ಕನ್ಯಾಕುಮಾರಿ (ತಮಿಳುನಾಡು) ನಲ್ಲಿ ಲೈಂಗಿಕ ದೌರ್ಜನ್ಯವೆಸಗಿದ ಪಾದ್ರಿಯ ಬಂಧನ !

ಕನ್ಯಾಕುಮಾರಿ (ತಮಿಳುನಾಡು) – ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪದಲ್ಲಿ ಸಿರೋ ಮಲಂಕರ ಕ್ಯಾಥೋಲಿಕ್ ಚರ್ಚ್ ಪಾದ್ರಿ ಬೆನೆಡಿಕ್ಟ್ ಆಂಟೊ ಅವರನ್ನು ಪೊಲೀಸರು ನಾಗರ್‌ಕೋಯಿಲ್‌ನಲ್ಲಿರುವ ಅವರ ಹೊಲದ ಮನೆಯಿಂದ ಬಂಧಿಸಿದ್ದಾರೆ. ನರ್ಸಿಂಗ್ ಮಹಾವಿದ್ಯಾಲಯಗಳ ವಿದ್ಯಾರ್ಥಿನಿಯರು ನೀಡಿದ ದೂರಿನ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕಳೆದ ಕೆಲವು ದಿನಗಳಿಂದ ಆತ ತಲೆ ಮರೆಸಿಕೊಂಡಿದ್ದ, ಆತನ ಅಶ್ಲೀಲ ವೀಡಿಯೊಗಳು ಮತ್ತು ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗಿದ್ದವು. ಹಲವು ಮಹಿಳೆಯರೊಂದಿಗೆ ಶಾರರಿಕ ಸಂಬಂಧ ಹೊಂದಿರುವ ಬಗ್ಗೆ ಅವನ ಮೇಲೆ ಆರೋಪವಿದೆ. ೧೬ ರಿಂದ ೫೦ ವರ್ಷದೊಳಗಿನ ೮೦ ಮಹಿಳೆಯರೊಂದಿಗೆ ಆಂಟೊ ಅವರ ೨೦೦ ಕ್ಕೂ ಹೆಚ್ಚು ಅಸಭ್ಯ ವೀಡಿಯೊಗಳು ಬಹಿರಂಗವಾಗಿವೆ ಎಂದು ಹೇಳಲಾಗುತ್ತಿದೆ.

ಸಂಪಾದಕೀಯ ನಿಲುವು

ಪಾದ್ರಿ ಎಂದರೆ ಕಾಮುಕ ವ್ಯಕ್ತಿ’ ಹೀಗೆ ಜಗತ್ತಿನಲ್ಲಿ ಚಿತ್ರಣ ಸೃಷ್ಟಿಯಾಗಿದೆ, ಎಂದು ಯಾರಾದರೂ ಹೇಳಿದರೆ, ಆಶ್ಚರ್ಯಪಡಬೇಕಾಗಿಲ್ಲ !