ವಾಷಿಂಗ್ಟನ್ (ಯುಎಸ್‌ಎ) – ಅಮೇರಿಕದಲ್ಲಿ ಸಿಲಿಕಾನ್ ಮತ್ತು ಸಿಗ್ನೇಚರ್ ಬ್ಯಾಂಕ್‌ಗಳು ದಿವಾಳಿಯಾದ ನಂತರ, ‘ಫಸ್ಟ ರಿಪಬ್ಲಿಕ್ ಬ್ಯಾಂಕ್’ ಇದು ದಿವಾಳಿಯಾಗುವ ಅಂಚಿನಲ್ಲಿರುವುದು ಕಂಡುಬಂದಿದೆ. ‘ಬ್ಲೂಮ್‌ಬರ್ಗ್’ ಈ ಸಂಸ್ಥೆಯ ಪ್ರಕಾರ, ‘ಫಸ್ಟ್ ರಿಪಬ್ಲಿಕ್ ಬ್ಯಾಂಕ್’ನ ಷೇರು ಮೌಲ್ಯಗಳು ಶೇಕಡಾ ೬೧.೮೩ ರಷ್ಟು ಕುಸಿದಿವೆ. ಕಳೆದೊಂದು ವಾರದಿಂದ ಈ ಕುಸಿತ ನಿರಂತರವಾಗಿ ಮುಂದುವರಿದಿದೆ. ಈ ಬ್ಯಾಂಕಿನ ಷೇರು ಮೌಲ್ಯ ೧೯ ಡಾಲರ್ ಆಗಿದ್ದು, ಇದೇ ಪರಿಸ್ಥಿತಿ ಸಿಲಿಕಾನ್ ಮತ್ತು ಸಿಗ್ನೇಚರ್ ಬ್ಯಾಂಕ್‌ಗಳ ದಿವಾಳಿತನದ ಮೊದಲು ಮತ್ತು ಅವುಗಳ ನಂತರದ ಕಂಡು ಬಂದಿತ್ತು. ಅನಂತರ ಅವುಗಳಿಗೆ ಬೀಗ ಜಡಿಯಲಾಯಿತು. ಹಾಗಾಗಿ ‘ಫಸ್ಟ್ ರಿಪಬ್ಲಿಕ್ ಬ್ಯಾಂಕ್’ನ ಪರಿಸ್ಥಿತಿಯೂ ಇದೇ ರೀತಿ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
अब First Republic Bank पर लटकने वाला है ताला, हफ्ते भर के अंदर अमेरिका में तीसरा बैंक कंगाल! https://t.co/K5RooIq9g3
— AajTak (@aajtak) March 15, 2023
‘ಮೂಡೀಸ್’ ಈ ಸಂಸ್ಥೆಯೂ ಅಮೇರಿಕಾದ ೬ ಬ್ಯಾಂಕ್ ಗಳ ಮೇಲೂ ನಿಗಾ ಇರಿಸಿದೆ. ‘ಫಸ್ಟ್ ರಿಪಬ್ಲಿಕ್ ಬ್ಯಾಂಕ್’ ಹೆಸರು ಮೊದಲ ಸ್ಥಾನದಲ್ಲಿದೆ. ಇತರ ಬ್ಯಾಂಕ್‌ಗಳೆಂದರೆ ಝಿಒನ್ಸ್ ಬ್ಯಾನ್ ಕಾರ್ಪೊರೇಷನ್, ವೆಸ್ಟರ್ನ್ ಏಲಿಯನ್ಸ್ ಬ್ಯಾನ್‌ಕಾರ್ಪ್, ಕ್ಯಾಮೆರಿಕಾ ಇಂಕ್, ಯುಎಂಬಿ ಫೈನಾನ್ಶಿಯಲ್ ಕಾರ್ಪ. ಮತ್ತು ಇಂಟ್ರಸ್ಟ್ ಫೈನಾನ್ಶಿಯಲ್ ಕಾರ್ಪೊರೇಷನ್.
೨೦೦೮ ರಲ್ಲಿ ಅಮೇರಿಕದಲ್ಲಿ ಉಂಟಾದ ಆರ್ಥಿಕ ಹಿಂಜರಿತದಂತೆಯೇ ಇಡೀ ಅಮೆರಿಕದಲ್ಲಿ ಪುನಃ ಇಂತಹ ಪರಿಸ್ಥಿತಿ ತಲೆದೋರಲಿದೆ ಎಂದು ಹೇಳಲಾಗುತ್ತಿದೆ.