ಮೋರೇನಾ (ಮಧ್ಯ ಪ್ರದೇಶ)ದಲ್ಲಿನ ಸೇಂಟ್ ಮೇರಿ ಶಾಲೆಯ ಮುಖ್ಯೋಪಾಧ್ಯಾಯರ ಕೋಠಡಿಯಲ್ಲಿ ಆಕ್ಷೇಪಾರ್ಹ ವಸ್ತುಗಳು ಪತ್ತೆ !

  • ಮದ್ಯದ ೧೯ ಬಾಟಲಿಗಳು, ಮಹಿಳೆಯರ ಒಳುಡುಪುಗಳು ಮತ್ತು ’ಕಾಂಡೊಮ್’ ಪ್ಯಾಕೆಟಗಳು ವಶ !

  • ಶಾಲೆಗೆ ಬೀಗ ಮುದ್ರೆ !

  • ಮುಖ್ಯೋಪಾಧ್ಯಾಯ ಫಾದರ್ ಡಾಯನೋಸಿಯಸ್ ಆರ್.ಬಿ. ಇವರಿಂದ ಉಡಾಫೆಯ ಉತ್ತರಗಳು !

ಮುಖ್ಯೋಪಾಧ್ಯಾಯಿನಿ ಫಾದರ್ ಡಿನೋಸಿಯಸ್ ಆರ್.ಬಿ. (ಎಡ) ಪೊಲೀಸ್ ಮತ್ತು ಮಕ್ಕಳ ರಕ್ಷಣಾ ಆಯೋಗದ ತಂಡ (ಬಲ)

ಭೋಪಾಲ್ (ಮಧ್ಯಪ್ರದೇಶ) – ರಾಜ್ಯದ ಮೋರೆನಾದಲ್ಲಿ ’ಸೇಂಟ್ ಮೇರಿ’ ಹೆಸರಿನ ಕ್ರೈಸ್ತ ಶಾಲೆಯಲ್ಲಿ ಮುಖ್ಯೋಪಾಧ್ಯಾಯ ಫಾದರ್ ಡಯನೋಸಿಯಸ್ ಆರ್.ಬಿ. ಮತ್ತು ವ್ಯವಸ್ಥಾಪಕರ ಕೊಠಡಿಯಿಂದ ವಿದೇಶಿ ಮದ್ಯದ ೧೯ ಬಾಟಲಿಗಳು, ಮಹಿಳೆಯರ ಒಳುಡುಪುಗಳು ಮತ್ತು ’ಕಾಂಡೊಮ್’ ಪ್ಯಕೆಟಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರದ ಪ್ರಸಿದ್ಧ ಶಾಲೆಗಳಲ್ಲಿ ಒಂದಾಗಿರುವ ಈ ಶಾಲೆಯ ಪರಿಶೀಲನೆ ಮಾಡುವುದಕ್ಕಾಗಿ ಬಾಲ ಸಂರಕ್ಷಣಾ ಆಯೋಗದ ತಂಡ ಅಲ್ಲಿಗೆ ತಲುಪಿತ್ತು. ಆಗ ಈ ಅಕ್ಷೇಪಾರ್ಹ ವಸ್ತುಗಳು ದೊರೆತಿವೆ. ಪ್ರಕರಣ ಬೆಳಕಿಗೆ ಬಂದ ನಂತರ ಜಿಲ್ಲಾಧಿಕಾರಿಗಳು ಶಾಲೆ ಮುಚ್ಚುವ ಆದೇಶ ನೀಡಿದ್ದಾರೆ. ಶಾಲೆಗೆ ಬೀಗ ಮುದ್ರೆ ಹಾಕಲಾಗಿದ್ದು ಈ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

೧. ತನಿಖೆ ಸಮಯದಲ್ಲಿ ಮಧ್ಯಪ್ರದೇಶದ ಬಾಲ ಸಂರಕ್ಷಣಾ ಆಯೋಗದ ಸದಸ್ಯೆ ನಿವೇದಿತಾ ಶರ್ಮಾ ಮತ್ತು ಜಿಲ್ಲಾಧಿಕಾರಿ ಏ.ಕೆ. ಪಾಠಕ ಉಪಸ್ಥಿತರಿದ್ದರು.

೨. ಕಾರ್ಯಚರಣೆಯ ನಂತರ ಹಿಂದೂ ಜಾಗರಣ ಮಂಚ್‌ನ ಕಾರ್ಯಕರ್ತರು ಶಾಲೆಯ ಹೊರಗೆ ಪ್ರತಿಭಟನೆ ನಡೆಸಿದರು.

