ನವ ದೆಹಲಿ – ಕೇಂದ್ರ ಸರಕಾರವು ೧ ಲಕ್ಷ ಕೋಟಿ ರೂಪಾಯಿಯ ಶತ್ರುಗಳ ಆಸ್ತಿಯನ್ನು ಮಾರಾಟ ಮಾಡುವ ಪ್ರಕ್ರಿಯೆ ಆರಂಭಿಸಿದೆ. ಇದರಲ್ಲಿ ಎಲ್ಲಕ್ಕಿಂತ ಹೆಚ್ಚಿನ ಆಸ್ತಿ ಉತ್ತರ ಪ್ರದೇಶದಲ್ಲಿದೆ. ಇಲ್ಲಿಯವರೆಗೆ ಕೇಂದ್ರ ಸರಕಾರವು ಈ ರೀತಿಯ ಆಸ್ತಿಪಾಸ್ತಿ ಹರಾಜಿನಿಂದ ೩ ಸಾವಿರದ ೪೦೦ ಕೋಟಿ ರೂಪಾಯಿ ಗಳಿಸಿದೆ.
ಉತ್ತರ ಪ್ರದೇಶದಲ್ಲಿ ಒಟ್ಟು ೬ ಸಾವಿರದ ೨೫೫ ಎಂದರೆ ಒಟ್ಟು ಆಸ್ತಿಯ ಶೇಕಡಾ ೫೦ ಕ್ಕೂ ಹೆಚ್ಚಿನ ಆಸ್ತಿ ಇದೆ. ಅದರ ನಂತರ ಬಂಗಾಲದಲ್ಲಿ ೪ ಸಾವಿರದ ೮೮, ದೆಹಲಿಯಲ್ಲಿ ೬೫೯, ಗೋವಾದಲ್ಲಿ ೨೯೫, ಮಹಾರಾಷ್ಟ್ರದಲ್ಲಿ ೨೦೮, ತೆಲಂಗಾಣ ೧೫೮, ಗುಜರಾತ ೧೫೧, ತ್ರಿಪುರಾ ೧೦೫, ಬಿಹಾರ ೯೪, ಮಧ್ಯಪ್ರದೇಶ ೯೪, ಛತ್ತೀಸ್ಗಡ ೭೮, ಮತ್ತು ಹರಿಯಾಣ ೭೧ ಈ ರೀತಿ ರಾಜ್ಯವಾರು ಸಂಖ್ಯೆಗಳಿವೆ.
ಶತ್ರು ಆಸ್ತಿ ಮಾರಿ 1 ಲಕ್ಷ ಕೋಟಿ ಸಂಗ್ರಹಕ್ಕೆ ಕೇಂದ್ರ ಸರ್ಕಾರ ಸಜ್ಜು @GovtOfIndia_ #India #enemyproperties #amitshah #CentralGovernment #China #pakistan #kannadanews https://t.co/So34yLk5cs
— Asianet Suvarna News (@AsianetNewsSN) March 20, 2023
‘ಶತ್ರುಗಳ ಆಸ್ತಿ’ ಎಂದರೆ ಏನು ?
ಭಾರತದ ಸ್ವಾತಂತ್ರ್ಯದ ನಂತರ ಪಾಕಿಸ್ತಾನ ಅಥವಾ ಚೀನಾದಲ್ಲಿ ನೆಲೆಸಿರುವ ನಾಗರಿಕರು ಅಥವಾ ಸಂಸ್ಥೆಗಳ ಆಸ್ತಿಯನ್ನು ಭಾರತವು ‘ಶತ್ರು ಆಸ್ತಿ’ ಎಂದು ಘೋಷಿಸಿದೆ. ಈ ಸಂದರ್ಭದಲ್ಲಿ ಭಾರತ ಸರಕಾರದಿಂದ ಸಪ್ಟೆಂಬರ್ ೧೦, ೧೯೫೯ ರಂದು ಮೊದಲ ಸುತ್ತೋಲೆ ಹೊರಡಿಸಿತ್ತು. ಅದರ ನಂತರ ಡಿಸೆಂಬರ್ ೧೮, ೧೯೭೧ ರಂದು ಎರಡನೆಯ ಸುತ್ತೋಲೆ ಹೊರಡಿಸಿತು. ಈ ಎಲ್ಲಾ ಆಸ್ತಿಯ ಹರಾಜು ಕೇಂದ್ರ ಸರಕಾರದಿಂದ ಆಗುತ್ತದೆ. ಕೇಂದ್ರ ಸರಕಾರ ನೀಡಿರುವ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಪ್ರಸ್ತುತ ಕೇವಲ ೧೨ ಸಾವಿರದ ೬೧೧ ಶತ್ರುಗಳ ಆಸ್ತಿ ಇದೆ. ಇದರ ಅಂದಾಜು ಬೆಲೆ ೧ ಲಕ್ಷ ಕೋಟಿ ರೂಪಾಯಿ ಎಷ್ಟು ಇದೆ. ಈ ಆಸ್ತಿ ಪ್ರಸ್ತುತ ‘ಕಸ್ತೋಡಿಯನ್ ಎನಿಮಿ ಪ್ರಾಪರ್ಟಿ ಆಫ್ ಇಂಡಿಯಾ’ದ ವಶದಲ್ಲಿದೆ.
(ಸೌಜನ್ಯ – Harshit Dwivedi Education)