ಭಗವಂತನು ಕೊಟ್ಟ ದೇಹವು ಅಮೂಲ್ಯವಾಗಿದೆ, ಎಂಬ ಅರಿವಿಟ್ಟು ಅದನ್ನು ಆರೋಗ್ಯವಾಗಿಡಲು ಪ್ರಯತ್ನಿಸಬೇಕು !

‘ನಿಮಗೆ ಯಾರಾದರೂ, ‘ನಿಮ್ಮ ಎರಡೂ ಕೈಗಳನ್ನು ಕತ್ತರಿಸಿ ಕೊಡಿ. ನಿಮಗೆ ೨ ಕೋಟಿ ರೂಪಾಯಿಗಳನ್ನು ಕೊಡುತ್ತೇನೆ’, ಎಂದು ಹೇಳಿದರೆ, ನೀವು ಹಾಗೆ ಮಾಡುತ್ತೀರಾ ? ಇನ್ಯಾರಾದರು, ‘ನಿಮ್ಮ ಎರಡೂ ಕಾಲುಗಳನ್ನು ಕತ್ತರಿಸಿ ಕೊಡಿ. ನಿಮಗೆ ಇನ್ನೂ ೨ ಕೋಟಿ ರೂಪಾಯಿಗಳನ್ನು ಕೊಡುತ್ತೇನೆ’, ಎಂದು ಹೇಳಿದರೆ ನೀವು ಕೊಡುತ್ತೀರಾ ? ಎರಡೇ ಏಕೆ, ‘೧೦ ಕೋಟಿ ರೂಪಾಯಿಗಳನ್ನು ಕೊಡುತ್ತೇನೆ’, ಎಂದು ಹೇಳಿದರೂ, ನೀವು ಹಾಗೆ ಮಾಡುವುದಿಲ್ಲ. ನಮ್ಮ ದೇಹಕ್ಕೆ ಹಣದಿಂದ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಅಷ್ಟೊಂದು ಅಮೂಲ್ಯ ದೇಹವನ್ನು ದೇವರು ನಮಗೆ ಉಚಿತವಾಗಿ ನೀಡಿದ್ದಾನೆ, ಈ ಕುರಿತು ಸತತವಾಗಿ ಮನದಲ್ಲಿ ಕೃತಜ್ಞತೆಯನ್ನಿಟ್ಟು ನಾವು ದೇಹವನ್ನು ಆರೋಗ್ಯವಾಗಿಡಲು ಪ್ರಯತ್ನಿಸಬೇಕು.

ಮುಂದಿನ ಪ್ರಯತ್ನಗಳನ್ನು ನಿಯಮಿತವಾಗಿ ಮಾಡಬೇಕು –

೧. ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳಬೇಕು.

೨. ಪ್ರತಿದಿನ ಬೆಳಗ್ಗೆ ಕಡಿಮೆಪಕ್ಷ ಅರ್ಧ ಗಂಟೆ ವ್ಯಾಯಾಮವನ್ನು ಮಾಡಬೇಕು.

೩. ಚೆನ್ನಾಗಿ ಹಸಿವಾದಾಗಲೇ ಆಹಾರವನ್ನು ಸೇವಿಸಬೇಕು.’

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೨.೧.೨೦೨೩)