೩. ಈ ಪ್ರಕರಣದಲ್ಲಿ ಮುಖ್ಯೋಪಾಧ್ಯಾಯ ಫಾದರ್ ಡಾಯನೋಸಿಯಸ್ ಆರ್.ಬಿ. ಇವರು, ಶಾಲೆಯಲ್ಲಿ ಮದ್ಯದ ಬಾಟಲಿಗಳು ಯಾರೋ ಶಿಕ್ಷಕರು ತಂದಿರಬಹುದು. ಕಾಂಡೋಮ ಪ್ಯಕೆಟ್‌ಗಳು ಹೇಗೆ ಬಂತು, ಇದು ನನಗೆ ತಿಳಿದಿಲ್ಲ, ಎಂದು ಹೇಳಿದರು.

ಶಾಲೆಯ ಮಾನ್ಯತೆ ರದ್ದುಗೊಳಿಸಲು ಅರ್ಜಿ ಸಲ್ಲಿಸಲಾಗುವುದು ! – ಬಾಲ ಸಂರಕ್ಷಣಾ ಆಯೋಗ

ಈ ಸಂದರ್ಭದಲ್ಲಿ ಪ್ರಸಾರ ಮಾಧ್ಯಮಗಳ ಜೊತೆ ಮಾತನಾಡುವಾಗ ನಿವೇದಿತಾ ಶರ್ಮ ಇವರು, ಈ ಶಾಲೆಯಲ್ಲಿ ಚರ್ಚ್ ಕೂಡ ಇದೆ, ಶಾಲೆಯ ಪರಿಸರದಲ್ಲಿ ಸಿಸಿಟಿವಿ ಅಳವಡಿಸಿದ್ದರು ಕೂಡ, ಯಾವ ಕೊಠಡಿಯಲ್ಲಿ ಮದ್ಯದ ಬಾಟಲಿಗಳು ಮತ್ತು ಅಕ್ಷೆಪಾರ್ಹ ವಸ್ತುಗಳು ದೊರೆತಿವೆಯೋ, ಆ ಸ್ಥಳದಲ್ಲಿ ಅವು ಇರಲಿಲ್ಲ. ಹಾಗೂ ಒಬ್ಬ ವ್ಯಕ್ತಿಗೆ ವಾಸಿಸುವುದಕ್ಕಾಗಿ ೭ ಕೋಣೆಗಳ ಅವಶ್ಯಕತೆ ಏಕೆ ಇರುತ್ತದೆ ? ಈ ಸ್ಥಳದಲ್ಲಿ ೧೨ ಮಂಚ ಹಾಗೂ ಅಡುಗೆಮನೆ ಕೂಡ ಇದೆ. ಇಲ್ಲಿ ಮುಖ್ಯೋಪಾಧ್ಯಾಯ ಮತ್ತು ವ್ಯವಸ್ಥಾಪಕರ ವಾಸ್ತವ್ಯವೂ ಇದೆ. ಈ ಪ್ರಕರಣದಲ್ಲಿ ಶಾಲೆಯ ಮಾನ್ಯತೆ ರದ್ದಗೊಳಿಸುವುದಕ್ಕಾಗಿ ಆಯೋಗವು ಜಿಲ್ಲಾಧಿಕಾರಿಗಳಿಗೆ ವರದಿ ಪ್ರಸ್ತುತಪಡಿಸುವವರಿದ್ದಾರೆ.

ಸಂಪಾದಕರ ನಿಲುವು

ಹಿಂದೂಗಳೇ, ಮಿಶನರಿ ಶಾಲೆಯ ನಿಜ ಸ್ವರೂಪ ತಿಳಿದುಕೊಳ್ಳಿ ! ಈ ಹಿಂದೆ ಕೂಡ ಮಿಶನರಿ ಶಾಲೆಯಲ್ಲಿನ ದುರ್ವ್ಯವಹಾರ ಬೆಳಕಿಗೆ ಬಂದಿದೆ. ಇಂತಹ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಯಾವ ರೀತಿಯ ಶಿಕ್ಷಣ ನೀಡಲಾಗುತ್ತಿರಬಹುದು, ಇದರ ಯೋಚನೆ ಮಾಡದೇ ಇರುವುದೆ ಒಳಿತು !