ಮ. ಗಾಂಧಿ ಇವರ ಬಳಿ ಯಾವುದೇ ಪದವಿ ಇರಲಿಲ್ಲ !

ಜಮ್ಮು ಕಾಶ್ಮೀರದ ಉಪರಾಜ್ಯಪಾಲ ಮನೋಜ ಸಿಂಹ ಇವರ ದಾವೆ

ಗ್ವಾಲ್ಹೆರ್ (ಮಧ್ಯಪ್ರದೇಶ) – ನಿಮ್ಮಲ್ಲಿ ಅನೇಕರಿಗೆ ಅನಿಸುತ್ತದೆ, ಮ. ಗಾಂಧಿ ಇವರ ಬಳಿ ಕಾನೂನಿನ ಪದವಿ ಇತ್ತು; ಆದರೆ ಅದು ಸತ್ಯವಲ್ಲ. ಅವರ ಬಳಿ ಯಾವುದೇ ಪದವಿ ಇರಲಿಲ್ಲ. ಅವರ ಶಿಕ್ಷಣ ಕೇವಲ ಮಾಧ್ಯಮಿಕ ಶಾಲೆಯವರೆಗೆ ಆಗಿತ್ತು; ಆದರೆ ‘ಅವರು ಅಶಿಕ್ಷಿತರಿದ್ದರು’ ಎಂದು ಯಾರು ಹೇಳುವುದಿಲ್ಲ. ಅವರ ಬಳಿ ಕಾನೂನಿನ ಪದವಿ ಇರಲಿಲ್ಲ, ಆದರೆ ಕಾನೂನಿನ ಅಧ್ಯಯನ ಮಾಡುವ ಯೋಗ್ಯತೆ ಅವರಲ್ಲಿ ಇತ್ತು. ಶಿಕ್ಷಣ ಅಲ್ಪವಾಗಿದ್ದರೂ ಕೂಡ ಅವರು ರಾಷ್ಟ್ರಪಿತ ಆದರು. ಆದ್ದರಿಂದ ‘ಕೇವಲ ಪದವಿ ಪಡೆಯುವುದು ಎಂದರೆ ಶಿಕ್ಷಣ ಪಡೆಯುವುದು ‘ಹೇಗೆ ಆಗುವುದಿಲ್ಲ, ಎಂದು ಜಮ್ಮು ಕಾಶ್ಮೀರಿನ ಉಪರಾಜಪಾಲರಾದ ಮನೋಜ ಸಿಂಹ ಇವರು ಐ.ಟಿ.ಎಂ. ವಿದ್ಯಾಪೀಠದಲ್ಲಿ ಡಾ. ರಾಮನೋಹರ ಲೋಹಿಯಾ ಇವರ ಸ್ಮರಣಾರ್ಥವಾಗಿ ಆಯೋಜಿಸಿರುವ ವ್ಯಾಖ್ಯಾನದಲ್ಲಿ ಮಾತನಾಡುವಾಗ ದಾವೆ ಮಾಡಿದರು. ಮನೋಜ ಸಿಂಹ ಇವರು ವಿದ್ಯಾರ್ಥಿಗಳಿಗೆ, ‘ಕೇವಲ ಪದವಿ ಪಡೆಯುವುದು ಎಂದರೆ ಶಿಕ್ಷಣ ಪಡೆಯುವುದು ಅಲ್ಲ’, ಇದನ್ನು ತಿಳಿಸುವ ಪ್ರಯತ್ನ ಮಾಡುತ್ತಿದ್ದರು.

ಉಪರಾಜ್ಯಪಾಲ ಮನೋಜ ಸಿಂಹ ಇವರ ಈ ಹೇಳಿಕೆಯ ಬಗ್ಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಮಧ್ಯಪ್ರದೇಶದ ಕಾಂಗ್ರೆಸ್ ನ ಅಧ್ಯಕ್ಷ ಕಮಲನಾಥ ಇವರ ಮಾಧ್ಯಮ ಸಲಹೆಗಾರ ಪಿಯುಶ್ ಬಬೆಲೆ ಇವರು, ‘ಯಾವಾಗ ಪ್ರಧಾನಮಂತ್ರಿ ಮೋದಿ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಇವರ ಪದವಿಯ ಬಗ್ಗೆ ಪ್ರಶ್ನೆ ಎತ್ತಲಾಗಿದೆ, ಅಂದಿನಿಂದ ಭಾಜಪದ ಎದುರು ದೊಡ್ಡ ಸಮಸ್ಯೆ ನಿರ್ಮಾಣವಾಗಿದೆ. ಮ. ಗಾಂಧಿ ಇವರು ಬ್ಯಾರಿಸ್ಟರ್ ಆಗಿದ್ದರು. ನಿಮ್ಮ ವಾದದಲ್ಲಿ ಅವರನ್ನು ಏಕೆ ಎಳೆಯುತ್ತೀರಿ ?’, ಎಂದು ಅವರು ಹೇಳಿದರು.