ಹಿಂದೂ ಜನಜಾಗೃತಿ ಸಮಿತಿ ಹಾಗೂ ಸಮಸ್ತ ಹಿಂದೂ ಸಂಘಟನೆಗಳಿಂದ ರಾಜ್ಯ ಸರಕಾರಕ್ಕೆ ಆಗ್ರಹ
ಬೆಂಗಳೂರು : ಹಲಾಲ್ ಮಾಂಸದ ಪ್ರಕ್ರಿಯೆಯಲ್ಲಿ ಪ್ರಾಣಿಗಳನ್ನು ಮೆಕ್ಕಾ ದಿಕ್ಕಿಗೆ ಮುಖ ಮಾಡಿ ಕುರಾನ್ ಕಲ್ಮಾಗಳನ್ನು ಹೇಳಿ, ಅಲ್ಲಾಹ್‌ನಿಗೆ ಅರ್ಪಣೆ ಮಾಡಿದ ನಂತರ, ಕ್ರೂರ ರೀತಿಯಲ್ಲಿ ಪ್ರಾಣಿಗಳ ಹತ್ಯೆ ಮಾಡುವ ಪದ್ದತಿಯಾಗಿದೆ. ಇಂತಹ ಎಂಜಲು ಮಾಡಿದ ಮಾಂಸವನ್ನು ಪುನಃ ಹಿಂದೂ ದೇವರಿಗೆ ಅರ್ಪಿಸುವುದು ಹಿಂದೂ ಧರ್ಮಕ್ಕೆ ವಿರುದ್ಧವಾಗಿದೆ. ಹಾಗಾಗಿ ಯುಗಾದಿಯ ಸಮಯದಲ್ಲಿ ಹಲಾಲ್ ಮಾಂಸವನ್ನು ಬಹಿಷ್ಕಾರಿಸಿ ಜಟ್ಕಾ ಮಾಂಸವನ್ನು ಖರೀದಿ ಮಾಡಬೇಕು, ಹಾಗಾಗಿ ಸರಕಾರವು ಹಿಂದೂಗಳ ಧಾರ್ಮಿಕ ಹಕ್ಕನ್ನು ಗಮನದಲ್ಲಿರಿಸಿ ರಾಜ್ಯದ ಎಲ್ಲಾ ಕಡೆಗಳಲ್ಲಿ ಜಟ್ಕಾ ಮಾಂಸ ಸಿಗುವಂತೆ ವ್ಯವಸ್ಥೆ ಮಾಡಬೇಕು ಹಾಗೂ ಕಾನೂನುಬಾಹಿರ ಹಲಾಲ್ ಪ್ರಮಾಣ ಪತ್ರವನ್ನು ನಿಷೇಧಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಶ್ರೀ. ಮೋಹನ್ ಗೌಡ ಆಗ್ರಹಿಸಿದರು. ಅವರು ‘ಸಮಸ್ತ ಹಿಂದೂ ಸಂಘಟನೆಗಳ ಒಕ್ಕೂಟ’ದ ವತಿಯಿಂದ ಆಯೋಜಿಸಲಾದ ಪತ್ರಿಕಾ ಪರಿಷತ್ ನಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಬಜರಂಗದಳದ ಶ್ರೀ. ಸಂತೋಷ್ ಕಡ್ತಳ, ಹಿಂದವೀ ಜಟ್ಕಾ ಮೀಟ್ ನ ಶ್ರೀ. ಸಂತೋಷ್ ಕನ್ನನ್, ಹಿಂದೂ ಹೋರಾಟಗಾರ ಶ್ರೀ. ಪ್ರಶಾಂತ್ ಪ್ರಶಾಂತ್ ಸಂಬರಗಿ, ರಾಷ್ಟ್ರೀಯ ಹಿಂದೂ ಪರಿಷತ್ ನ ಶ್ರೀ. ವಿಕ್ರಮ ಶೆಟ್ಟಿ, ನ್ಯಾಯವಾದಿ ಪ್ರಸನ್ನ ಬಿ, ಹಿಂದವೀ ಜಟ್ಕಾ ಮಿಟ್ ಸಂಸ್ಥಾಪಕ ಶ್ರೀ. ಮುನೇಗೌಡ ಮತ್ತಿತರರು ಉಪಸ್ಥಿತರಿದ್ದರು.
