ಸೌದಿ ಅರೇಬಿಯಾದಲ್ಲಿ ರಂಜಾನ್ ಸಮಯದಲ್ಲಿ ಮಸೀದಿಗಳಲ್ಲಿನ ಧ್ವನಿವರ್ಧಕಗಳ ಮೇಲೆ ನಿಷೇಧ !

ಇಫ್ತಾರ್ ಕೂಟಗಳಿಗೂ ನಿಷೇಧ !

ರಿಯಾಧ್ (ಸೌದಿ ಅರೇಬಿಯಾ) – ಮಾರ್ಚ್ 22 ರಂದು ಆರಂಭವಾಗಲಿರುವ ರಂಜಾನ್ ತಿಂಗಳ ಹಿನ್ನಲೆಯಲ್ಲಿ ಸೌದಿ ಅರೇಬಿಯಾ ಹಲವಾರು ನಿರ್ಬಂಧಗಳನ್ನು ವಿಧಿಸಿದೆ. ಇದರ ಪ್ರಕಾರ ಮಸೀದಿಗಳಲ್ಲಿ ಧ್ವನಿವರ್ಧಕ, ಇಫ್ತಾರ್ ಕೂಟಗಳನ್ನು ನಿಷೇಧಿಸಲಾಗಿದೆ.

(ಸೌಜನ್ಯ – newsX)

ಸೌದಿಯ ಇಸ್ಲಾಮಿಕ್ ವ್ಯವಹಾರಗಳ ಸಚಿವ ಶೇಖ್ ಡಾಕ್ಟರ್ ಅಬ್ದುಲ್ ಲತೀಫ್ ಬಿನ್ ಅಬ್ದುಲ್ ಅಜೀಜ್ ಅಲ್-ಶೇಖ್ ಅವರು 10 ಅಂಶಗಳ ನಿರ್ದೇಶನವನ್ನು ಹೊರಡಿಸಿದ್ದಾರೆ. ಸಣ್ಣಪ್ರಮಾಣದಲ್ಲಿ ನಮಾಜ್ ಮತ್ತು ಇಡೀ ರಾತ್ರಿ ಮಕ್ಕಳನ್ನು ಮಸೀದಿಗಳಿಗೆ ಕರೆತರದಂತೆ ಸೂಚನೆಗಳನ್ನು ಒಳಗೊಂಡಿದೆ.

ಸಂಪಾದಕೀಯ ನಿಲುವು

ಹೀಗೆ ಭಾರತದಲ್ಲಿ ಎಂದಾದರೂ ಸಂಭವಿಸುತ್ತದೆಯೇ ?