‘ಹೆಚ್೩ಎನ್೨ ಇನ್ಫ್ಲುಯೆನ್ಸ್’ ದಿಂದ ಇಬ್ಬರ ಸಾವು

ನವ ದೆಹಲಿ – ದೇಶದಲ್ಲಿ ‘ಹೆಚ್೩ ಎನ್೨ ಇನ್ಫ್ಲುಯೆನ್ಸ್’ ಈ ಜ್ವರದಿಂದ ೨ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಇಲ್ಲಿಯವರೆಗೆ ೯೦ ರೋಗಿಗಳಲ್ಲಿ ಈ ಜ್ವರ ಕಂಡುಬಂದಿದೆ. ಹರಿಯಾಣ ಮತ್ತು ಕರ್ನಾಟಕದಲ್ಲಿ ಈ ಮೃತ್ಯು ಆಗಿದೆ.

ಕಳೆದ ೨ ತಿಂಗಳಿಂದ ದೆಹಲಿ ಸಹಿತ ಭಾರತದಲ್ಲಿನ ಅನೇಕ ಪ್ರದೇಶದಲ್ಲಿ ಇನ್ಫ್ಲುಯೆನ್ಸ್ ದ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಇದರಲ್ಲಿ ರೋಗಿಗಳಲ್ಲಿ ಕೊರೋನಾ ರೀತಿ ಲಕ್ಷಣಗಳು ಕಂಡು ಬರುತ್ತಿದೆ. ಈ ಸಂದರ್ಭದಲ್ಲಿ ದೆಹಲಿಯ ‘ಏಮ್ಸ್’ ನ ಮಾಜಿ ಸಂಚಾಲಕ ಡಾಕ್ಟರ್ ರಣದೀಪ ಗುಲೆರಿಯಾ ಇವರು, ಈ ಜ್ವರ ಕೊರೋನಾದಂತೆ ಹರಡುತ್ತದೆ. ಅದನ್ನು ತಡೆಯುವುದಕ್ಕಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಮತ್ತು ಮೇಲಿಂದ ಮೇಲೆ ಕೈಯನ್ನು ತೊಳೆಯುವಂತೆ ಕರೆ ನೀಡಿದ್ದಾರೆ.