ಪೊಲೀಸರಿಗೆ ಕೊಲೆಗಾರರ ಸುಳಿವು ನೀಡಿದ ಗಿಳಿ !

2 ಹಂತಕರಿಗೆ ಜೀವಾವಧಿ ಶಿಕ್ಷೆ !

ಆಗ್ರಾ (ಉತ್ತರಪ್ರದೇಶ) – ಇಲ್ಲಿ ೯ ವರ್ಷಗಳ ಹಿಂದೆ ನಡೆದಿರುವ ಮಹಿಳೆಯ ಕೊಲೆ ಪ್ರಕರಣದಲ್ಲಿ ನ್ಯಾಯಾಧೀಶ ಮಹಮ್ಮದ್ ರಶೀದ್ ಇವರು ಆಶುತೋಷ ಗೋಸ್ವಾಮಿ ಮತ್ತು ರಾನಿ ಮೆಸಿ ಇವರನ್ನು ತಪ್ಪಿತಸ್ಥರೆಂದು ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. (‘೯ ವರ್ಷಗಳ ನಂತರ ಸಿಕ್ಕಿರುವ ನ್ಯಾಯ ಇದು ಅನ್ಯಾಯ’, ಎಂದು ಯಾರಿಗಾದರೂ ಅನಿಸಿದರೆ ತಪ್ಪೇನು ಇಲ್ಲ ? – ಸಂಪಾದಕರು) ಇದರ ಜೊತೆಗೆ ತಪ್ಪಿತಸ್ಥರಿಗೆ ೭೨ ಸಾವಿರ ರೂಪಾಯಿಯ ದಂಡ ಕೂಡ ವಿಧಿಸಿದ್ದಾರೆ. ಹಂತಕರು ಮಹಿಳೆಯ ಜೊತೆಗೆ ಆಕೆಯ ಸಾಕಿರುವ ನಾಯಿಯ ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಮೃತಪಟ್ಟ ಮಹಿಳೆಯ ಮನೆಯಲ್ಲಿನ ಸಾಕಿರುವ ಗಿಳಿಯ ಸಾಕ್ಷಿಯ ಮೇರೆಗೆ ಕೊಲೆಗಾರರವರೆಗೆ ತಲುಪಿದ್ದಾರೆ. ಈ ಹತ್ಯೆಯಲ್ಲಿನ ಒಬ್ಬ ಅಪರಾಧಿ ಮಹಿಳೆಯ ಸಂಬಂಧಿಕನಾಗಿದ್ದಾನೆ.

೧. ಪೊಲೀಸರು ಹಂತಕರನ್ನು ಹುಡುಕುವ ಪ್ರಯತ್ನ ಮಾಡಿದರು; ಆದರೆ ಅವರಿಗೆ ಯಾವುದೇ ಸುಳಿವು ಸಿಗಲಿಲ್ಲ.

೨. ಪೊಲೀಸರು ತನಿಖೆಗಾಗಿ ಮೃತ ಮಹಿಳೆಯ ಮನೆಗೆ ತಲುಪಿದರು ಆಗ ಪಂಜರದಲ್ಲಿರುವ ‘ಮಿಟುರಾಜ’ ಹೆಸರಿನ ಗಿಳಿ ‘ಆಶು ಬಂದಿದ್ದನು’ ಎಂದು ಹೇಳಿತು. ಈ ಹೆಸರು ಕೇಳುತ್ತಲೇ ಎಲ್ಲರಿಗೂ ಆಘಾತವಾಯಿತು. ‘ಈ ವ್ಯಕ್ತಿ ಹತ್ಯೆ ಮತ್ತು ದರೋಡೆ ಮಾಡಬಹುದು’, ಇದರ ಮೇಲೆ ಯಾರಿಗೂ ವಿಶ್ವಾಸವೆ ಆಗಲಿಲ್ಲ; ಏಕೆಂದರೆ ಕೊಲೆಗಾರ ಆಶುತೋಷ ಇವನು ಮೃತ ನೀಲಿಮನ ಗಂಡ ವಿಜಯ ಶರ್ಮಾ ಇವರ ಸೋದರ ಸಂಬಂಧಿಯಾಗಿದ್ದ.

೩. ಅದರ ನಂತರ ನೀಲಮ ಶರ್ಮ ಇವರ ಪತಿ ಗಿಳಿಯ ಜೊತೆ ಮಾತನಾಡಿದರು, ಆಗ ಗಿಳಿ ಮತ್ತೆ ‘ಆಶು ಬಂದಿದ್ದನ್ನು’ ಎಂದು ಹೇಳಿತು. ಶರ್ಮಾ ಇವರು ಈ ಮಾಹಿತಿ ಪೊಲೀಸರಿಗೆ ನೀಡಿದರು. ಇದರ ನಂತರ ಪೊಲೀಸರು ಆಶುತೋಷ ಮತ್ತು ರಾನಿ ಇವರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದರು. ಈ ತನಿಖೆಯಲ್ಲಿ ಹತ್ಯೆಯ ರಹಸ್ಯ ಬಯಲಾಯಿತು.