ಬೆಂಗಳೂರು (ಕರ್ನಾಟಕ) – ಕರ್ನಾಟಕದ ಕೋಲಾರ ಮತಗಟ್ಟೆಯ ಭಾಜಪದ ಸಂಸದರಾದ ಎಮ್. ಮುನಿಸ್ವಾಮಿಯವರು ಚನ್ನಯಿಹಾ ದೇವಸ್ಥಾನದ ಒಂದು ಪ್ರದರ್ಶನವನ್ನು ಉದ್ಘಾಟಿಸಿದ ನಂತರ ಒಂದು ಮಾರಾಟ ಕೇಂದ್ರದಲ್ಲಿ ಬಟ್ಟೆ ಮಾರುವ ಮಹಿಳೆಗೆ ಗಂಡನು ಬದುಕಿರುವಾಗಲೂ ಟಿಕಲಿಯನ್ನು ಹಚ್ಚದಿರುವ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಮುನಿಸ್ವಾಮಿಯವರು ಆ ಮಹಿಳಿಗೆ ‘ಮೊದಲು ಹಣೆಗೆ ಟಿಕಲಿ ಹಚ್ಚು. ನಿನ್ನ ಗಂಡ ಬದುಕಿದ್ದಾನಲ್ಲವೇ ? ನಿನಗೆ ‘ಕಾಮನ ಸೆನ್ಸ್’ (ಸಾಮಾನ್ಯ ಜ್ಞಾನ) ಇಲ್ಲವೇ ?’ ಎಂದು ಹೇಳಿ ಆ ಮಹಿಳೆಗೆ ಟಿಕಲಿ ನೀಡುವಂತೆ ತಮ್ಮ ಸಹಕಾರಿಗೆ ತಿಳಿಸಿದರು. ಈ ಘಟನೆಯ ವಿಡಿಯೋ ಸಮಾಜಿಕ ಮಾಧ್ಯಮಗಳಿಂದ ಪ್ರಸಾರಿತವಾದ ನಂತರ ವಾದ ನಿರ್ಮಾಣವಾಯಿತು. ಕಾಂಗ್ರೆಸ್ ಈ ಘಟನೆಯನ್ನು ನಿಷೇಧಿಸಿದೆ. ‘ಇಂತಹ ಘಟನೆಗಳಿಂದ ಭಾಜಪದ ಸಂಸ್ಕೃತಿ ಕಂಡು ಬರುತ್ತದೆ’ ಎಂದೂ ಟೀಕಿಸಿದೆ. (ಯಾರಾದರೂ ಕಾಂಗ್ರೆಸ್ಸಿನ ಈ ಟೀಕೆಯಿಂದ ಅವರ ವಿಕೃತಿ ಕಂಡುಬರುತ್ತದೆ, ಎಂದು ಹೇಳಿದರೆ ಅದರಲ್ಲಿ ತಪ್ಪೇನಿದೆ ! – ಸಂಪಾದಕರು)
ನಿನ್ನ ಗಂಡ ಬದುಕಿದ್ದಾನೆ ತಾನೇ?: ಹಣೆಗೆ ಬೊಟ್ಟು ಇಟ್ಟುಕೊಂಡಿಲ್ಲವೆಂದು ಮಹಿಳೆಯ ನಿಂದಿಸಿದ ಸಂಸದ ಮುನಿಸ್ವಾಮಿ#muniswamy pic.twitter.com/hvinI9VJ8T
— Prajavani (@prajavani) March 8, 2023
ಕಾಂಗ್ರೆಸ್ಸಿನಿಂದ ಟೀಕೆ !
ಸಂಪಾದಕೀಯ ನಿಲುವು
|