ಹಿಂದೂ ರಾಷ್ಟ್ರವೆಂದರೆ ರಾಜಕೀಯವಲ್ಲ, ಕೋಮುವಾದವಲ್ಲ, ಬದಲಾಗಿ ಅದು ಆಧ್ಯಾತ್ಮಿಕ, ಸುಸಂಸ್ಕೃತ ಹಿಂದೂ ರಾಷ್ಟ್ರವಾಗಿದೆ ! – ಶ್ರೀ. ಗುರುಪ್ರಸಾದ ಗೌಡ, ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ

ಪತ್ರಿಕಾಗೋಷ್ಠಿಯಲ್ಲಿ(ಎಡದಿಂದ) ಹಿಂದುಸ್ಥಾನ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾದ ಶ್ರೀ. ಲೋಕೇಶ್ ಉಳ್ಳಾಲ್, ಭಾಜಪದ ವಾಣಿಜ್ಯ ಮತ್ತು ವ್ಯಾಪಾರ ಪ್ರಕೋಷ್ಟದ ದ.ಕ. ಜಿಲ್ಲಾ ಸಹ ಸಂಚಾಲಕರಾದ ಶ್ರೀ. ದಿನೇಶ್ ಜೈನ್, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ, ಶ್ರೀರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ. ಆನಂದ ಶೆಟ್ಟಿ ಅಡ್ಯಾರ್ ಮತ್ತು ಕರ್ನಾಟಕ ರಾಜ್ಯ ರೈತ ಹಾಗೂ ಹಸಿರು ಜನಜಾಗೃತಿ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ. ಗಿರೀಶ್ ಕೊಟ್ಟಾರಿ

ಮಂಗಳೂರು – ಭಾರತದ ಸಂವಿಧಾನದ ಪೀಠಿಕೆಯಲ್ಲಿ, ಪ್ರತಿಯೊಬ್ಬ ನಾಗರಿಕನು ಸಮಾನತೆ, ಬಂಧುತ್ವ ಮತ್ತು ನ್ಯಾಯವನ್ನು ಅನುಭವಿಸಬೇಕು ಎಂದು ಹೇಳಲಾಗಿದೆ. ಆದರೆ ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರ ಆಯೋಗ, ಸಚ್ಚರ್ ಆಯೋಗ, ಅಲ್ಪಸಂಖ್ಯಾತರ ಅಭಿವೃದ್ಧಿ ಸಚಿವಾಲಯವಿದೆ; ಆದರೆ ಬಹುಸಂಖ್ಯಾತ ಹಿಂದೂಗಳಿಗೆ ಯಾವುದೇ ರಕ್ಷಣೆ ನೀಡಲು ಯಾವುದೇ ಸಚಿವಾಲಯ-ಆಯೋಗ ಇಲ್ಲ. ದೇಶದಲ್ಲಿ ಕೇವಲ ಹಿಂದೂಗಳ ದೇವಸ್ಥಾನಗಳಷ್ಟೇ ಸರಕಾರಿಕರಣ ಮಾಡಲಾಗಿದ್ದು, ಮಸೀದಿ, ಚರ್ಚ್‌ಗಳ ಸರ್ಕಾರೀಕರಣ ಯಾಕಿಲ್ಲ ? ಧರ್ಮದ ಆಧಾರದ ಮೇಲೆ ಅಲ್ಪಸಂಖ್ಯಾತರಿಗೆ ಶೈಕ್ಷಣಿಕ ಅನುದಾನವಿದೆ, ಹಾಗಾದರೆ ಬಹುಸಂಖ್ಯಾತ ಹಿಂದೂಗಳು ಮಾಡಿದ ಅಪರಾಧವೇನು ? ಇದನ್ನೆಲ್ಲ ನೋಡಿದರೆ ಭಾರತದಲ್ಲಿ ನಿಜವಾಗಿಯೂ ‘ಸೆಕ್ಯುಲರ್’ ವ್ಯವಸ್ಥೆ ಇದೆಯೇ ? ಸಾವಿರಾರು ಹಿಂದೂ ಹೆಣ್ಣುಮಕ್ಕಳ ಜೀವನವನ್ನು ನಾಶ ಮಾಡುವ ಲವ್ ಜಿಹಾದ್’, ಹಿಂದೂ ಕಾರ್ಯಕರ್ತರ ಹತ್ಯೆ, ಭಾರತದ ಆರ್ಥಿಕತೆಗೆ ಅಪಾಯಕಾರಿಯಾದ ಹಲಾಲ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ವಿರುದ್ಧ ಜನಜಾಗೃತಿ ಮೂಡಿಸಲು ಮತ್ತು ಹಿಂದೂಗಳ ಮೇಲಿನ ಅನ್ಯಾಯಗಳಿಗೆ, ನ್ಯಾಯ ನೀಡಲು, ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ 12 ಮಾರ್ಚ್ 2023 ರಂದು ಸಂಜೆ 5 ಗಂಟೆಗೆ ಮಂಗಳೂರಿನ ಕದ್ರಿ ಮೈದಾನದಲ್ಲಿ ಹಿಂದೂ ರಾಷ್ಟ್ರ-ಜಾಗೃತಿ ಸಭೆಯನ್ನು ಆಯೋಜನೆ ಮಾಡಲಾಗಿದೆ ಎಂದು ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ ಇವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

(ಸೌಜನ್ಯ : HJS Karnataka)

ಹಿಂದೂ ರಾಷ್ಟ್ರ-ಜಾಗೃತಿ ಸಭೆಯ ಆಯೋಜಕರಿಗೆ ಜೀವ ಬೆದರಿಕೆ ಹಾಕುವ ಮತಾಂಧ ಎಸ್.ಡಿ.ಪಿ.ಐ ಯನ್ನು ನಿಷೇಧಿಸಲು ಹಿಂದೂ ಜನಜಾಗೃತಿ ಸಮಿತಿಯ ಆಗ್ರಹ !