ಅವರು ಮುಂದೆ ಮಾತನಾಡಿ, ಇಂದು ರಾಜ್ಯದಲ್ಲಿ ಹಲಾಲ್ ಉತ್ಪನ್ನಗಳ ಮೇಲೆ ನಿಷೇಧ ಹಾಕಬೇಕೆಂದು ಆಗ್ರಹ ಕೇಳಿ ಬರುತ್ತಿದೆ. ರಾಜ್ಯ ಸರಕಾರವು ಸಹ ಹಲಾಲ್ ಪ್ರಮಾಣಪತ್ರವನ್ನು ನಿಷೇಧ ಮಾಡುವುದಾಗಿ ಹೇಳಿತ್ತು. ಹಲಾಲ್ ಪ್ರಮಾಣಪತ್ರದ ಮೂಲಕ ದೇಶದ ಅರ್ಥವ್ಯವಸ್ಥೆಗೆ ಪರ್ಯಾಯವಾಗಿ ಪ್ರತ್ಯೇಕ ಇಸ್ಲಾಮಿಕ್ ಅರ್ಥವ್ಯವಸ್ಥೆಯನ್ನು ನಿರ್ಮಾಣ ಮಾಡುವ ಸಂಚುನ್ನು ಇಸ್ಲಾಮಿಕ್ ಸಂಘಟನೆಗಳು ಮಾಡುತ್ತಿವೆ. ಇದು ದೇಶದ ಭದ್ರತೆಯ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿದೆ. ದೇಶದಲ್ಲಿ ಆಹಾರ ಉತ್ಪನ್ನಗಳ ಬಗ್ಗೆ ಪ್ರಮಾಣಪತ್ರಗಳನ್ನು ನೀಡಲು ಎಫ್.ಎಸ್.ಎಸ್.ಎ.ಐ ಮತ್ತು ಎಫ್‌ಡಿಎ ಯಂತಹ ಅಧಿಕೃತ ಸರಕಾರಿ ಸಂಸ್ಥೆಗಳು ಇರುವಾಗ, ಹಣ ಪಡೆದುಕೊಂಡು ಇಸ್ಲಾಮ್ ಪದ್ದತಿಯ ಪ್ರಮಾಣಪತ್ರವನ್ನು ನೀಡುವುದು ಜಾತ್ಯತೀತ ತತ್ವಕ್ಕೆ ವಿರುದ್ಧವಾಗಿದೆ ಮತ್ತು ದೇಶದ ಬಹುಸಂಖ್ಯಾತ ಹಿಂದೂ ಉದ್ಯಮಿಗಳಿಗೆ, ವಂಶಪಾರಂಪರ್ಯವಾಗಿ ಮಾಂಸದ ವ್ಯಾಪಾರ ಮಾಡಿಕೊಂಡು ಬರುವ ಹಿಂದೂ ಕಟುಕ ಸಮುದಾಯಕ್ಕೆ ಮಾಡಿದ ಅನ್ಯಾಯವಾಗಿದೆ ಮತ್ತು ಅವರ ಆರ್ಥಿಕ ಹಿತಾಸಕ್ತಿಯನ್ನು ರಕ್ಷಣೆ ಮಾಡಬೇಕೆನ್ನುವ ಸಂವಿಧಾನದ ಕಲಂ 46 ರ ಉಲ್ಲಂಘನೆಯಾಗಿದೆ, ಹಾಗಾಗಿ ಹಿಂದೂ ಸಮಾಜವು ಯುಗಾದಿಯ ಸಮಯದಲ್ಲಿ ಹಲಾಲ್ ಬದಲಾಗಿ ಜಟ್ಕಾ ಮಾಂಸವನ್ನು ಖರೀದಿಯನ್ನು ಮಾಡಬೇಕು. ಈ ವಿಷಯದಲ್ಲಿ ಸಮಸ್ತ ಹಿಂದೂ ಸಂಘಟನೆಗಳ ಒಕ್ಕೂಟವು ರಾಜ್ಯವ್ಯಾಪಿ ಹಲಾಲ್ ಮುಕ್ತ ಯುಗಾದಿ ಅಭಿಯಾನವನ್ನು ಮಾಡಲಾಗಿದೆ’ ಎಂದರು.
ಶ್ರೀ. ಪ್ರಶಾಂತ್ ಸಂಬರಗಿ ಇವರು ಮಾತನಾಡಿ, ‘ಇಂದು ಮುಸಲ್ಮಾನ ಸಮುದಾಯವು ಹಲಾಲ್ ಮೂಲಕ ದೇಶದ ಆರ್ಥಿಕ ವ್ಯವಹಾರದ ಮೇಲೆ ಹಿಡಿತ ಸಾಧಿಸಲು ಮಾಡಿದ ಸಂಚಾಗಿದೆ. ಇಂದು ಹಲಾಲ್ ಪ್ರಮಾಣ ಪತ್ರವನ್ನು ನೀಡುವ ಜಮಿಯತ್ ಉಲೆಮಾ ಹಿಂದ್ ಸಂಘಟನೆಯು ಭಯೋತ್ಪಾದನಾ ಚಟುವಟಿಕೆಯಲ್ಲಿ ಬಂಧಿಸಲ್ಪಟ್ಟ ಆರೋಪಿಗಳಿಗೆ ಕಾನೂನು ಸಹಾಯ ಮಾಡುವ ಮೂಲಕ ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಬಗ್ಗೆ ತನಿಖೆಯನ್ನು ಮಾಡಬೇಕು ಮತ್ತು ಹಲಾಲ್ ಪ್ರಮಾಣಪತ್ರವನ್ನು ಕೂಡಲೇ ನಿಷೇಧ ಮಾಡಬೇಕು, ಯುಗಾದಿಯ ಸಂದರ್ಭದಲ್ಲಿ ಸರಕಾರವು ಜಟ್ಕಾ ಮಾಂಸದ ವ್ಯವಸ್ಥೆಯನ್ನು ಮಾಡಬೇಕು, ಎಂದರು.
ಶ್ರೀ. ಮುನೇಗೌಡ ಮಾತನಾಡಿ, ಯುಗಾದಿಯ ಹೊಸತೊಡಕಿನ ಸಮಯದಲ್ಲಿ ಹಿಂದೂ ಸಮಾಜವು ಹಲಾಲ್ ಮಾಂಸದ ಬದಲು ಜಟ್ಕಾ ಮಾಂಸವನ್ನು ಖರೀದಿಸಿ’ ಎಂದು ಕರೆ ನೀಡಿದರು.