ನಾರ್ವೆ ಬಗ್ಗೆ ಚಲನಚಿತ್ರದಲ್ಲಿ ತೋರಿಸಿರುವ ಸತ್ಯಗಳು ತಪ್ಪು ! – ನಾರ್ವೆಯ ರಾಯಭಾರಿ ಹಂಸ ಜೆಕಬ ಫ್ರೆಡನಲಿಂಡ

`ಮಿಸೆಸ್ ಚಟರ್ಜಿ ವಿರುದ್ಧ ನಾರ್ವೆ’ ಈ ಹಿಂದಿ ಚಲನಚಿತ್ರದ ಕುರಿತು ನಾರ್ವೆಯ ರಾಯಭಾರಿಯ ಆಕ್ಷೇಪ !

ನವ ದೆಹಲಿ – ‘ಮಿಸೆಸ್ ಚಟರ್ಜಿ ವ್ಹರ್ಸಸ್ ನಾರ್ವೆ’ ಈ ಹಿಂದಿ ಚಲನಚಿತ್ರ ಪ್ರದರ್ಶನಗೊಂಡ ಬಳಿಕ ಭಾರತದಲ್ಲಿನ ನಾರ್ವೆಯ ರಾಯಭಾರಿ ಹಂಸ ಜೆಕಬ ಫ್ರೆಡನಲಿಂಡ ಇವರು ಆಕ್ಷೇಪಿಸಿದ್ದಾರೆ. ಅವರು ‘ಇದು ಕೇವಲ ಕಾಲ್ಪನಿಕ ಕಥೆಯಾಗಿದೆ. ಈ ಚಲನಚಿತ್ರದಲ್ಲಿ ನಾರ್ವೆಯ ಆಡಳಿತಕ್ಕೆ ಸಂಬಂಧಿಸಿದ ವಿಷಯ ತಪ್ಪು ಪದ್ಧತಿಯಿಂದ ತೋರಿಸಲಾಗಿದೆ. ‘ಭಾರತೀಯ ಜನತೆ ಜವಾಬ್ದಾರಿಯಿಂದ ನಡೆದುಕೊಳ್ಳುತ್ತಾರೆ ಮತ್ತು ಈ ಚಲನಚಿತ್ರದಲ್ಲಿ ತೋರಿಸಿರುವ ಕಥೆಯಿಂದ ಪ್ರಭಾವಿತರಾಗುವುದಿಲ್ಲವೆಂದು ನನಗೆ ಭರವಸೆ ಇದೆ’ ಎಂದು ಹೇಳಿದ್ದಾರೆ. ಆಶಿಮಾ ಛಿಬ್ಬರ ಈ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಲನಚಿತ್ರ ಸತ್ಯ ಘಟನೆಯನ್ನು ಆಧರಿಸಿದೆ. ಈ ಚಲನಚಿತ್ರದಲ್ಲಿ `ಒಬ್ಬ ಭಾರತೀಯ ತಾಯಿ ಅವಳ ಚಿಕ್ಕ ಮಗುವನ್ನು ನಾರ್ವೆಯ ಕಾನೂನಿನಿಂದ ಬಿಡಿಸಿಕೊಳ್ಳಲು ದೇಶದ ವ್ಯವಸ್ಥೆ ಮತ್ತು ಸರಕಾರವನ್ನು ಹೇಗೆ ಎದುರಿಸಿದಳು?’, ಎಂದು ತೋರಿಸಲಾಗಿದೆ. ನಾರ್ವೆಯಲ್ಲಿ ಚಿಕ್ಕ ಮಕ್ಕಳನ್ನು ಸ್ವಾವಲಂಬಿಗಳಾಗಲು ರಾತ್ರಿ ತಂದೆ-ತಾಯಿಗಳೊಂದಿಗೆ ಮಲಗದಿರುವಂತಹ ಬಹಳಷ್ಟು ಕಾನೂನುಗಳಿವೆ. ಕೆಲವು ವರ್ಷಗಳ ಮೊದಲು ಒಬ್ಬ ಭಾರತೀಯ ದಂಪತಿಗಳ ಮೇಲೆ ಅವರು ಮಗುವನ್ನು ತಮ್ಮೊಂದಿಗೆ ಮಲಗಿಸಿಕೊಂಡಿದ್ದರಿಂದ ಕ್ರಮ ಕೈಗೊಳ್ಳಲಾಗಿತ್ತು.

