ಅಪಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಭೂಕಂಪ ೧೯ ಜನರ ಸಾವು

ನವ ದೆಹಲಿ – ಅಫ್ಘಾನಿಸ್ತಾನದಲ್ಲಿ ಹಿಂದೂಕುಶ ಪ್ರದೇಶದಲ್ಲಿ ಮಾರ್ಚ್ ೨೧ ರ ಸಂಜೆ ೬.೫ ರೆಕ್ಟರ್ ಸ್ಕೇಲ್ ತೀವ್ರತೆಯ ಭೂಕಂಪನವಾಗಿದೆ. ಇದರ ಪರಿಣಾಮ ಪಾಕಿಸ್ತಾನ ಮತ್ತು ಭಾರತದಲ್ಲಿನ ದೆಹಲಿ ಸಹಿತ ಕೆಲವು ನಗರಗಳಲ್ಲಿ ಕಂಡು ಬಂದಿದೆ. ಅಫ್ಘಾನಿಸ್ತಾನದಲ್ಲಿ ೧೦ ಹಾಗೂ ಪಾಕಿಸ್ತಾನದಲ್ಲಿ ೯ ಜನರು ಸಾವನ್ನಪ್ಪಿದ್ದಾರೆ. ಜೊತೆಗೆ ೧೬೦ ಜನರು ಗಾಯಗೊಂಡಿದ್ದಾರೆ. ಅಪಘಾನಿಸ್ತಾನದಲ್ಲಿ ಭೂಕಂಪ ಬರುವ ಬಗ್ಗೆ ಈ ಮೊದಲೇ ಓರ್ವ ಡಚ್ ವಿಜ್ಞಾನಿ ಹೇಳಿದ್ದರು.

ನೋಯ್ಡಾದಲ್ಲಿ ಭಯಭೀತರಾಗಿ ಮನೆಯಿಂದ ಹೊರ ಓಡಿಬಂದ ಜನರು

ಫೆಬ್ರವರಿ ತಿಂಗಳಲ್ಲಿ ಟರ್ಕಿ ಮತ್ತು ಸಿರಿಯ ದೇಶದಲ್ಲಿ ವಿನಾಶಕಾರಿ ಭೂಕಂಪ ಆಗಿತ್ತು. ಅದರಲ್ಲಿ ೫೦ ಸಾವಿರಕ್ಕೂ ಹೆಚ್ಚಿನ ಜನರು ಸಾವನ್ನಪ್ಪಿದರು. ಈ ಭೂಕಂಪದ ನಂತರ ಡಚ್ ವಿಜ್ಞಾನಿ ಫ್ರ್ಯಾಂಕ್ ಹ್ಯಾಗಿರಬಿಟ್ಸ್ ಇವರು ಭವಿಷ್ಯ ನುಡಿದಿದ್ದರು, ಟರ್ಕಿ ನಂತರ ಮುಂದಿನ ಭೂಕಂಪನ ಅಪಘಾನಿಸ್ತಾನದಲ್ಲಿ ಬರುವುದು ಮತ್ತು ಕೊನೆಗೆ ಪಾಕಿಸ್ತಾನ ಮತ್ತು ಭಾರತದಿಂದ ಮುಂದೆ ಹೋಗಿ ಹಿಂದೂ ಸಾಗರದಲ್ಲಿ ಕೊನೆಗೊಳ್ಳುವುದು, ಇದು ಅನುಮಾನಿನ ಅಂದಾಜವಾಗಿದೆ.