ಭಾರತೀಯ ಕುಟುಂಬ ವ್ಯವಸ್ಥೆ ಇದು ಜಗತ್ತಿನಲ್ಲಿಯೇ ಸರ್ವಶ್ರೇಷ್ಟ ! – ಮೇಗ ಜೋನ್ಸ್

– ಮೇಗ ಜೋನ್ಸ್,ಮುಖ್ಯಸ್ಥ, ಯುನೈಟೆಡ್ ನೇಶನ್ಸ ವುಮೆನ್ಸ್ ಎಂಪಾವರಮೆಂಟ್ವಿ

  • ‘ಲಿವ್ ಇನ್ ರಿಲೇಶನ್ ಶಿಪ್’ ಪದ್ಧತಿ ಮಾರಕ !

  • ಅವಿಭಕ್ತ ಕುಟುಂಬ ವ್ಯವಸ್ಥೆಯ ಅವನತಿ ಎಲ್ಲ ಸಮಸ್ಯೆಗಳ ಮೂಲ !

ಮೆಗ್ ಜೋನ್ಸ್, ಯುಎನ್ ಮಹಿಳಾ ಆರ್ಥಿಕ ಸಬಲೀಕರಣದ ಮುಖ್ಯಸ್ಥೆ

ನಾಗಪುರ – ಅವಿಭಕ್ತ ಕುಟುಂಬ ಪದ್ಧತಿ ಆಧಾರಿತ ಭಾರತೀಯ ಕುಟುಂಬ ವ್ಯವಸ್ಥೆ ಇದು ಜಗತ್ತಿನಲ್ಲಿ ಸರ್ವಶ್ರೇಷ್ಟವಾಗಿದೆ. ಜಗತ್ತಿನಲ್ಲಿ ಹೆಚ್ಚುತ್ತಿರುವ ‘ಲಿವ್ ಇನ್ ರಿಲೇಶನ್ ಶಿಪ್’ನ ಪದ್ಧತಿ ಮಾರಕವಾಗಿದ್ದು, ಅವಿಭಕ್ತ ಕುಟುಂಬ ಪದ್ಧತಿಯ ಅವನತಿಯ ಅನೇಕ ಸಮಸ್ಯೆಗಳ ಮೂಲವಾಗಿದೆ. ಜಗತ್ತಿನೆದುರು ವಿವಿಧ ಸಂಕಟಗಳು ಇದ್ದರೂ ಕುಟುಂಬ ವ್ಯವಸ್ಥೆಯ ಕಡೆಗೆ ಆಗುವ ನಿರ್ಲಕ್ಷದಿಂದ ಅನೇಕ ಸಮಸ್ಯೆಗಳು ನಿರ್ಮಾಣವಾಗುತ್ತಿದೆ, ಎಂದು ‘ಯುನೈಟೆಡ್ ನೇಶನ್ ವುಮೆನ್ಸ್ ಎಂಪಾವರಮೆಂಟ್,ನ ಮುಖ್ಯಸ್ಥ ಮತ್ತು ಭಾರತೀಯ ಸಂಸ್ಕೃತಿಯಿಂದ ಪ್ರಭಾವಿತವಾಗಿರುವ ಮತ್ತು ಭಾರತೀಯ ಮಹಿಳೆಯರ ಅಭ್ಯಾಸ ಮಾಡುತ್ತಿರುವ ಮೇಗ ಜೋನ್ಸ್ ಇವರು ಅಭಿಪ್ರಾಯ ವ್ಯಕ್ತಪಡಿಸಿದರು. ‘ಸಿ-೨೦ ಪರಿಷತ್ತ’ಗಾಗಿ ಅವರು ನಾಗಪುರಕ್ಕೆ ಬಂದಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡುವಾಗ ಅವರು ಹೇಳಿದರು, ಅವರು ಮೂಲತಃ ಆಸ್ಟ್ರೇಲಿಯನ್ ವಂಶದವರು.

ಸರಕಾರವು ಅವಿಭಕ್ತ ಕುಟುಂಬ ಪದ್ಧತಿಗಾಗಿ ನೇತೃತ್ವ ವಹಿಸಬೇಕು !

