ಅಮೃತಪಾಲ್ ಸಿಂಗ್‌ನ ಚಿಕ್ಕಪ್ಪ ಮತ್ತು ವಾಹನ ಚಾಲಕ ಪೊಲೀಸರಿಗೆ ಶರಣು !

ಜಾಲಂಧರ್ (ಪಂಜಾಬ್) – ಖಲಿಸ್ತಾನಿ ಅಮೃತಪಾಲ್ ಸಿಂಗ್‌ನ ಚಿಕ್ಕಪ್ಪ ಹರ್ಜೀತ್ ಸಿಂಗ್ ಮತ್ತು ವಾಹನ ಚಾಲಕ ಇವರಿಬ್ಬರೂ ಪೊಲೀಸರ ಮುಂದೆ ಶರಣಾದರು. ಅವರ ವಿರುದ್ಧ ವಿವಿಧ ಅಪರಾಧಗಳು ದಾಖಲಾಗಿದ್ದವು. ಅಮೃತಪಾಲ್ ಅವರ ಮರ್ಸಿಡಿಸ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಲ್ಲಿಯವರೆಗೆ ಅಮೃತಪಾಲ್‌ನ ೧೧೨ ಸಹಚರರನ್ನು ಬಂಧಿಸಲಾಗಿದೆ. ಅಮೃತಪಾಲ್ ಇನ್ನೂ ತಲೆಮರೆಸಿಕೊಂಡಿದ್ದು, ಆತನನ್ನು ಬಂಧಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.