ನವದೆಹಲಿ – ನಮ್ಮ (ಭಾಜಪ) ಸರಕಾರ ಬಂದಾಗಿನಿಂದ ನಾವು ಈ ದೇಶವನ್ನು ನಿಜವಾದ ಅರ್ಥದಿಂದ ಜಾತ್ಯತೀತ ದೇಶವನ್ನಾಗಿ ಮಾಡಲು ಪ್ರಯತ್ನಿಸಿದ್ದೇವೆ. ಈ ಮೊದಲು ಕಾಂಗ್ರೆಸ್ ದೇಶವನ್ನು ಸಂವಿಧಾನತ್ಮಕವಾಗಿ ಭಾಗಶಃ ಮುಸ್ಲಿಂ ದೇಶವನ್ನಾಗಿ ಮಾಡಿತ್ತು ಎಂದು ಭಾಜಪ ಶಾಸಕ ಸುಧಾಂಶು ತ್ರಿವೇದಿ ಇಲ್ಲಿನ ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು. ಶಾಸಕ ತ್ರಿವೇದಿಯವರಿಗೆ ಹಿಂದೂ ರಾಷ್ಟ್ರದ ಕಲ್ಪನೆ ವಿಷಯದಲ್ಲಿ ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡುತ್ತಿದ್ದರು.
ಶಾಸಕ ತ್ರಿವೇದಿಯವರು ತಮ್ಮ ಮಾತನ್ನು ಮುಂದುವರಿಸಿ,
1. ನನಗೆ ಜಗತ್ತಿನಲ್ಲಿ ಒಂದಾದರೂ ಜಾತ್ಯತೀತ ದೇಶವನ್ನು ತೋರಿಸಿರಿ. ಎಲ್ಲಿ ಶರೀಯತ ಮತ್ತು ಸರ್ವೋಚ್ಚ ನ್ಯಾಯಾಲಯದ ನಡುವೆ ಭಿನ್ನಾಭಿಪ್ರಾಯ ಮೂಡಿದರೆ ದೇಶದ ಆಡಳಿತಾರೂಢ ಪಕ್ಷ ಸಂಸತ್ತಿನಲ್ಲಿ ಕಾಯಿದೆ ಮಾಡಿ ಸಂವಿಧಾನ ಬದಲಾಯಿಸಿ ಶರೀಯತ ಸರ್ವೋಚ್ಚ ನ್ಯಾಯಾಲಯಕ್ಕಿಂತ ಶ್ರೇಷ್ಠವೆಂದು ನಿರ್ಧರಿಸುತ್ತದೆ ? ತ್ರಿವಳಿ ತಲಾಕ್ ಮತ್ತು ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಅಸ್ತಿತ್ವದಲ್ಲಿರುವ ಒಂದಾದರೂ ದೇಶವನ್ನು ತೋರಿಸಿರಿ.
2. ಭಾರತ ಜಗತ್ತಿನ ಒಂದೇ ಒಂದು ದೇಶವಾಗಿದ್ದು ಅಲ್ಲಿ ಎಲ್ಲ ಧರ್ಮದವರು ಬಾಳುತ್ತಾರೆ. ಪಾರಸಿ ಧರ್ಮ ಅದರ ಉಗಮಸ್ಥಾನದಲ್ಲಿಯೇ ಮುಕ್ತಾಯಗೊಂಡಿತು; ಆದರೆ ಅದು ಭಾರತದಲ್ಲಿ ಅಸ್ತಿತ್ವದಲ್ಲಿದೆ. ಇಂದು ಈ ಧರ್ಮದ ಅನೇಕ ಜನರು ಉದ್ಯಮಿಗಳಾಗಿದ್ದಾರೆ. ಜ್ಯೂ ಜನರ ಮೇಲೆ ಎಲ್ಲ ಕಡೆಗಳಲ್ಲಿ ಅತ್ಯಾಚಾರ ನಡೆಯಿತು; ಆದರೆ ಭಾರತದಲ್ಲಿ ಹಾಗೆ ಆಗಲಿಲ್ಲ. ಆದರೂ ಈ ಹಿಂದೂ ಸಂಸ್ಕೃತಿಯನ್ನು ‘ಮತಾಂಧ’ ಎಂದು ಅವಮಾನಿಸಲಾಗುತ್ತದೆ.
Lokmat National Conclave: सुधांशु त्रिवेदी बोले- कांग्रेस ने देश को बनाया मुस्लिम राष्ट्र, हमने सेकुलर राष्ट्र बनाने का किया कामhttps://t.co/qeng8MK3Ui@SudhanshuTrived @rishidarda @vijayjdarda #LokmatParliamentaryAwards
— लोकमत हिन्दी (@LokmatNewsHindi) March 14, 2023
ಮುಸ್ಲಿಂ ದೇಶದಲ್ಲಿ ಬಾಂಬ್ ಸ್ಫೋಟ ಆಗುತ್ತದೆ !
20 ಕೋಟಿ ಮುಸಲ್ಮಾನರು ಇರು ಜಗತ್ತಿನಲ್ಲಿ ಭಾರತ ಒಂದೇ ದೇಶವಾಗಿದೆ; ಆದರೆ ಮಸೀದಿಯಲ್ಲಿ ಬಾಂಬ್ ಸ್ಪೋಟ ನಡೆಯುವುದಿಲ್ಲ. ಆದರೆ ಮುಸ್ಲಿಂ ದೇಶಗಳಲ್ಲಿ ಬಾಂಬ್ ಸ್ಪೋಟ ಆಗುತ್ತದೆ ಎಂದೂ ಶಾಸಕ ತ್ರಿವೇದಿ ಹೇಳಿದರು.
ಹಿಂದೂ ಯಾರನ್ನು ಹಿಂದೂ ಧರ್ಮ ಸ್ವೀಕರಿಸುವಂತೆ ಬಲವಂತ ಮಾಡುವುದಿಲ್ಲ !
ಕುಂಭಪರ್ವದಲ್ಲಿ ಕೋಟ್ಯಂತರ ಜನರು ಭಾಗವಹಿಸುತ್ತಾರೆ. ಅದರಲ್ಲಿ ಸಾವಿರಾರು ಪರಕೀಯ ಪ್ರವಾಸಿಗರು ಇರುತ್ತಾರೆ. ಯಾವುದೇ ಇತರ ಧರ್ಮದವರ ಕಾರ್ಯಕ್ರಮದಲ್ಲಿ ಬೇರೆ ಧರ್ಮದವರು ಹೋಗುತ್ತಾರೆಯೇ ? ಆದರೆ ಕುಂಭಪರ್ವದಲ್ಲಿ ಯಾರನ್ನಾದರೂ ‘ಹಿಂದೂ ಆಗುವಂತೆ’ ಹೇಳಲಾಗುತ್ತದೆಯೇ? ಅದು ಉದಾರತೆಯ ಮಹಾನತೆಯಾಗಿದೆ ಎಂದು ಶಾಸಕ ತ್ರಿವೇದಿಯವರು ಹೇಳಿದರು.