ಕಾಶ್ಮೀರಿಗಳಿಗೆ ಭಾರತದಲ್ಲಿಯೇ ಇರಲು ಬಿಡಿ ! – ಪಾಕಿಸ್ತಾನಿ ತಜ್ಞ ಸೈಯದ್ ಶಬ್ಬರ್ ಜೈದಿ

(ಬಲಬದಿಗೆ) ಪಾಕಿಸ್ತಾನಿ ತಜ್ಞ ಸೈಯದ್ ಶಬ್ಬರ್ ಜೈದಿ

ಇಸ್ಲಾಮಾಬಾದ (ಪಾಕಿಸ್ತಾನ) – ಒಂದು ವೇಳೆ ಕಾಶ್ಮೀರಿ ಜನರು ಭಾರತದಲ್ಲಿಯೇ ವಾಸಿಸಲು ನಿರ್ಧರಿಸಿದ್ದರೆ, ಅವರು ಅಲ್ಲಿಯೇ ಇರಲಿ ಎಂದು ಪಾಕಿಸ್ತಾನಿ ತಜ್ಞ ಸೈಯದ ಶಬ್ಬರ ಜೈದಿ ಟ್ವೀಟ ಮಾಡಿದ್ದಾರೆ. ಜೈದಿಯವರು ಅನೇಕ ಟ್ವೀಟ ಮಾಡಿದ್ದಾರೆ. ಅದರಲ್ಲಿ ಅವರು ಪಾಕಿಸ್ತಾನವನ್ನು ಛೀಮಾರಿ ಹಾಕಿದ್ದಾರೆ.

ಅವರು,

1. ಯುನೈಟೆಡ್ ಅರಬ್ ಎಮಿರೇಟ್ಸ್ ಕಾಶ್ಮೀರದಲ್ಲಿ ಬಂಡವಾಳ ಹೂಡಿದೆ. ಇದು ಖೇದಕರ ಮತ್ತು 1947ರ ನಂತರದ ಮಹತ್ವಪೂರ್ಣ ಘಟನೆಯಾಗಿದೆ. ಪ್ರಧಾನಮಂತ್ರಿ ಮೋದಿಯವರು ಕಲಂ 370 ರದ್ದುಪಡಿಸಿದ ಬಳಿಕ ಕಾಶ್ಮೀರದ ಹೊರಗಿನ ಜನರು ಅಲ್ಲಿ ಭೂಮಿಯನ್ನು ಖರೀದಿಸಲು ಅನುಮತಿ ಸಿಕ್ಕಿದೆ. ನಾವು (ಪಾಕಿಸ್ತಾನ) ಎಲ್ಲಿದ್ದೇವೆ ?

2. ಈ ವಿಷಯದಿಂದ ಕಾಶ್ಮೀರ ಸಮಸ್ಯೆ ನಿವಾರಣೆಯಾಗುತ್ತಿದೆ. ಭಾರತ ಮತ್ತು ಜಗತ್ತು ಕಾಶ್ಮೀರದಲ್ಲಿ ಬಂಡವಾಳ ಹೂಡಿಕೆ ಮಾಡುವುದು ಮತ್ತು ಕಾಶ್ಮೀರಕ್ಕೆ ಏಷ್ಯಾದ ಸ್ವಿಡ್ಜರಲ್ಯಾಂಡ ಮಾಡಲಿದ್ದಾರೆ.

3. ಈಗ ಕಾಶ್ಮೀರದ ಜನರು ನಿರ್ಣಯಿಸಬೇಕಾಗಿದೆ. ಒಂದು ವೇಳೆ ಆರ್ಥಿಕ ಅಭಿವೃದ್ಧಿ ಅವರಿಗೆ ಅನುಕೂಲಕರವಾಗಿದ್ದರೆ ಅವರು ಭಾರತದೊಂದಿಗೆ ಇರುವರು.

4. ಭಾರತವು 2002 ರಿಂದ 2023 ರ ಕಾಲಾವಧಿಯಲ್ಲಿ ಪಾಕಿಸ್ತಾನವನ್ನು ಎಲ್ಲ ಆರ್ಥಿಕ ಸ್ತರದಲ್ಲಿ ಹಿಂದಿಕ್ಕಿದೆ. ಪಾಕಿಸ್ತಾನ ದೇಶದಲ್ಲಿರುವ ಸಾಧನಗಳನ್ನು ಜನತೆಯ ಕಲ್ಯಾಣಕ್ಕೆ ಉಪಯೋಗಿಸುವ ಬದಲಾಗಿ ಪಕ್ಕದ ದೇಶದಲ್ಲಿ ಅಶಾಂತಿಯನ್ನು ಹರಡುವುದರಲ್ಲಿ ಉಪಯೋಗಿಸಿತು. ಅನೇಕ ದಶಕಗಳಿಂದ ರಾಜಕೀಯ ಅಸ್ಥಿರತೆ ಮತ್ತು ತಪ್ಪಾದ ಆರ್ಥಿಕ ವ್ಯವಸ್ಥಾಪನ, ಇವುಗಳಿಂದ ಪಾಕಿಸ್ತಾನದಲ್ಲಿ ಸಂಕಟಗಳು ನಿರ್ಮಾಣವಾಗಿವೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಪಾಕಿಸ್ತಾನ ಮತ್ತು ಕಾಶ್ಮೀರಿ ಜನರಿಗೆ ಇದಲ್ಲದೇ ಬೇರೆ ಪರ್ಯಾಯ ಇಲ್ಲದ್ದರಿಂದ ಅವರು ಹೀಗೆ ಮಾತನಾಡುತ್ತಿದ್ದಾರೆ ಎನ್ನುವುದನ್ನು ಗಮನಿಸಬೇಕು !