ಕಳೆದ 1 ತಿಂಗಳಿನಿಂದ ಸಮಿತಿಯ ಕಾರ್ಯಕರ್ತರು ಕಾನೂನಿನ ಚೌಕಟ್ಟಿನಲ್ಲಿ ಸಭೆಯ ನಿಮಿತ್ತ, ಮನೆ ಮನೆ ಪ್ರಸಾರ, ಆಮಂತ್ರಣ ಹಂಚುವುದು, ಪೋಸ್ಟರ್, ಪ್ಲೆಕ್ಸ್, ಹೋರ್ಡಿಂಗ್ಸ್ ಹಾಕುವುದು, ಮೈಕ್ ಅನೌನ್ಸಮೆಂಟ್, ಸಾಮಾಜಿಕ ಜಾಲತಾಣ ಹೀಗೆ ವಿವಿಧ ಮಾದ್ಯಮದಿಂದ ಪ್ರಸಾರ ಮಾಡುತ್ತಿದ್ದಾರೆ. ಆದರೆ ಈಗ ಎಸ್‌ಡಿಪಿಐ ಮತಾಂಧರು ಸಭೆಯ ಆಯೋಜಕರಿಗೆ ದೂರವಾಣಿ ಕರೆ ಮಾಡಿ ಜೀವ ಬೆದರಿಕೆ ನೀಡುತ್ತಿದ್ದಾರೆ. ಈ ಬಗ್ಗೆ ಪೊಲೀಸರಲ್ಲಿ ದೂರು ಸಹ ದಾಖಲಿಸಲಾಗಿದೆ. ಇಂತಹ ಮತಾಂಧರನ್ನು ಮಟ್ಟ ಹಾಕಲು ಎಸ್.ಡಿ.ಪಿ.ಐ ನ ಮೇಲೆ ನಿಷೇಧ ಹೇರಬೇಕೆಂದು ಸಮಿತಿಯು ಆಗ್ರಹಿಸುತ್ತದೆ.

(ಸೌಜನ್ಯ : HJS Karnataka)

ಹಿಂದೂ ಜನಜಾಗೃತಿ ಸಮಿತಿಯು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ವ್ಯಾಪಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಹಿಂದೂ ಸಂಘಟನೆಗಳ ಸಭೆಗಳು, ‘ಹಲಾಲ್’ ಹೇರಿಕೆ ವಿರುದ್ಧ ಜಾಗೃತಿ ಸೇರಿದಂತೆ ರಾಷ್ಟ್ರ ಮತ್ತು ಧರ್ಮದ ಮೇಲೆ ಪರಿಣಾಮ ಬೀರುವ ವಿವಿಧ ವಿಷಯಗಳ ಕುರಿತು ಜನಜಾಗೃತಿ, ಉಪನ್ಯಾಸ, ಆಂದೋಲನ, ಪತ್ರಿಕಾ ಗೋಷ್ಠಿಗಳು, ಧರ್ಮಶಿಕ್ಷಣ ವರ್ಗಗಳ ಮೂಲಕ ಸಾರ್ವಜನಿಕ ಜಾಗೃತಿ ಮೂಡಿಸುತ್ತಿದೆ.

(ಸೌಜನ್ಯ : HJS Karnataka)

ಇದುವರೆಗೆ ದೇಶದಾದ್ಯಂತ 2000 ಕ್ಕೂ ಅಧಿಕ ಹಿಂದೂ ರಾಷ್ಟ್ರ-ಜಾಗೃತಿ ಸಭೆಗಳನ್ನು ಕಾನೂನು ಚೌಕಟ್ಟಿನಲ್ಲಿ ನಡೆಸಿ ಹಿಂದೂಗಳಲ್ಲಿ ಜಾಗೃತಿಯನ್ನು ಮೂಡಿಸಲಾಗಿದೆ. ಮಂಗಳೂರಿನಲ್ಲಿ ಪತ್ರಿಕಾ ಗೋಷ್ಠಿ ಯಲ್ಲಿ ಭಾಜಪದ ವಾಣಿಜ್ಯ ಮತ್ತು ವ್ಯಾಪಾರ ಪ್ರಕೋಷ್ಟದ ದ.ಕ. ಜಿಲ್ಲಾ ಸಹ ಸಂಚಾಲಕರಾದ ಶ್ರೀ. ದಿನೇಶ್ ಜೈನ್, ಶ್ರೀರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ. ಆನಂದ ಶೆಟ್ಟಿ ಅಡ್ಯಾರ್, ಕರ್ನಾಟಕ ರಾಜ್ಯ ರೈತ ಹಾಗೂ ಹಸಿರು ಜನಜಾಗೃತಿ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ. ಗಿರೀಶ್ ಕೊಟ್ಟಾರಿ ಮತ್ತು ಹಿಂದುಸ್ಥಾನ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾದ ಶ್ರೀ. ಲೋಕೇಶ್ ಉಳ್ಳಾಲ್ ಉಪಸ್ಥಿತರಿದ್ದರು.

(ಸೌಜನ್ಯ : HJS Karnataka)