ಸಿ.ಬಿ.ಐ. ಕಚೇರಿಯ ನಾಲ್ಕನೇ ಮಹಡಿಯಿಂದ ಹಾರಿ ಅಧಿಕಾರಿಯ ಆತ್ಮಹತ್ಯೆ !

  • ಲಂಚ ಪ್ರಕರಣದಲ್ಲಿ ಬಂಧಿಸಲಾಗಿತ್ತು

  • ಬಿಶ್ನೋಯಿ ಸಮಾಜದ ಜನರಿಂದ ಸಿ.ಬಿ.ಐ. ದಳದವರ ಮೇಲೆ ದಾಳಿ

ಜವರಿಮಲ ಬಿಶ್ನೋಯಿ

ರಾಜಕೋಟ (ಗುಜರಾತ) – ೫ ಲಕ್ಷ ರೂಪಾಯಿಗಳ ಲಂಚವನ್ನು ಸ್ವೀಕರಿಸುತ್ತಿರುವಾಗ ಕೇಂದ್ರೀಯ ತನಿಖಾ ದಳದವರು ಬಂಧಿಸಿದ್ದ ಕೇಂದ್ರ ಅಧಿಕಾರಿ ಜವರಿಮಲ ಬಿಶ್ನೋಯಿ (ವಯಸ್ಸು ೪೪ ವರ್ಷ) ಆತ್ಮಹತ್ಯೆ ಮಾಡಿಕೊಂಡನು. ಬಿಶ್ನೋಯಿ ವಿದೇಶ ವ್ಯವಹಾರ ಇಲಾಖೆಯಲ್ಲಿ ಸಹಾಯಕ ನಿರ್ದೇಶಕನಾಗಿದ್ದನು. ಸಿ.ಬಿ.ಐ. ಕಚೇರಿಯಲ್ಲಿ ಆತನ ವಿಚಾರಣೆ ನಡೆದಿರುವಾಗ ನಾಲ್ಕನೇ ಮಹಡಿಯ ಕಿಟಕಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡನು. ಜವರಿಮಲ ಬಿಶ್ನೋಯಿಯ ಸಾವಿನ ವಿಷಯ ತಿಳಿಯುತ್ತಲೇ ಬಿಶ್ನೋಯಿ ಸಮಾಜದ ಜನರು ಆಸ್ಪತ್ರೆಯ ಹೊರಗೆ ಸಿಬಿಐ ದಳದ ಮೇಲೆ ದಾಳಿ ನಡೆಸಿದರು. ಈ ಘಟನೆ ಮಾರ್ಚ ೨೬ ರಂದು ನಡೆದಿದೆ.

ಸಿ.ಬಿ.ಐ. ಅಧಿಕಾರಿಗಳ ತಂಡ ಬಿಶ್ನೋಯಿಯ ರಾಜಕೋಟ ನಿವಾಸಕ್ಕೆ ಹೋದಾಗ ಆತನ ಸಂಬಂಧಿಕರು ನೋಟುಗಳ ಕೆಲವು ಕಂತೆಗಳನ್ನು ಕಟ್ಟಿ ಮನೆಯಿಂದ ಹೊರಗೆ ಎಸೆದಿದ್ದರು. ಸಿ.ಬಿ.ಐ. ಆ ಕಂತೆಗಳನ್ನು ವಶಪಡಿಸಿಕೊಂಡಿದೆ.