ಇಸ್ಲಾಮಾಬಾದ್ – ಪಾಕಿಸ್ತಾನ ಸೇನೆಯು ಹಿರಿಯ ಸೇನಾ ಅಧಿಕಾರಿಗಳ ಪರಿಷತ್ತನ್ನು ಆಯೋಜಿಸಿದೆ. ಇದರಲ್ಲಿ ದೇಶದ ಕುಸಿಯುತ್ತಿರುವ ಆರ್ಥಿಕತೆ ಮತ್ತು ಅಸ್ಥಿರ ರಾಜಕೀಯ ಬಿಕ್ಕಟ್ಟಿನ ಕುರಿತು ಚರ್ಚೆ ನಡೆಯಲಿದೆ. ಕೆಲವು ರಾಜಕೀಯ ತಜ್ಞರ ಪ್ರಕಾರ, ಪಾಕಿಸ್ತಾನ ಸರಕಾರ ಮತ್ತು ಸೇನೆಯ ನಡುವಿನ ಬಿರುಕು ಹೆಚ್ಚುತ್ತಿದೆ. ಅವರ ನಡುವೆ ಹೆಚ್ಚುತ್ತಿರುವ ಸಂಘರ್ಷವನ್ನು ಪರಿಗಣಿಸಿ, ಸೇನೆಯು ಪಾಕಿಸ್ತಾನದಲ್ಲಿ ನಾಲ್ಕನೇ ಬಾರಿಗೆ ಅಧಿಕಾರವನ್ನು ವಶಪಡಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಅಂತರಾಷ್ಟ್ರೀಯ ಹಣಕಾಸು ನಿಧಿಯಿಂದ ಪಾಕಿಸ್ತಾನ ಆರ್ಥಿಕ ನೆರವು ಪಡೆಯಲು ಬಯಸಿದರೆ ಅವರು ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ. ಅದರಲ್ಲಿ ಸೇನೆಯ ಮೇಲಿನ ವೆಚ್ಚವನ್ನು ಕಡಿಮೆ ಮಾಡುವ ಬಗ್ಗೆ ಇದೆ. ಇದರ ಪ್ರಕಾರ ಪಾಕಿಸ್ತಾನ ಸರಕಾರ ಬಜೆಟ್ ನಲ್ಲಿ ಸೇನೆಯ ಮೇಲಿನ ವೆಚ್ಚವನ್ನು ಕಡಿಮೆ ಮಾಡಲು ಹೊರಟಿದೆ. ಇದು ಪಾಕಿಸ್ತಾನದ ಸೇನೆಗೆ ಅಸಮಾಧಾನ ತಂದಿದೆ.