ಜೌಹರ ಮಹಮೂದನಿಂದ ಡಾ. ಸುಮೇಧಾ ಶರ್ಮಾಳ ಹತ್ಯೆ

ಲವ್ ಜಿಹಾದಗೆ ಮತ್ತೊಂದು ಬಲಿ

ಜಮ್ಮೂ- ಇಲ್ಲಿ ಜೌಹರ ಮಹಮೂದ ತನ್ನ ಪ್ರಿಯತಮೆ ಡಾ. ಸುಮೇಧಾಳನ್ನು ಮಾಂಸ ಕತ್ತರಿಸುವ ಚೂರಿಯಿಂದ ಹತ್ಯೆ ಮಾಡಿದನು. ಬಳಿಕ ಆತನೂ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದನು. ಈ ಪ್ರಕರಣದಲ್ಲಿ ಪೊಲೀಸರು ಜೌಹರನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅವನ ಮೇಲೆ ಚಿಕಿತ್ಸೆ ಮುಂದುವರಿದಿದೆ. ಡಾ. ಸುಮೇಧಾ ಜಮ್ಮುವಿನ ತಾಲಾಬ ತಿಲ್ಲೊ ಪ್ರದೇಶದಲ್ಲಿ ವಾಸಿಸುತ್ತಿದ್ದಳು. ಹಾಗೂ ಆರೋಪಿ ಜೌಹರ ಡೊಡಾ ಜಿಲ್ಲೆಯ ಭದ್ರವಾಹದಲ್ಲಿ ವಾಸಿಸುತ್ತಿದ್ದನು.

1. ಜೌಹರನು ತನ್ನ ಫೇಸಬುಕ ಖಾತೆಯ ಮೇಲೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪೋಸ್ಟ ಮಾಡಿದ್ದನು. ಇದರ ಮಾಹಿತಿ ಅವನ ಸಂಬಂಧಿಕರಿಗೆ ಸಿಗುತ್ತಲೇ ಅವರು ಪೊಲೀಸರಿಗೆ ಹೇಳಿದರು. ಪೊಲೀಸರು ಜೌಹರ ಮನೆಗೆ ತಲುಪಿದಾಗ, ಬಾಗಿಲು ಒಳಗಿನಿಂದ ಮುಚ್ಚಿರುವುದು ಕಂಡು ಪೊಲೀಸರು ಬಾಗಿಲು ಮುರಿದು ಒಳಗೆ ಹೋದರು. ಅಲ್ಲಿ ಡಾ. ಸುಮೇಧಾ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿತು ಹಾಗೂ ಜೌಹರ ಗಾಯಗೊಂಡಿರುವ ಸ್ಥಿತಿಯಲ್ಲಿ ಕಂಡು ಬಂದನು. ಪೊಲೀಸರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದರು; ಆದರೆ ಡಾ. ಸುಮೇಧಾ ಸಾವನ್ನಪ್ಪಿದ್ದಳು. ಜೌಹರ ಮೇಲೆ ಚಿಕಿತ್ಸೆ ಮುಂದುವರಿದಿದೆ. ಪೊಲೀಸರು ಜೌಹರಮೇಲೆ ಹತ್ಯೆಯ ದೂರನ್ನು ದಾಖಲಿಸಿದೆ.

2. ಪೊಲೀಸರು ನೀಡಿರುವ ಮಾಹಿತಿಯನುಸಾರ ಡಾ. ಸುಮೇಧಾ ಶರ್ಮಾ ಮತ್ತು ಜೌಹರ ಇವರಲ್ಲಿ ಪ್ರೇಮ ಸಂಬಂಧವಿತ್ತು. ಇಬ್ಬರೂ ಜಮ್ಮೂವಿನ ಡೆಂಟಲ ಕಾಲೇಜಿನಲ್ಲಿ ಕಲಿಯುತ್ತಿದ್ದರು. ಶಿಕ್ಷಣ ಪೂರ್ಣವಾದ ಬಳಿಕ ಸುಮೇಧಾ ಶರ್ಮಾ ಜಮ್ಮೂ-ಕಾಶ್ಮೀರದಿಂದ ಸ್ವಲ್ಪ ದೂರದಲ್ಲಿರುವ ಒಂದು ವಿಶ್ವವಿದ್ಯಾಲಯದಿಂದ ಎಂ.ಡಿ.ಎಸ್. ಶಿಕ್ಷಣ ಪಡೆಯುತ್ತಿದ್ದಳು. ಹೋಳಿಯ ರಜೆಯ ನಿಮಿತ್ತದಿಂದ ಡಾ. ಸುಮೇಧಾ ಜಮ್ಮುವಿನ ಅವಳ ಮನೆಗೆ ಬಂದಿದ್ದಳು. ಬಳಿಕ ಜೌಹರನನ್ನು ಭೇಟಿಯಾಗಲು ಅವನ ಮನೆಗೆ ಹೋಗಿದ್ದಳು. ಆ ಸಂದರ್ಭದಲ್ಲಿ ಇಬ್ಬರಲ್ಲಿ ಯಾವುದೋ ಕಾರಣಕ್ಕೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಜೌಹರನು ಅಡುಗೆ ಮನೆಯಿಂದ ಚೂರಿಯನ್ನು ತಂದು ಸುಮೇಧಾಳ ಮೇಲೆ ಪ್ರಹಾರ ಮಾಡಿದನು ಮತ್ತು ಬಳಿಕ ತನ್ನ ಮೇಲೆಯೂ ಚೂರಿ ಹಾಕಿಕೊಂಡನು.