ಪ್ರಸಾರ ಮಾಧ್ಯಮಗಳಿಗೆ ನೀಡಿರುವ ಸಂದರ್ಶನದಲ್ಲಿ ರಾಯಭಾರಿ ಹಂಸ ಜೆಕಬ ಪ್ರೆಡನಲಿಂಡ ಮಾತನಾಡುತ್ತಾ, ಚಲನಚಿತ್ರದಲ್ಲಿ ನಾರ್ವೆಯನ್ನು ತಪ್ಪಾದ ಪದ್ಧತಿಯಿಂದ ಚಿತ್ರೀಕರಿಸಲಾಗಿದೆ. ಈ ಕಥೆಯಲ್ಲಿ ನಾರ್ವೆಯ ಸತ್ಯವನ್ನು ಸಂಪೂರ್ಣವಾಗಿ ತಪ್ಪಾಗಿ ತೋರಿಸಲಾಗಿದೆ. ಚಲನಚಿತ್ರದಲ್ಲಿ ಅನೇಕ ವಿಷಯ ತಪ್ಪಾದ ಪದ್ಧತಿಯಿಂದ ವಿವರಿಸಲಾಗಿದೆ. ಅಧಿಕೃತವಾಗಿ ನಾರ್ವೆಯ ಪರ ವಹಿಸುವುದು ಮತ್ತು ಸತ್ಯವನ್ನು ಸರಿಪಡಿಸುವುದು ನನಗೆ ಆವಶ್ಯಕವೆನಿಸುತ್ತದೆ. ಚಲನಚಿತ್ರ ರಂಜನೀಯಗೊಳಿಸಲು ಆವಶ್ಯಕತೆಗಿಂತ ಹೆಚ್ಚು ಸ್ವಾತಂತ್ರ್ಯ ತೆಗೆದುಕೊಳ್ಳಲಾಗಿದೆ. ಚಲನಚಿತ್ರವನ್ನು ನೋಡಿದ ಬಳಿಕ ಈ ಪ್ರಕರಣದಲ್ಲಿ ಎರಡೂ ದೇಶಗಳ ಸಾಂಸ್ಕೃತಿಕ ವ್ಯತ್ಯಾಸ ಬಹಳ ದೊಡ್ಡ ಸಮಸ್ಯೆಯಾಗಿದೆ. ಆದರೆ ವಾಸ್ತವಿಕ ಹಾಗಿಲ್ಲ. ಪ್ರಕರಣದ ಸಾರಾಂಶವನ್ನು ಹೇಳದೇ ನಾನು ಹೇಳುವುದೇನೆಂದರೆ, ಚಲನಚಿತ್ರದಲ್ಲಿ ತೋರಿಸಿರುವ ಮಗುವನ್ನು ಒಂದೇ ಮಂಚದ ಮೇಲೆ ಮಲಗಿಸುವುದರಿಂದ ಅಥವಾ ಮಗುವನ್ನು ಕೈಯಿಂದ ಉಣ್ಣಿಸುವುದರಿಂದ ಅವರನ್ನು ಬೇರೆ ಕಡೆಗೆ ಕಳುಹಿಸಲಾಗಿಲ್ಲ. ಈ ಪ್ರಕರಣದಲ್ಲಿ ಅಥವಾ ಇತರೆ ಯಾವುದೇ ಪ್ರಕರಣದಲ್ಲಿ ಹಾಗೆ ಆಗಿಲ್ಲ. ನಾರ್ವೆಯ ಸಂಸ್ಕೃತಿ ಚಲನಚಿತ್ರದಲ್ಲಿ ತೋರಿಸಿರುವಂತೆ ಇಲ್ಲ. ನಾವು ನಮ್ಮ ಮಕ್ಕಳಿಗೂ ನಮ್ಮ ಕೈಯಿಂದ ಉಣಿಸುತ್ತೇವೆ. ನಾನು ಸ್ವತಃ ನನ್ನ ಮಗುವಿಗೆ ಮಲಗುವಾಗ ಕಥೆಗಳನ್ನು ಹೇಳುತ್ತೇನೆ. ಯಾವಾಗ ನಮ್ಮ ಭಾರತೀಯ ಸ್ನೇಹಿತರು ಈ ಚಲನಚಿತ್ರವನ್ನು ನೋಡುವರೋ, ಆಗ ಅವರು ನಮ್ಮ ಸಂಸ್ಕೃತಿ ಮತ್ತು ನಮ್ಮ ವಿಷಯದ ಬಗ್ಗೆ ಏನು ವಿಚಾರ ಮಾಡಬಹುದು ?, ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡುತ್ತದೆ, ಎಂದು ಹೇಳಿದರು.