ತಮಿಳುನಾಡಿನಲ್ಲಿ ದೇವಸ್ಥಾನಗಳಿಂದ ನಡೆಯುತ್ತಿರುವ ಶಾಲೆಗಳು ಸರಕಾರದ ನಿಯಂತ್ರಣಕ್ಕೆ ತರುವರು !

ಸರಕಾರದ ಇತರ ಇಲಾಖೆಗಳಿಂದ ನಡೆಯುವ ಶಾಲೆಗಳು ಕೂಡ ಸರಕಾರದ ಶಿಕ್ಷಣ ಇಲಾಖೆಯ ನಿಯಂತ್ರಣಕ್ಕೆ ತರುವರು !

ಚೆನ್ನೈ – ತಮಿಳುನಾಡಿನ ಹಣಕಾಸು ಸಚಿವ ಪಲಾನಿವೇಲ ತ್ಯಾಗರಾಜನ್ ಇವರು ಇತ್ತೀಚೆಗೆ ರಾಜ್ಯದ ಬಜೆಟ್ ಮಂಡಿಸಿದರು. ಆ ಸಮಯದಲ್ಲಿ ಅವರು ಇತರ ಸಂಸ್ಥೆ ಮತ್ತು ಸರಕಾರಿ ಇಲಾಖೆಗಳಿಂದ ನಡೆಯುತ್ತಿರುವ ಶಾಲೆಗಳನ್ನು ರಾಜ್ಯಸರಕಾರದ ಶಿಕ್ಷಣ ಇಲಾಖೆಯ ನಿಯಂತ್ರಣಕ್ಕೆ ತರುವುದಾಗಿ ಹೇಳಿದರು. ಇದರಲ್ಲಿ ರಾಜ್ಯದ ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳಿಂದ ನಡೆಸಲಾಗುವ ಶಾಲೆಯೂ ಸಹ ಸಮಾವೇಶ ಮಾಡಿದೆ. ಹಿಂದೆ ದ್ರವಿಡರ್ ಮತ್ತು ಆದಿವಾಸಿ ಕಲ್ಯಾಣ ಇಲಾಖೆ ಮತ್ತು ಇತರ ಇಲಾಖೆಯಿಂದ ನಡೆಯುತ್ತಿದ್ದ ಶಾಲೆಗಳನ್ನೂ ಕೂಡ ಶಿಕ್ಷಣ ಇಲಾಖೆಯ ನಿಯಂತ್ರಣಕ್ಕೆ ತರಲಾಗುವುದು, ಎಂದು ತ್ಯಾಗರಾಜನ್ ಹೇಳಿದರು.

ತ್ಯಾಗರಾಜನ್ ಮಾತನ್ನು ಮುಂದುವರೆಸುತ್ತಾ, ವಿವಿಧ ಇಲಾಖೆಯ ಅಡಿಯಲ್ಲಿ ನಡೆಯುವ ಶಾಲೆಗಳ ಗುಣಮಟ್ಟ ಸುಧಾರಿಸಲು ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗಲಿ ಎಂದು ಈ ನಿರ್ಣಯ ತೆಗೆದುಕೊಂಡಿದೆ. ದ್ರಮುಕ ಪಕ್ಷದ ಮಿತ್ರ ಪಕ್ಷ ಸರಕಾರದ ಈ ನಿರ್ಣಯಕ್ಕೆ ಬೆಂಬಲ ನೀಡಿದೆ. ಈ ನಿರ್ಣಯದಿಂದ ಹಿಂದುಳಿದ ವರ್ಗದ ಮಕ್ಕಳಿಗೆ ನೀಡುವ ಶಿಕ್ಷಣದ ಗುಣಮಟ್ಟ ಸುಧಾರಿಸಲಿದೆ, ಎಂದು ತ್ಯಾಗರಾಜನ್ ಇವರು ಹೇಳಿದರು.