ಜೋನ್ಸ್ ಮಾತು ಮುಂದುವರೆಸಿ,

೧. ಅವಿಭಕ್ತ ಕುಟುಂಬ ಪದ್ಧತಿಯ ಸಂಸ್ಕಾರದ ಪ್ರಚಾರ ಪ್ರಸಾರ ಜಗತ್ತಿನಾದ್ಯಂತ ನಡೆಯಬೇಕು, ಹಾಗೂ ಭವಿಷ್ಯದ ಸವಾಲುಗಳನ್ನು ಗಮನಕ್ಕೆ ತೆಗೆದುಕೊಂಡು ಸರಕಾರಿ ವ್ಯವಸ್ಥೆಯೂ ಕೂಡ ಇದಕ್ಕಾಗಿ ನೇತೃತ್ವ ವಹಿಸಬೇಕು. ಪತಿ ಪತ್ನಿ ಮತ್ತು ಮಕ್ಕಳು ಇಷ್ಟೇ ಕುಟುಂಬ ಇದ್ದರೆ ಅನೇಕ ಸಮಸ್ಯೆಗಳು ನಿರ್ಮಾಣವಾಗುತ್ತವೆ. ಮಕ್ಕಳು ಅಥವಾ ಹಿರಿಯ ನಾಗರಿಕರು ಇದ್ದರೆ, ಮಹಿಳೆಯರಿಗೆ ಮನೆಯಲ್ಲಿ ಇರಬೇಕಾಗುತ್ತದೆ. ಇದರಿಂದ ಅವರ ಹಕ್ಕಿನ ಮತ್ತು ಪ್ರಗತಿಯ ಅನೇಕ ಅವಕಾಶಗಳು ಕೈತಪ್ಪಿಹೋಗುತ್ತದೆ. ಇದರ ಪೆಟ್ಟು ಮಹಿಳೆ ಸಬಲೀಕರಣಕ್ಕೆ ಬೀಳುತ್ತದೆ. ಆದ್ದರಿಂದ ಸರಕಾರಿ ವ್ಯವಸ್ಥೆಯಲ್ಲಿ ಇಂತಹ ಕುಟುಂಬಗಳಿಗಾಗಿ ‘ವರ್ಕ್ ಫ್ರಮ್ ಹೋಂ’ ಆಧಾರಿತ ಉದ್ಯೋಗ ನಿರ್ಮಾಣ ಮಾಡುವುದರ ಮೇಲೆ ಒತ್ತು ನೀಡಬೇಕು.

೨. ಜಗತ್ತಿನ ಅನೇಕ ದೇಶದಲ್ಲಿ ಮಹಿಳೆಯರ ಸಬಲೀಕರಣದ ಹೆಸರಿನಲ್ಲಿ ಕೇವಲ ದಾಖಲೆ ಇರುತ್ತದೆ; ಆದರೆ ಭಾರತ ಸರಕಾರವು ಮಹಿಳೆಯರಿಗಾಗಿ ಅನೇಕ ಯೋಜನೆಗಳನ್ನು ಪ್ರತ್ಯಕ್ಷವಾಗಿ ಜಾರಿ ಮಾಡುವುಧಕ್ಕೆ ಒತ್ತು ನೀಡಿದೆ. ಇದರಿಂದ ಆಸ್ಟ್ರೇಲಿಯಾದಂತಹ ಇತರ ದೇಶಗಳು ಕೂಡ ಕಲಿಯುವ ಅವಶ್ಯಕತೆ ಇದೆ.

೩. ಮಹಿಳಾ ಸಬಲೀಕರಣದ ಯೋಜನೆಯ ಬಗ್ಗೆ ಜಗತ್ತಿನಲ್ಲಿ ಅನೇಕ ದೇಶಗಳಲ್ಲಿ ನಿರಾಸಕ್ತಿಯಾಗಿದೆ. ಅಲ್ಲಿ ಯೋಜನೆಗಳು ಜಾರಿಯಾಗುವುದಿಲ್ಲ. ಜಗತ್ತಿನಾದ್ಯಂತ ಮಹಿಳೆಯರಿಗಾಗಿ ಯೋಜನೆಗಳ ಜವಾಬ್ದಾರಿಯನ್ನು ನಿಶ್ಚಿತಗೊಳಿಸಿ ಅವಶ್ಯಕತೆ ಇರುವವರ ಬಳಿ ಯೋಜನೆಗಳನ್ನು ತಲುಪಿಸುವುದು ಅವಶ್ಯಕವಾಗಿದೆ.

ಸಂಪಾದಕರ ನಿಲುವು

ದೇಶಿಯರಿಗೆ ಏನು ತಿಳಿಯುತ್ತದೆಯೋ, ಅದು ಇಲ್ಲಿಯ ಪ್ರಗತಿ(ಅಧೊಗತಿ)ಪರರಿಗೆ ಮತ್ತು ಸುಧಾರಣಾವಾದಿಗಳಿಗೆ ತಿಳಿಯುವವರೆಗೆ ಸಮಯ ಮುಗಿದಿರುತ್ತದೆ !