ಎನ್ . ಐ. ಎ. ನ ಆರೋಪಪತ್ರದಲ್ಲಿನ ಮಾಹಿತಿ !
ನವದೆಹಲಿ – ಪಾಕಿಸ್ತಾನದಲ್ಲಿ ಅಶಾಂತಿ ಇರುವುದರಿಂದ ಭಾರತೀಯ ಸೈನ್ಯವು ಉತ್ತರ ಭಾರತದಲ್ಲಿ ವ್ಯಸ್ತವಾಗಿರುವುದು. ಆಗ ಪಾಪ್ಯುಲರ್ ಫ್ರ್ಯಾಂಟ್ ಆಫ್ ಇಂಡಿಯಾದ (ಪಿ.ಎಫ್.ಐ) ಪ್ರಶಿಕ್ಷಿತ ಕಾರ್ಯಕರ್ತರು ದಕ್ಷಿಣ ಭಾರತವನ್ನು ಕಬಳಿಸಿ ಉತ್ತರ ಭಾರತದ ಕಡೆಗೆ ಮುನ್ನಡೆಯಬಹುದು, ಎಂಬ ಷಡ್ಯಂತ್ರವನ್ನು ಪಿ.ಎಫ್.ಐ ರಚಿಸಿತ್ತು. ಈ ಮಾಹಿತಿಯು ರಾಷ್ಟ್ರೀಯ ತನಿಖಾ ದಳ(ಎನ್.ಐ.ಎ.)ವು ಪಿ.ಎಫ್.ಐ. ನ ೫ ಕಾರ್ಯಕರ್ತರ ವಿರುದ್ಧ ನ್ಯಾಯಾಲಯದಲ್ಲಿ ದಾಖಲಿಸಿದ್ದ ಆರೋಪಪತ್ರದಲ್ಲಿದೆ. ಈ ಕಾರ್ಯಕರ್ತರಿಂದ ವಶಪಡಿಸಿಕೊಂಡ ಕಾಗದಪತ್ರಗಳಿಂದ ೨೦೪೭ರ ವರೆಗೆ ಭಾರತವನ್ನು ಇಸ್ಲಾಮಿ ರಾಷ್ಟ್ರವನ್ನಾಗಿಸುವ ಸಂಚು ಬಯಲಾಗಿತ್ತು. ಪಿ.ಎಫ್.ಐ. ನ ಕಾರ್ಯಕರ್ತರಿಗೆ ಶಸ್ತ್ರಗಳನ್ನು ಚಲಾಯಿಯಿಸುವ ತರಬೇತಿ ನೀಡಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ದೊರೆಯುತ್ತಲೇ ಈ ಸಂಘಟನೆಯ ಮೇಲೆ ನಿರ್ಬಂಧ ಹೇರಲಾಯಿತು.
ಈ ಅರೋಪಪತ್ರದಲ್ಲಿ ಈ ರೀತಿಯಲ್ಲಿ ಹೇಳಲಾಗಿದೆ. ತನಿಖೆಯಲ್ಲಿ ಪಿ.ಎಫ್.ಐಯು ಸಶಸ್ತ್ರ ವಿದ್ರೋಹ ಮಾಡಿ ಸರಕಾರವನ್ನು ಕೆಳಗಿಳಿಸಿ ಇಲ್ಲಿ ಇಸ್ಲಾಮಿ ರಾಷ್ಟ್ರ ಸ್ಥಾಪನೆಯ ರಣನೀತಿಯನ್ನು ಸಿದ್ಧಪಡಿಸಿತ್ತು. ಇದರಲ್ಲಿ ಗುಪ್ತವಾಗಿ ಸದಸ್ಯರ ಭರ್ತಿ ಮಾಡಿಸಿ ಅವರ ಸೈನ್ಯ ರಚಿಸಿ ಅವರಿಗೆ ಶಸ್ತ್ರ ಚಲಾಯಿಸುವ ತರಬೇತಿ ನೀಡಲಾಗುತ್ತಿತ್ತು. ಈ ರಣನೀತಿಯ ಅನುಸಾರ ಹಿಂದೂ ಸಂಘಟನೆಗಳು ಹಾಗೂ ಪಿ.ಎಫ್.ಐ ನ್ನು ವಿರೋಧಿಸುವವರ ಸೂಚಿಯನ್ನು ತಯಾರಿಸಿ ಅವರನ್ನು ಗುರಿಯಾಗಿಸಲಾಗುತ್ತಿತ್ತು.
(ಸೌಜನ್ಯ : TIMES NOW)