ಪಾಕಿಸ್ತಾನ ಅಣುಬಾಂಬ್‌ ಮಾರಾಟ ಮಾಡುವುದು ಜಗತ್ತಿಗೇ ಅಪಾಯಕಾರಿ !

(ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ

ಸದ್ಯ ಪಾಕಿಸ್ತಾನದ ಪರಿಸ್ಥಿತಿ ತೀರ ಶೋಚನೀಯವಾಗಿದೆ. ಅದಕ್ಕೆ ಚೀನಾ ಅಥವಾ ಮುಸಲ್ಮಾನ ರಾಷ್ಟ್ರಗಳಿಂದ ಹಣ ಸಿಗುತ್ತಿಲ್ಲ. ಹಾಗೆಯೇ ಜಗತ್ತಿನ ಎಲ್ಲಕ್ಕಿಂತ ದೊಡ್ಡ ಹಣಕಾಸು ಸಂಸ್ಥೆ ‘ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐ.ಎಮ್‌.ಎಫ್‌.)’ ಸಹ ಅದಕ್ಕೆ ಹಣ ನೀಡಲು ತಯಾರಿಲ್ಲ. ಹಾಗಾಗಿ ಹಣ ಪಡೆಯಲು ಪಾಕಿ ಸ್ತಾನದ  ಬಳಿಯಿರುವ ಅಣುಬಾಂಬ್‌ ಮತ್ತು ಅಣ್ವಸ್ತ್ರಗಳನ್ನು ಮಾರಾಟ ಮಾಡಬಹುದು, ಎಂಬ ಭಯ ಹುಟ್ಟಿದೆ. ಪಾಕಿಸ್ತಾನದ ತನ್ನ ಅಣ್ವಸ್ತ್ರಗಳನ್ನು ಮುಸಲ್ಮಾನ ರಾಷ್ಟ್ರಗಳಿಗೆ ಅಥವಾ ಭಯೋತ್ಪಾದನಾ ಸಂಘಟನೆಗಳಿಗೆ ಮಾರಬಹುದು. ಇದರಿಂದ ಸಂಪೂರ್ಣ ಜಗತ್ತಿಗೆ ಅಣುಬಾಂಬ್‌ನ ಅಪಾಯವಾಗಿ ಜಗತ್ತಿನ ಶಾಂತಿಭಂಗವಾಗಬಹುದು. ಇದರ ಬಗ್ಗೆ ಈ ಲೇಖನದಲ್ಲಿ ನೋಡೋಣ.

೧. ಪಾಕಿಸ್ತಾನದಿಂದ ಯಾವದೇಶ ಅಣುಬಾಂಬ್‌ ಖರೀದಿಸಬಹುದು ?

