ಅಮೇರಿಕಾದ ಭಾರತೀಯ ರಾಯಭಾರಿ ಕಚೇರಿಯ ಮೇಲೆ ಖಲಿಸ್ತಾನಿಗಳಿಂದ ಮತ್ತೊಮ್ಮೆ ದಾಳಿಯ ಪ್ರಯತ್ನ !

ಸ್ಯಾನ್ ಫ್ರಾನ್ಸಿಸ್ಕೋ (ಅಮೇರಿಕ) – ಅಮೇರಿಕಾದ ಸ್ಯಾನ್ ಫ್ರಾನ್ಸಿಸ್ಕೊದಲ್ಲಿನ ಭಾರತೀಯ ರಾಯಭಾರಿ ಕಚೇರಿಯ ಮೇಲೆ ಖಲಿಸ್ತಾನಿಗಳು ಮತ್ತೊಮ್ಮೆ ದಾಳಿ ಮಾಡುವ ಪ್ರಯತ್ನ ಮಾಡಿದೆ. ಮಾರ್ಚ್ ೨೨, ೨೦೨೩ ರಂದು ಕೆಲವು ಖಲಿಸ್ತಾನಿಯರು ರಾಯಭಾರಿ ಕಚೇರಿಯ ಹೊರಗೆ ಸೇರಿದರು ಮತ್ತು ಅವರು ಒಳಗೆ ನುಗ್ಗಲು ಪ್ರಯತ್ನ ಮಾಡಿದರು. ಪೊಲೀಸರು ಅವರನ್ನು ತಡೆದರು. ಭಾನುವಾರ ಖಲಿಸ್ತಾನಿಯರು ಇಲ್ಲಿಯ ಭಾರತೀಯ ರಾಯಭಾರಿ ಕಚೇರಿಯ ಮೇಲೆ ದಾಳಿ ನಡೆಸಿ ಧ್ವಂಸ ಮಾಡಿದ್ದರು. ಅವರು ರಾಯಭಾರಿ ಕಚೇರಿಯ ಮೇಲೆ ಖಲಿಸ್ತಾನದ ಧ್ವಜ ಹಾರಿಸಲು ಪ್ರಯತ್ನ ಮಾಡಿದ್ದರು. ಹಾಗೂ ರಾಯಭಾರಿ ಕಚೇರಿಯಲ್ಲಿ ವಿದ್ವಂಸಕ ಕೃತ್ಯ ಮಾಡಿದ್ದರು. ಅವರನ್ನು ತಡೆಯುವಲ್ಲಿ ಪೊಲೀಸರು ವಿಫಲಗೊಂಡಿದ್ದರು. ಈ ಪ್ರಕರಣದಲ್ಲಿ ಭಾರತೀಯ ವಿದೇಶಾಂಗ ಸಚಿವಾಲಯವು ಅಮೇರಿಕಾ ಸರಕಾರದ ಬಳಿ ಅಸಮಾಧಾನ ವ್ಯಕ್ತಪಡಿಸಿತ್ತು. ಫ್ರಾನ್ಸಿಸ್ಕೋದಲ್ಲಿನ ಭಾರತೀಯ ರಾಯಭಾರಿ ಕಚೇರಿಯ ಮೇಲೆ ಖಲಿಸ್ತಾನಿಯರ ದಾಳಿ ಅಮೇರಿಕಾ ಖಂಡಿಸಿತ್ತು. ರಾಯಭಾರಿ ಕಚೇರಿಯ ಹೊರಗೆ ಸರಕಾರದಿಂದ ಭದ್ರತಾ ಪಡೆಯನ್ನು ನೇಮಿಸಿದ್ದಾರೆ.

ಅಮೇರಿಕಾದಲ್ಲಿನ ಸಿಖ್ ಸಮುದಾಯದಿಂದ ಖಂಡನೆ

ಅಮೇರಿಕಾದಲ್ಲಿನ ಸಿಖ್ ಸಮುದಾಯವು ಭಾರತೀಯ ರಾಯಭಾರಿ ಕಚೇರಿಯ ಮೇಲಿನ ದಾಳಿ ಖಂಡಿಸಿದೆ. ‘ಖಲಿಸ್ತಾನಿ ಚಳವಳಿಗೆ ಅನಾವಶ್ಯಕವಾಗಿ ಮಹತ್ವ ನೀಡುತ್ತಿದ್ದಾರೆ,’ ಎಂದು ಸಿಖ್ ಸಮುದಾಯದ ನಾಯಕ ಜಸದೀಪ ಸಿಂಹ ಇವರು ಹೇಳಿದರು.

ಸಂಪಾದಕೀಯ ನಿಲುವು

ಖಲಿಸ್ತಾನಿಗಳಿಗೆ ಅರ್ಥವಾಗುವ ಭಾಷೆಯಲ್ಲಿ ಪ್ರತ್ಯುತ್ತರ ನೀಡದೆ ಇದ್ದರೆ, ಈ ಸಮಸ್ಯೆ ಉಗ್ರರೂಪ ತಾಳಬಹುದು, ಇದು ಭಾರತ ಸರಕಾರ ಅರ್ಥಮಾಡಿಕೊಳ್ಳುವುದೇ ?