸುತ್ತೇವೆ !

ಅಮೃತಪಾಲ್ ಸಿಂಗ್ ಮತ್ತು ಅವರ ಸಹಾಯಕರಿಗೆ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿಯಿಂದ ಬೆಂಬಲ

ನವ ದೆಹಲಿ – ಸ್ವತಂತ್ರ ಖಲಿಸ್ತಾನದ ಬೆಂಬಲಿಗ ಮತ್ತು ‘ವಾರಿಸ್ ಪಂಜಾಬ್ ದೇ’ ಸಂಘಟನೆಯ ಮುಖ್ಯಸ್ಥ ಅಮೃತಪಾಲ್ ನ ಸಹಚರರನ್ನು 24 ಗಂಟೆಗಳ ಒಳಗೆ ಬಿಡುಗಡೆ ಮಾಡುವಂತೆ ’ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ’ಯ ಮುಖ್ಯಸ್ಥ ಹರ್ಜಿಂದರ್ ಸಿಂಗ್ ಧಾಮಿಯು ಪಂಜಾಬ್ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಹಾಗೆ ಮಾಡದೇ ಇದ್ದಲ್ಲಿ ಹಳ್ಳಿ ಹಳ್ಳಿಗೆ ತೆರಳಿ ಸರಕಾರದ ವಿರುದ್ಧ ಜನಜಾಗೃತಿ ಮೂಡಿಸಲಾಗುವುದು. ’ಬಂಧಿತರ ಕುಟುಂಬಗಳು ನನ್ನನ್ನು ಸಂಪರ್ಕಿಸಬೇಕು, ನಾನು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುತ್ತೇನೆ’ ಎಂದು ಧಾಮಿ ಹೇಳಿದರು. ಇಲ್ಲಿಯವರೆಗೆ, ಪಂಜಾಬ್ ಪೊಲೀಸರು 200 ಕ್ಕೂ ಹೆಚ್ಚು ಖಲಿಸ್ತಾನಿ ಬೆಂಬಲಿಗರನ್ನು ಬಂಧಿಸಿದ್ದಾರೆ ಅಥವಾ ವಶಕ್ಕೆ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಧಾಮಿ, ಅಮೃತಪಾಲ್ ವಿರುದ್ಧ ರಾಷ್ಟ್ರೀಯ ಸುದ್ದಿ ವಾಹಿನಿಗಳು ಅಯೋಗ್ಯ ರೀತಿಯಲ್ಲಿ ವರದಿ ಮಾಡಿವೆ. ಈ ಮೂಲಕ ಸಿಕ್ಖರನ್ನು ಅವಮಾನಿಸುವ ಸಂಚು ರೂಪಿಸಲಾಗಿದೆ. ಹಾಗಾಗಿ ರಾಷ್ಟ್ರೀಯ ಸುದ್ದಿ ವಾಹಿನಿಗಳ ವಿರುದ್ಧವೂ ನಾವು ಕಾನೂನು ಕ್ರಮ ಜರುಗಿಸಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.

ಸಂಪಾದಕರ ನಿಲುವು

ಈಗ ‘ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ’ಯ ಮುಖ್ಯಸ್ಥರನ್ನೂ ಹತೋಟಿಗೆ ತರಬೇಕಾಗಿದೆ !