ಕರ್ನಾಟಕದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಮಸೀದಿ ಮೇಲಿನ ಧ್ವನಿವರ್ಧಕಗಳನ್ನು ತೆರೆವುಗೊಳಿಸುವೆವು !- ಭಾಜಪದ ನಾಯಕ ಈಶ್ವರಪ್ಪ

ಭಾಜಪದ ನಾಯಕ ಈಶ್ವರಪ್ಪ ಇವರ ಆಶ್ವಾಸನೆ !

ಭಾಜಪದ ನಾಯಕ ಈಶ್ವರಪ್ಪ

ಬೆಂಗಳೂರು – ಧ್ವನಿವರ್ಧಕಗಳಿಂದ ವಿದ್ಯಾರ್ಥಿಗಳಿಂದ ರೋಗಿಗಳ ವರೆಗೆ ಎಲ್ಲರೂ ಚಿಂತೆಯಲ್ಲಿದ್ದಾರೆ. ಕರ್ನಾಟಕದಲ್ಲಿ ಪರೀಕ್ಷೆಗಳು ನಡೆಯುತ್ತಿದ್ದು ಧ್ವನಿವರ್ಧಕಗಳ ಧ್ವನಿಯಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಕರ್ನಾಟಕದ ವಿಧಾನಸಭೆ ಚುನಾವಣೆಯ ನಂತರ ರಾಜ್ಯದಲ್ಲಿ ನಮ್ಮ (ಭಾಜಪದ) ಸರಕಾರ ಬಂದರೆ, ಎಲ್ಲಾ ಮಸೀದಿಗಳ ಮೇಲಿನ ಧ್ವನಿವರ್ಧಕಗಳನ್ನು ತಕ್ಷಣ ತೆರವುಗೊಳಿಸಲಾಗುವುದು, ಎಂದು ಭಾಜಪದ ಹಿರಿಯ ನಾಯಕ ಮತ್ತು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಇವರು ಒಂದು ದೈನಿಕಕ್ಕೆ ನೀಡಿರುವ ಸಂದರ್ಶನದಲ್ಲಿ ಆಶ್ವಾಸನೆ ನೀಡಿದರು. 2 ದಿನಗಳ ಹಿಂದೆ ಒಂದು ಸಭೆಯಲ್ಲಿ ಈಶ್ವರಪ್ಪ ಇವರು ‘ಅಲ್ಲಾಗೆ ಕೇಳಿಸುವುದಿಲ್ಲವೇ ? ಅವನಿಗೆ ನಮಾಜ್ ಮೂಲಕ ಕರೆಯಲು ಧ್ವನಿ ವರ್ಧಕಗಳು ಏಕೆ ಬೇಕಾಗುತ್ತದೆ ?’ ಎಂದು ಹೇಳಿಕೆ ನೀಡಿದ್ದರು.

೧. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ನಿಮ್ಮ ಸರಕಾರವೇ ಇದೆ, ಹಾಗಾದರೆ ನೀವು ಮಸೀದಿಗಳ ಮೇಲಿನ ಧ್ವನಿವರ್ಧಕಗಳನ್ನು ಏಕೆ ನಿಷೇಧಿಸುವುದಿಲ್ಲ ? ಈ ಪ್ರಶ್ನೆಗೆ ಉತ್ತರಿಸುತ್ತಾ ಈಶ್ವರಪ್ಪ ಇವರು, ನಾನು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಧ್ವನಿವರ್ಧಕಗಳ ಮೇಲೆ ತಕ್ಷಣ ಕ್ರಮ ಕೈಗೊಳ್ಳಲು ವಿನಂತಿಸುತ್ತೇನೆ.

೨. ಎಲ್ಲಿ ಹಿಂದುಗಳ ದೇವಸ್ಥಾನಗಳನ್ನು ಧ್ವಂಸಗೊಳಿಸಿ ಮಸೀದಿ ಕಟ್ಟಿದ್ದಾರೆ, ಅಲ್ಲಿ ನಾವು ಮತ್ತೆ ದೇವಸ್ಥಾನಗಳನ್ನು ಕಟ್ಟುವೆವು. ೩೬ ಸಾವಿರ ದೇವಸ್ಥಾನಗಳನ್ನು ಕೆಡವಿ ಮಸೀದಿಗಳನ್ನು ಕಟ್ಟಿದ್ದಾರೆ ಎಂಬುದು ನಾನು ಒಂದು ಲೇಖನದಲ್ಲಿ ಓದಿದ್ದೇನೆ. ನಿಜವಾದ ಸಂಖ್ಯೆ ನನಗೆ ತಿಳಿದಿಲ್ಲ. ನಾನು ಅದರ ಬಗ್ಗೆ ಈಗ ಏನು ಮಾತನಾಡುವುದಿಲ್ಲ. ಮುಂದೆ ಏನು ಮಾಡಬಹುದು ಅದನ್ನು ನೋಡೋಣ. ನಾನು ಕೇವಲ ನನ್ನ ಮನಸ್ಸಿನಲ್ಲಿ ಏನಿದೆ ಅದನ್ನು ಹೇಳಿದ್ದೇನೆ, ಎಂದು ಈಶ್ವರಪ್ಪ ಇವರು ಉತ್ತರಿಸಿದರು.

ಸಂಪಾದಕರ ನಿಲುವು

* ಈಗ ಯಾವ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ, ಅಲ್ಲಿ ಅವರು ಮಸೀದಿ ಮೇಲಿನ ಭೊಂಗಾ ತೆಗೆಯಬೇಕೆಂದು ಹಿಂದುಗಳಿಗೆ ಅನಿಸುತ್ತದೆ !