ಪಾಕಿಸ್ತಾನದ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿರುವುದರಿಂದ ಅದು ತನ್ನಲ್ಲಿರುವ ಅಣುಬಾಂಬ್‌ ಯಾರಿಗೆ ಮಾರಬಹುದು ?ಇ ದನ್ನು ತಿಳಿದುಕೊಳ್ಳುವುದು ಉತ್ಸುಕತೆಯ ವಿಷಯವಾಗಿದೆ. ಪಾಕಿಸ್ತಾನ ಅಣುಬಾಂಬ್‌ ತಯಾರಿಸಲು ಬೇಕಾದ ಫಾರ್ಮುಲಾ ಮತ್ತು ಅದಕ್ಕೆ ಬೇಕಾಗುವ ಪ್ಲುಟೋನಿಯಮ್ನ್ನು ಕದ್ದು ತಂದಿತ್ತು. ಆದುದರಿಂದ ಪಾಕಿಸ್ತಾನ ಇಂತಹ ಅಣುಬಾಂಬ್‌ಗಳನ್ನು ಮಾರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಮುಸಲ್ಮಾನ ರಾಷ್ಟ್ರಗಳು ಶಿಯಾ ಮತ್ತು ಸುನ್ನಿ ಎಂಬ ಎರಡು ಗುಂಪುಗಳಲ್ಲಿ ವಿಭಜನೆಯಾಗಿವೆ. ಅವುಗಳಲ್ಲಿ ಪರಸ್ಪರ ಹಗೆತನವಿದೆ. ಶಿಯಾಗಳ ಪ್ರಮುಖ ದೇಶವಾಗಿರುವ ಇರಾನ್‌ನ ಬಳಿ ಅಣ್ವಸ್ತ್ರಗಳಿವೆ, ಆದರೆ ಅವು ಬಹಳ ಕಡಿಮೆ ಪ್ರಮಾಣದಲ್ಲಿವೆ, ಆದರೂ ಇರಾನೀ ಶಸ್ತ್ರಗಳನ್ನು ಖರೀದಿಸುವುದಿಲ್ಲ. ಸುನ್ನಿ ರಾಷ್ಟ್ರಗಳು, ಅಂದರೆ ಸೌದಿ ಅರೇಬಿಯಾದ ನೇತೃತ್ವದಲ್ಲಿ ಈ ಅಣುಬಾಂಬ್‌ಗಳು ಇರುವುದರಿಂದ ಅವರಿಗೆ ಮಾರಾಟ ಮಾಡಿ ಪಾಕ್‌ಗೆ ಯಾವುದೇಲಾಭವಿಲ್ಲ. ಆಗ ತುರ್ಕಿಯಂತಹ ದೇಶವು ಈ ಅಣುಬಾಂಬ್‌ ಗಳನ್ನು ಖರೀದಿಸಬಹುದು; ಏಕೆಂದರೆ ಅದಕ್ಕೆ ಮುಸಲ್ಮಾನ ರಾಷ್ಟ್ರಗಳಲ್ಲಿ ಮಹತ್ವದ ಸ್ಥಾನವನ್ನು ನಿರ್ಮಿಸಬೇಕಿದೆ. ಸದ್ಯ ಅದರ ಆರ್ಥಿಕ ಸ್ಥಿತಿಯೂ ಸರಿಯಿಲ್ಲ. ಅಲ್ಲಿ ಇತ್ತೀಚೆಗಷ್ಟೇ ಭೂಕಂಪವಾಗಿದೆ ಮತ್ತು ಈಗ ಚುನಾವಣೆಯೂ ನಡೆಯಲಿದೆ. ಹಾಗಾಗಿ ಅದುವೂ ಅಣು ಬಾಂಬ್‌ ಖರೀದಿಸುವ ಸಾಧ್ಯತೆ ಕಡಿಮೆ.

೨. ಪಾಕಿಸ್ತಾನ್‌ ‘ಡರ್ಟಿ ಅಣುಬಾಂಬ್’ ಮಾರುವ ಸಾಧ್ಯತೆ

ಭಯೋತ್ಪಾದನೆಯನ್ನು ಮಾಡುವ ಸಂಘಟನೆಗಳಿಗೆ ಅಣು ಬಾಂಬ್‌ ಮಾರಾಟ ಮಾಡಬಹುದೇ ?  ಭಯೋತ್ಪಾದಕ ಸಂಘಟನೆಗಳ ಮೇಲೆ ಇಡೀ ಜಗತ್ತಿನ ನಿಗಾ ಇರುತ್ತದೆ. ಆದುದರಿಂದ ಇಂತಹ ಸಾಧ್ಯತೆ ಇಲ್ಲ. ಅಣುಬಾಂಬ್‌ಗಳನ್ನು ಹಾಗೆಯೇ ತೆಗೆದುಕೊಂಡು ಹೋಗಲು ಬರುವುದಿಲ್ಲ ಅದರ ಬಳಕೆಗೆ ಓರ್ವ ವಿಜ್ಞಾನಿಯ ಆವಶ್ಯಕತೆಯಿರುತ್ತದೆ, ಹಾಗೆಯೇ ಅವುಗಳನ್ನು ತೆಗೆದುಕೊಂಡು ಹೋಗಲು ಕ್ಯಾರಿಯರಗಳು, ಅಂದರೆ ಕ್ಷಿಪಣಿಗಳು ಬೇಕಾಗುತ್ತವೆ ಮತ್ತು ಅವುಗಳನ್ನು ತಯಾರಿಸುವುದು ಬಹಳ ಕಠಿಣವಾಗಿದೆ. ಅದರ ಬದಲು ‘ಡರ್ಟಿ ಅಣುಬಾಂಬ್‌’ಅನ್ನು ಮಾರಬಹುದು. ‘ಡರ್ಟಿ ಅಣುಬಾಂಬ್‌’, ಎಂದರೆ ಅಣುಭಟ್ಟಿಯಿಂದ ಹೊರಬರುವ ಕಸವಾಗಿರುತ್ತದೆ. ಡರ್ಟಿ ಅಣುಬಾಂಬ್‌ನ್ನು ಸ್ಫೋಟಕ ಪದಾರ್ಥವನ್ನು ಹಾಕಿಉಪಯೋಗಿಸಿದರೆ ಎಲ್ಲೆಡೆÉ ರೇಡಿಯೋ ಆಕ್ಟೀವ ಮಟೇರಿಯಲ್‌ ಹರಡಬಹುದು. ಈ ಅಪಾಯವಿದ್ದರೂ ಅದು ಅಣುಬಾಂಬ್‌ ನಂತೆ ಸಿಡಿಯುವುದಿಲ್ಲ. ಇಂತಹ ಬಾಂಬ್‌ಗಳನ್ನು ಈ ಮೊದಲು ಮಾರಾಟ ಮಾಡಲಾಗಿದೆ.

