ಗಾಝಿಯಾಬಾದ (ಉತ್ತರಪ್ರದೇಶ) – ಅಮೇರಿಕಾದ ನಿವಾಸಿ ಓರ್ವ ಅನಿವಾಸಿ ಭಾರತೀಯ ಮಹಿಳಾ ವೈದ್ಯೆ ಇಸ್ಲಾಂ ಧರ್ಮವನ್ನು ಬಿಟ್ಟು ಸನಾತನ ಧರ್ಮವನ್ನು ಸ್ವೀಕರಿಸಿದರು. ಈ ಮಹಿಳೆಯು ಉತ್ತರಪ್ರದೇಶದ ಡಾಸನಾದಲ್ಲಿರುವ ಶಿವಶಕ್ತಿ ಧಾಮ ದೇವಸ್ಥಾನಕ್ಕೆ ಸುಮಾರು 12 ಲಕ್ಷ ರೂಪಾಯಿ ಬೆಲೆಬಾಳುವ 19 ತೊಲೆಯ ಬಂಗಾರದ ಕಿರೀಟವನ್ನು ಭಗವಾನ ಶಿವನಿಗೆ ಅರ್ಪಿಸಿದಳು. ಇದರೊಂದಿಗೆ ಅವಳು ದೇವಸ್ಥಾನಕ್ಕೆ ಲಕ್ಷಾಂತರ ರೂಪಾಯಿ ಮತ್ತು ಇತರೆ ಅಲಂಕಾರಗಳ ಸಾಮಗ್ರಿಗಳನ್ನು ಅರ್ಪಿಸಿದಳು.
ಈ ವಿಷಯದಲ್ಲಿ ದೊರೆತ ಮಾಹಿತಿಯನುಸಾರ ಈ ಮಹಿಳಾ ವೈದ್ಯೆ ಭಗವಾನ ಮಹಾದೇವನನ್ನು ಗುರು ಮತ್ತು ಮಹಾಕಾಳಿದೇವಿಯನ್ನು ಮಾತೆಯೆಂದು ಸ್ವೀಕರಿಸಿದ್ದಾಳೆ. ಶಿವಶಕ್ತಿ ಧಾಮ ಡಾಸನಾ ದೇವಸ್ಥಾನದ ಮಹಾಮಂಡಲೇಶ್ವರ ಯತಿ ನರಸಿಂಹಾನಂದ ಸರಸ್ವತಿಯವರು ಮಾತನಾಡುತ್ತಾ, ಈ ಮಹಿಳೆಯು ಇಸ್ಲಾಂ ಧರ್ಮವನ್ನು ತ್ಯಜಿಸಿದ ಬಳಿಕ ಸನಾತನ ಧರ್ಮವನ್ನು ಸ್ವೀಕರಿಸಿದಳು ಮತ್ತು ಇಲ್ಲಿ ರುದ್ರಾಭಿಷೇಕವನ್ನು ಮಾಡಿ ಭಗವಾನ ಭೋಲೆನಾಥನ ಆಶೀರ್ವಾದವನ್ನು ಪಡೆದುಕೊಂಡಳು ಎಂದು ಹೇಳಿದರು.
ಸಂಪಾದಕರ ನಿಲುವು* ಲವ್ ಜಿಹಾದ್ ಗೆ ಬಲಿಯಾಗಿ ಸುಳ್ಳು ಪ್ರೀತಿಗಾಗಿ ಹಿಂದೂ ಧರ್ಮವನ್ನು ತ್ಯಜಿಸಲು ಹೊರಟಿರುವ ಹಿಂದೂ ಯುವತಿಯರು ಇದರಿಂದ ಪಾಠ ಕಲಿಯುವರೇ? |