ಜಿನ್ನಾ ಮುಸಲ್ಮಾನರಿಗಾಗಿ ದೇಶ ತೆಗೆದುಕೊಂಡ, ಈಗ ಶೇಷ ಉಳಿದಿರುವುದು ಅದು ಕೇವಲ ಹಿಂದೂ ರಾಷ್ಟ್ರವಿದೆ ! – ಸಾಕ್ಷಿ ಮಹಾರಾಜ

ಬರೆಲಿ (ಉತ್ತರಪ್ರದೇಶ) – ಮೌಲಾನಾ ತೌಕಿರ ರಝಾ ಇವರು ನಮಾಜ ಬಗ್ಗೆ ಮಾತನಾಡುವಾಗ ‘ನಾವು ಎಲ್ಲಿ ಇದ್ದೇವೆ ಅಲ್ಲಿ ನಮಾಜ ಮಾಡುವೆವು, ಪೊಲೀಸರು ದೂರ ದಾಖಲಿಸಬೇಕೆಂದರೆ ದಾಖಲಿಸಿಕೊಳ್ಳಲಿ’, ಎಂದು ಬೆದರಿಕೆಯ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಭಾಜಪದ ಮಾಜಿ ಶಾಸಕ ಸಾಕ್ಷಿ ಮಹಾರಾಜರು, ಜಿನ್ನಾ ಮುಸಲ್ಮಾನ ದೇಶ ತೆಗೆದುಕೊಂಡನು, ಆದ್ದರಿಂದ ಈಗ ಉಳಿದಿರುವುದು ಕೇವಲ ಹಿಂದೂ ರಾಷ್ಟ್ರವಿದೆ ಎಂದು ಹೇಳಿದರು.

ಮೌಲಾನಾ ತೌಕಿರ ರಝಾ ಇವರು ‘ನಾವು ತಿರಂಗಾ ಯಾತ್ರೆ ಮಾಡಿ ಆದಷ್ಟು ಬೇಗನೆ ದೆಹಲಿಗೆ ಹೋಗುವೆವು. ಆ ಸಮಯದಲ್ಲಿ ನಾವು ರಸ್ತೆಯಲ್ಲಿ ನಮಾಜ ಮಾಡುವೆವು. ಸರಕಾರಕ್ಕೆ ಯಾವ ಕ್ರಮ ಕೈಗೊಳ್ಳುವುದಿದೆ, ಅವರು ಅದನ್ನು ಈಗಲಿಂದಲೇ ತೆಗೆದುಕೊಳ್ಳಲಿ. ನಾವು ರಸ್ತೆಗಿಳಿದಾಗ ಯಾರ ಮಾತನ್ನು ಕೇಳುವುದಿಲ್ಲ’, ಎಂದೂ ಸಹ ಹೇಳಿದರು. ದೆಹಲಿಗೆ ಹೋಗುವ ಮೊದಲು ಮೌಲಾನ ತೌಕಿರ ರಝಾ ಇವರ ಜೊತೆಗೆ ೫ ಜನರನ್ನು ೭೨ ಗಂಟೆಗಳಿಗಾಗಿ ಬಂಧಿಸಿದ್ದರು. ತೌಕಿರ ರಝಾ ಅವರು ಮಾರ್ಚ್ ೧೫ ರಂದು ದೆಹಲಿಗೆ ಹೋಗುವ ಬಗ್ಗೆ ಘೋಷಣೆ ಮಾಡಿದ್ದರು.

ಮೌಲಾನ ತೌಕಿರ ರಝಾ ಇವರು ಗಲಭೆ ಕೋರರು ! -ವಿಶ್ವ ಹಿಂದೂ ಪರಿಷತ್ತಿನ ನಾಯಕಿ ಸಾದ್ವಿ ಪ್ರಾಚಿ

೨೦೧೦ ರಲ್ಲಿ ಬರೆಲಿಯಲ್ಲಿ ಯಾವ ಗಲಭೆ ನಡೆದಿತ್ತು, ಅದನ್ನು ಮೌಲಾನ ತೌಕಿರ ರಝಾ ಇವರೇ ಮಾಡಿಸಿದ್ದರು, ಇದು ದೇಶಕ್ಕೆ ತಿಳಿದಿದೆ. ಅವರು ಗಲಭೆ ಕೋರರರಾಗಿದ್ದಾರೆ, ಎಂದು ಬರೆಲಿಯ ವಿಶ್ವ ಹಿಂದೂ ಪರಿಷತ್ತಿನ ನಾಯಕಿ ಸಾದ್ವಿ ಪ್ರಾಚಿ ಇವರು ಹೇಳಿದರು. ಇದು ೨೦೨೩ ರ ಉತ್ತರ ಪ್ರದೇಶವಾಗಿದೆ. ಮುಖ್ಯಮಂತ್ರಿ ಸ್ಥಾನದಲ್ಲಿ ಯೋಗಿ ಬಾಬಾ ಕುಳಿತಿದ್ದಾರೆ. ಅವರಲ್ಲಿ ಎಲ್ಲರಿಗೂ ಚಿಕಿತ್ಸೆ ದೊರೆಯುತ್ತದೆ, ಎಂದು ಸಾಧ್ವಿ ಹೇಳಿದರು.

(ಸೌಜನ್ಯ : Zee News)