೩. ಅಣುಬಾಂಬ್‌ಗಳನ್ನು ಮಾರಾಟ ಮಾಡದಂತೆ ಪಾಕಿಸ್ತಾನವನ್ನು ವಿಮುಖಗೊಳಿಸಬೇಕು !

ಅಣುಬಾಂಬ್‌ನ್ನು ತಯಾರಿಸಲು ಬೇಕಾದ ಪ್ಲುಟೋನಿಯಮ್‌ ಅಣುಭಟ್ಟಿಯಲ್ಲಿ ತಯಾರಾಗುತ್ತದೆ. ಅದನ್ನು ದಾರಿ ತಪ್ಪಿದ ರಾಷ್ಟ್ರಗಳಿಗೆ (ಉದಾ. ಉತ್ತರ ಕೊರಿಯಾ) ಖಂಡಿತ ಮಾರಬಹುದು. ಇವೆಲ್ಲವುಗಳ ಮೇಲೆ ಜಾಗತಿಕ ‘ಅಣ್ವಸ್ತ್ರ ಸಮಿತಿ’ಯ ಗಮನ ಇರುತ್ತದೆ. ಅದು ಅಷ್ಟು ಸುಲಭವಿಲ್ಲ. ಹೀಗಿದ್ದರೂ ಪಾಕಿಸ್ತಾನಕ್ಕೆ ಅಸಾಧ್ಯವೆಂಬುದೇನಿಲ್ಲ. ಆರ್ಥಿಕ ದೃಷ್ಟಿಯಲ್ಲಿ ದಯನೀಯ ಸ್ಥಿತಿ ಇರುವ ದೇಶವು ತನ್ನನ್ನು ಕಾಪಾಡಲು ಏನೂ ಮಾಡಬಹುದು. ಈ ರೀತಿ ಮಾಡಿದರೆ ನಾವು ಪಾಕಿಸ್ತಾನವನ್ನು ‘ಭಯೋತ್ಪಾದಕ ದೇಶ’ವೆಂದು ಘೋಷಿಸುವೆವು. ಇದರಿಂದ ನಿಮಗೆ ಯಾವುದೇ ರಾಷ್ಟ್ರದೊಂದಿಗೆ ವ್ಯಾಪಾರ ಮಾಡಲು ಬರುವುದಿಲ್ಲ’, ಎಂದು ಇಡೀ ಜಗತ್ತು ಪಾಕಿಸ್ತಾನಕ್ಕೆ ಎಚ್ಚರಿಸಬೇಕು. ಪಾಕಿಸ್ತಾನದ ಚಲನವಲನಗಳ ಮೇಲೆ ಅಮೇರಿಕಾದ ಜೊತೆಗೆ ಇಡಿ ಜಗತ್ತೇ ಗಮನ ಇಡುವುದು ಆವಶ್ಯಕವಾಗಿದೆ. ಅದು ತಪ್ಪು ಕೃತಿ ಮಾಡುವುದು ಕಂಡು ಬಂದರೆ ಅದನ್ನು ಸಕಾಲದಲ್ಲಿ ತಡೆಗಟ್ಟುವುದು ಆವಶ್ಯಕ !’

– (ನಿವೃತ್ತ) ಬ್ರಿಗೇಡಿಯರ್‌ ಹೇಮಂತ ಮಹಾಜನ, ಪುಣೆ.