ಪೂಂಛ್ (ಜಮ್ಮು-ಕಾಶ್ಮೀರ) – ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಇವರು ಇಲ್ಲಿಯ ನವಗ್ರಹ ದೇವಸ್ಥಾನಕ್ಕೆ ಹೋಗಿ ಶಿವಲಿಂಗಕ್ಕೆ ಜಲಾಭಿಷೇಕ ಮಾಡಿ ಪೂಜೆ ಮಾಡಿದರು. ಈ ದೇವಸ್ಥಾನವನ್ನು ನಿರ್ಮಾಣ ಮಾಡಿರುವ ಯಶಪಾಲ ಶರ್ಮ ಇವರ ಪುತ್ತಳಿಯನ್ನು ಸ್ಥಾಪಿಸಲಾಗಿದೆ. ಅದಕ್ಕೂ ಕೂಡ ಅವರು ಪುಷ್ಪ ಅರ್ಪಿಸಿದರು.
(ಸೌಜನ್ಯ – India Today)
ಮೆಹಬೂಬಾ ಮುಫ್ತಿ ಇವರ ನಾಟಕ ! – ಭಾಜಪ
ಈ ಪ್ರಕರಣದಲ್ಲಿ ಭಾಜಪದ ರಾಜ್ಯ ವಕ್ತಾರ ರಣವೀರ ಸಿಂಹ ಇವರು, ಮೆಹಬೂಬಾ ಮುಫ್ತಿ ಇವರು ನಾಟಕ ಮಾಡುತ್ತಿದ್ದಾರೆ. ಮೆಹಬೂಬಾ ಮತ್ತು ಅವರ ಪಕ್ಷಗಳಿಂದ ೨೦೦೮ ರಲ್ಲಿ ‘ಅಮರನಾಥ ಶ್ರಾಯಿನ ಬೋರ್ಡ್’ಗೆ ಭೂಮಿ ನೀಡಲು ವಿರೋಧಿಸಿದ್ದರು. ಈ ಭೂಮಿಯಲ್ಲಿ ಯಾತ್ರಿಕರಿಗಾಗಿ ತಾತ್ಕಾಲಿಕ ತಂಬು ಕಟ್ಟುವುದಿತ್ತು; ಆದರೆ ಮೆಹಬೂಬಾ ಇವರು ಬೋರ್ಡಗೆ ತಾತ್ಕಾಲಿಕ ಸಮಯಕ್ಕಾಗಿ ಭೂಮಿ ಹಸ್ತಾಂತರ ಮಾಡಲು ನಿರಾಕರಿಸಿದ್ದರು. ಜಲಾಭಿಷೇಕದ ನಾಟಕದಿಂದ ಏನು ಸಾಧ್ಯವಿಲ್ಲ. ಹೀಗೆ ನಾಟಕ ಮಾಡಿ ಬದಲಾವಣೆ ಮಾಡಬಹುದಾಗಿದ್ದರೆ ರಾಜ್ಯ ಸಮೃದ್ಧವಾಗುತ್ತಿತ್ತು ಎಂದು ಟೀಕಿಸಿದ್ದಾರೆ.
ಅಮರನಾಥ ದೇಗುಲಕ್ಕೆ ಜಾಗ ನೀಡಲು ತೀವ್ರವಾಗಿ ವಿರೋಧಿಸಿದ್ದ ಮೆಹಬೂಬಾ : ಬಿಜೆಪಿ#Jammukashmir #PDPchief #MehaboobaMufti #Templevisits #Navagrahatemple #Poonch #jalabhishek #Lordshiva #BJPcondemns https://t.co/8DyZrCr3TO
— Asianet Suvarna News (@AsianetNewsSN) March 16, 2023
ಮೆಹಬೂಬಾ ಮುಫ್ತಿ ಅವರ ಕೃತಿ ಇಸ್ಲಾಂ ವಿರೋಧಿ ! – ಮೌಲಾನ (ಇಸ್ಲಾಂ ಅಭ್ಯಾಸಕ ) ಅಸದ ಕಾಸಮಿ
ಜಾತ್ಯತೀತರು ಮತ್ತು ಪ್ರಗತಿ(ಅಧೋಗತಿ)ಪರರು ಇಂತಹವರಿಗೆ ಜಾತ್ಯತೀತತೆಯ ಉಪದೇಶ ಮಾಡದಿರುವುದರ ಪರಿಣಾಮವಾಗಿದೆ ! ಈಗಲಾದರೂ ಅವರಿಗೆ ಉಪದೇಶ ಮಾಡಬಹುದೇ ? ಅಥವಾ ಕೇವಲ ಹಿಂದೂಗಳಿಗೆ ಮಾತ್ರ ಜಾತ್ಯತೀತತೆಯ ಪಾಲನೆ ಮಾಡುತ್ತಾ ಆತ್ಮಹತ್ಯೆ ಮಾಡಿಕೊಳ್ಳುತ್ತಾ ಇರಬೇಕೆ ?
(ಸೌಜನ್ಯ – VK News)
ಮೆಹಬೂಬಾ ಮುಫ್ತಿ ಇವರಿಗೆ ದೇವಬಂದ (ಇಸ್ಲಾಮಿ ಸಂಸ್ಥೆ) ಯಿಂದ ಕೂಡ ವಿರೋಧಿಸಲಾಗಿದೆ. ದೇವಬಂದದ ಮೌಲಾನ ಅಸದ ಕಾಸಮಿ ಇವರು, ಮೆಹಬೂಬಾ ಇವರು ಏನು ಮಾಡಿದ್ದಾರೆ ಅದು ಅಯೋಗ್ಯವಾಗಿದೆ. ಅದು ಇಸ್ಲಾಂನ ವಿರುದ್ಧವಾಗಿದೆ, ಎಂದು ಹೇಳಿದರು.
ಸಂಪಾದಕೀಯ ನಿಲುವುಮೆಹಬೂಬಾ ಮುಫ್ತಿ ಇವರಿಗೆ ಮಸೀದಿಗೆ ಹೋಗಿ ನಮಾಜ್ ಮಾಡಲು ಆಗುವುದಿಲ್ಲ; ಆದರೆ ಅವರು ಹಿಂದುಗಳ ದೇವಸ್ಥಾನಕ್ಕೆ ಹೋಗಿ ಸುಲಭವಾಗಿ ಜಲಾಭಿಷೇಕ ಮಾಡಬಹುದು, ಇದು ಜಾತ್ಯತೀತ ಮತ್ತು ಪ್ರಗತಿ(ಅಧೋಗತಿ)ಪರರಿಗೆ ಗಮನಕ್ಕೆ ಬರುವುದೇ ? ಮೆಹಬೂಬಾ ಮುಫ್ತಿ ಇವರು ಈಗ ರಾಜ್ಯದಲ್ಲಿ ಜಿಹಾದಿ ಭಯೋತ್ಪಾದಕರು ನೆಲಸಮ ಮಾಡಿರುವ ಮತ್ತು ಕಬಳಿಸಿರುವ, ಹಿಂದುಗಳ ದೇವಸ್ಥಾನಗಳು ಮತ್ತೆ ಹಿಂದುಗಳ ವಶಕ್ಕೆ ನೀಡಿ ಅದರ ಜೀರ್ಣೋದ್ಧಾರಕ್ಕಾಗಿ ನೇತೃತ್ವ ವಹಿಸಬೇಕು ಎಂದು ಹಿಂದುಗಳಿಗೆ ಅನಿಸುತ್ತದೆ ! |