ಪರೀಕ್ಷೆಯ ಸಮಯದಲ್ಲಿ ದೇವಸ್ಥಾನಗಳ ಉತ್ಸವ ನಿಲ್ಲಿಸುವುದು ಅಯೋಗ್ಯವಾಗಿದೆ !

ಮದ್ರಾಸ್ ಉಚ್ಚ ನ್ಯಾಯಾಲಯದ ಸ್ಪಷ್ಟನೆ !

ಚೆನ್ನೈ (ತಮಿಳುನಾಡು) – ಮದ್ರಾಸ್ ಉಚ್ಚ ನ್ಯಾಯಾಲಯವು ಪರೀಕ್ಷೆಯ ಸಮಯದಲ್ಲಿ ರಾಜ್ಯದಲ್ಲಿನ ‘ಪಂಗುನಿ’ ಉತ್ಸವಕ್ಕೆ ತಡೆ ನೀಡುವ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ತಳ್ಳಿ ಹಾಕಿದೆ. ಮುಖ್ಯ ನ್ಯಾಯಮೂರ್ತಿ ಟಿ. ರಾಜಾ ಮತ್ತು ನ್ಯಾಯಮೂರ್ತಿ ಭರತ ಚಕ್ರವರ್ತಿ ಇವರು, ಪರೀಕ್ಷೆಯ ಸಿದ್ಧತೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗಬಾರದು, ಇದು ಮಹತ್ವದ್ದಾಗಿದೆ; ಆದರೆ ಅದಕ್ಕಾಗಿ ಉತ್ಸವ ನಿಲ್ಲಿಸುವುದು, ಇದು ಯೋಗ್ಯವಲ್ಲ. ವಿದ್ಯಾರ್ಥಿಗಳಿಗೆ ಏಕಾಂತ ದೊರೆಯುವುದಕ್ಕಾಗಿ ಸ್ಥಳ ನಿರ್ಮಾಣ ಮಾಡಲಾಗುವುದು. ಕೇವಲ ಪರೀಕ್ಷೆ ಎಂದರೆ ಜೀವನವಲ್ಲ, ಉತ್ಸವಗಳು ಕೂಡ ಮಹತ್ವದ್ದೇ ಆಗಿದೆ, ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಅದೇ ಸಮಯದಲ್ಲಿ ಪ್ರತ್ಯಕ್ಷ ಪರೀಕ್ಷೆಯ ಸಮಯದಲ್ಲಿ ಧ್ವನಿವರ್ಧಕಗಳ ಉಪಯೋಗ ಮಾಡಬಾರದಂತೆ ನ್ಯಾಯಾಲಯ ಆದೇಶ ನೀಡಿದೆ.

೧. ಅರ್ಜಿದಾರರು, ಅವರ ಮಗ ಮತ್ತು ಮಗಳು ಏಪ್ರಿಲ್ ತಿಂಗಳಲ್ಲಿ ಶಿಕ್ಷಣ ಮಂಡಳಿಯಲ್ಲಿ ನಡೆಯುವ ಪರೀಕ್ಷೆಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅದೇ ಸಮಯದಲ್ಲಿ ಶ್ರೀ ಸರ್ವಸಿಥಿ ವಿನಾಯಗರ, ಶ್ರೀ ಮರಿಅಮ್ಮನ್, ಶ್ರೀ ಕಾಳಿಅಮ್ಮನ ಮತ್ತು ಶ್ರೀ ಮುನಿಯಪ್ಪನ್ ಕದಕದಪ್ಪನ್ ಈ ದೇವಸ್ಥಾನಗಳಲ್ಲಿ ಪಂಗುನಿ ಉತ್ಸವ ಆಚರಿಸಲಾಗುತ್ತದೆ. ಒಂದು ತಿಂಗಳು ಉತ್ಸವಗಳು ನಡೆಯುತ್ತವೆ. ಈ ದೇವಸ್ಥಾನದ ಅಕ್ಕಪಕ್ಕಗಳಲ್ಲಿ ಅನೇಕ ಶಾಲೆಗಳಿವೆ. ಇದರಿಂದ ವಿದ್ಯಾರ್ಥಿಗಳ ಏಕಾಗ್ರತೆಯ ಮೇಲೆ ಪರಿಣಾಮ ಬೀರುತ್ತದೆ. ಸರಕಾರ ದೇವಸ್ಥಾನಗಳ ಉತ್ಸವಕ್ಕೆ ಆದ್ಯತೆ ನೀಡದೇ ಪರೀಕ್ಷೆಗೆ ಗಮನ ನೀಡಬೇಕು. ಇಂತಹ ಉತ್ಸವಗಳನ್ನು ನಿಲ್ಲಿಸಲು ಅಥವಾ ಕೆಲವು ಸಮಯ ನಿಲ್ಲಿಸಲು ಸರಕಾರಕ್ಕೆ ಆದೇಶ ನೀಡಬೇಕು, ಎಂದು ಅರ್ಜಿಯಲ್ಲಿ ಹೇಳಿದ್ದರು.

೨. ನ್ಯಾಯಾಲಯವು ಸರಕಾರದ ಯುಕ್ತಿವಾದದ ಕಡೆಗೂ ಗಮನ ನೀಡಿತ್ತು, ಸರಕಾರ, ಗ್ರಾಮದಲ್ಲಿ ಅಧಿಕಾರಿಗಳು ವಾಯು ಮಾಲಿನ್ಯದ ವಿರೋಧದಲ್ಲಿನ ನಿಯಮದ ಕಡೆಗೆ ಗಮನ ಇಡುವರು ಮತ್ತು ಅದರ ಕಡ್ಡಾಯ ಪಾಲನೆ ಮಾಡಿಸಿಕೊಳ್ಳುವರು. ಹಾಗೂ ಸುರಕ್ಷತೆಯ ಎಲ್ಲಾ ವ್ಯವಸ್ಥೆ ಕೂಡ ಮಾಡುವರು.

ಸಂಪಾದಕೀಯ ನಿಲುವು

ದಿನದಲ್ಲಿ ೫ ಸಲ ಮಸೀದಿ ಮೇಲಿನ ಭೋಂಗಾದ ಧ್ವನಿ ವಿದ್ಯಾರ್ಥಿಗಳ ಪರೀಕ್ಷೆಯ ಸಿದ್ಧತೆಯಲ್ಲಿ ತೊಂದರೆ ಆಗುತ್ತಿದೆ ಎಂದು ಯಾರೂ ನ್ಯಾಯಾಲಯಕ್ಕೆ ಹೋಗುವುದಿಲ್ಲ, ಇದು ಕೂಡ ಅಷ್ಟೇ ಸತ್ಯವಾಗಿದೆ !