ಪಾಕಿಸ್ತಾನದಿಂದ ಬಂದಿದ್ದ ೨೨ ಹಿಂದೂಗಳಿಗೆ ಮಧ್ಯಪ್ರದೇಶದಲ್ಲಿ ತಾತ್ಕಾಲಿಕವಾಗಿ ವಾಸಿಸಲು ಅನುಮತಿ !

ಇಂದೂರಿನ ಶಾಸಕ ಶಂಕರ ಲಾಲವಾನಿ ಇವರ ಜೊತೆ ಪಾಕಿಸ್ತಾನದಿಂದ ಬಂದಿರುವ ೨೨ ಹಿಂದೂಗಳು

ಇಂದೂರ – ಪಾಕಿಸ್ತಾನದ ಮೂಲತಾನನಿಂದ ಹರಿದ್ವಾರಕ್ಕೆ ತನ್ನ ಪೂರ್ವಜರ ಅಸ್ತಿ ವಿಸರ್ಜನೆ ಮಾಡುವುದಕ್ಕಾಗಿ ಬಂದಿರುವ ಎರಡು ಹಿಂದೂ ಕುಟುಂಬದ ೨೨ ಸದಸ್ಯರಿಗೆ ಭಾರತದಲ್ಲಿ ವಾಸಿಸಲು ಅನುಮತಿ ನೀಡಿದ್ದಾರೆ. ಈ ಎಲ್ಲ ನಿರಾಶ್ರಿತರಿಗೆ ಮಧ್ಯಪ್ರದೇಶದಲ್ಲಿನ ಧಾರ ಜಿಲ್ಲೆಯಲ್ಲಿ ವಾಸಿಸಲು ಸ್ಥಳ ನೀಡಿದ್ದಾರೆ.

೨೨ ಹಿಂದೂ ನಿರಾಶ್ರಿತರ ಗುಂಪು ತಾತ್ಕಾಲಿಕ ವೀಸಾದಲ್ಲಿ ಭಾರತಕ್ಕೆ ಬಂದಿದ್ದಾರೆ. ಅವರು ಇಂದೂರಿನ ಶಾಸಕ ಶಂಕರ ಲಾಲವಾನಿ ಇವರನ್ನು ಸಂಪರ್ಕಿಸಿ ಪಾಕಿಸ್ತಾನದಲ್ಲಿನ ಕಿರುಕುಳದ ಬಗ್ಗೆ ಹೇಳಿ ಭಾರತದಲ್ಲಿ ವಾಸಿಸುವ ಇಚ್ಛೆ ವ್ಯಕ್ತಪಡಿಸಿದರು. ಶಾಸಕರು ಗೃಹ ಸಚಿವಾಲಯದ ಜೊತೆ ಚರ್ಚೆ ನಡೆಸಿ ಹಿಂದೂ ನಿರಾಶ್ರಿತರಿಗೆ ಭಾರತದಲ್ಲಿ ವಾಸಿಸಲು ಅನುಮತಿ ಪಡೆಯುವಲ್ಲಿ ಸಹಾಯ ಮಾಡಿದರು. ಶಾಸಕ ಲಾಲವಾನಿ ಇವರು, ಎಲ್ಲರಿಗೂ ತಾತ್ಕಾಲಿಕವಾಗಿ ಭಾರತದಲ್ಲಿ ವಾಸಿಸಲು ಅನುಮತಿ ನೀಡಿದ್ದೇವೆ. ಮುಂದೆ ಅವರು ಸುದೀರ್ಘದ ವಿಸಾಗಾಗಿ ಅರ್ಜಿ ಸಲ್ಲಿಸುವರು, ಅದರ ನಂತರ ಅವರು ಭಾರತದಲ್ಲಿ ವಾಸಿಸಬಹುದು. ಪಾಕಿಸ್ತಾನದಲ್ಲಿ ಹಿಂದೂಗಳು ಅಸುರಕ್ಷಿತರಾಗಿದ್ದಾರೆ, ಅಲ್ಲಿ ಹಿಂದೂಗಳ ಮೇಲೆ ಅನೇಕ ರೀತಿಯ ದೌರ್ಜನ್ಯ ನಡೆಯುತ್ತಿದೆ ಎಂದು ಹೇಳಿದರು.