`ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದಿಂದ ಮಂಗಳೂರು ಪೊಲೀಸ ಆಯುಕ್ತರಿಗೆ ಮನವಿ !
ಮಂಗಳೂರು – ದಕ್ಷಿಣ ಕನ್ನಡ ಜಿಲ್ಲಾದ್ಯಂತ ಹಿಂದೂ ಜನಜಾಗೃತಿ ಸಮಿತಿಯ `ಹಿಂದೂ ರಾಷ್ಟ್ರ ಜಾಗೃತಿ ಸಭೆ’ ಎಂಬ ದೇಶ ವಿರೋಧಿ ಕಾರ್ಯಕ್ರಮ ನಡೆಸಲು ವ್ಯಾಪಕ ಪ್ರಚಾರ ನಡೆಯುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ವಾಹನಗಳ ಮೇಲೆ ಫಲಕಗಳನ್ನು ಅಂಟಿಸಲಾಗಿದೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ವೀಡಿಯೊಗಳು ಹರಿದಾಡುತ್ತಿದೆ, ಇದೊಂದು ಕಾನೂನಬಾಹಿರ ಮತ್ತು ದೇಶವಿರೋಧಿ ಸಭೆಯಾಗಿದೆ. ಈ ಕಾರ್ಯಕ್ರಮ ನಡೆಸಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಈ ಪಕ್ಷದ ನಿಯೋಗವು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದೆ. ಈ ಪಕ್ಷವು ನಿಷೇಧಿತ ಜಿಹಾದಿ ಸಂಘಟನೆಯಾದ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ರಾಜಕೀಯ ಶಾಖೆಯಾಗಿದೆ.
ಈ ಮನವಿಯಲ್ಲಿ, ಭಾರತವು ಪರಿಪೂರ್ಣ ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ರಾಷ್ಟ್ರ ಎಂಬುದನ್ನು ಸಂವಿಧಾನ ಪ್ರಬಲವಾಗಿ ಪ್ರತಿಪಾದಿಸಿರುತ್ತದೆ. (ಆದರೂ ಈ ದೇಶದಲ್ಲಿ ಕಳೆದ ಅನೇಕ ದಶಕಗಳಿಂದ ಮುಸಲ್ಮಾನರು ಧರ್ಮದ ಹೆಸರಿನಲ್ಲಿ ಎಷ್ಟೊಂದು ಸೌಲಭ್ಯಗಳನ್ನು ಕಬಳಿಸಿದ್ದಾರೆ ಇದರ ಲೆಕ್ಕ ನೀಡುವರೇ ? – ಸಂಪಾದಕರು) ಈ ದೇಶವು ಯಾವುದೇ ಧರ್ಮದ ಆಧಾರದಲ್ಲಿ ಗುರುತಿಸುವ ದೇಶವೆಂದು ಉಲ್ಲೇಖಿಸುವುದು ಕಾನೂನುಬಾಹಿರ ಮತ್ತು ದೇಶದ್ರೋಹದ ಕ್ರತ್ಯವಾಗಿದೆ. (ಭಾರತವನ್ನು ಇಸ್ಲಾಮಿ ರಾಷ್ಟ್ರ ಮಾಡುವವರ ವಿರುದ್ಧ ಈ ಪಕ್ಷ ಎಂದಾದರೂ ಬಾಯಿ ಬಿಡುವುದೇ ? ತನ್ನ ಪಿ.ಎಫ್.ಐ. ಗೆ ಭಾರತವನ್ನು ಇಸ್ಲಾಮಿ ರಾಷ್ಟ್ರ ಮಾಡುವುದಿತ್ತು. ಆದ್ದರಿಂದ ಈ ಪಕ್ಷ ಯಾವ ಮುಖ ಇಟ್ಟುಕೊಂಡು ಈ ತತ್ತ್ವ ಜ್ಞಾನ ಹೇಳುತ್ತಿದೆ ? – ಸಂಪಾದಕರು) ಆದ್ದರಿಂದ ಪೊಲೀಸ್ ಇಲಾಖೆಯು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ದೇಶದ್ರೋಹಿ ಕಾರ್ಯಕ್ರಮ ನಡೆಸಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಈಗಾಗಲೇ ಜಿಲ್ಲಾದ್ಯಂತ ಪೋಸ್ಟರ್ ಅಂಟಿಸಿ ಸಮಾಜದಲ್ಲಿ ಆತಂಕದ ವಾತಾವರಣ ನಿರ್ಮಾಣ ಮಾಡಿದ ಹಿಂದೂ ಜನಜಾಗೃತಿ ಸಮಿತಿಯ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಆ ಸಂಘಟನೆಯನ್ನು ನಿಷೇಧಿಸಿ ಅದರ ಮುಖಂಡರನ್ನು ಬಂಧಿಸಬೇಕು ಪೊಲೀಸ್ ಆಯುಕ್ತರನ್ನು ಒತ್ತಾಯಿಸಿದೆ.
ಸಂಪಾದಕೀಯ ನಿಲುವುಹಿಂದೂ ರಾಷ್ಟ್ರದ ಹೆಸರಿನಲ್ಲಿ ನಡೆಯುವ ಸಭೆಯಿಂದ ಜಿಹಾದಿ ಸಂಘಟನೆ, ಪಕ್ಷ ಮತ್ತು ಮುಖಂಡರಿಗೆ ಹೊಟ್ಟೆ ಉರಿಯುತ್ತಿದೆ ಇದರಲ್ಲಿ ಅನುಮಾನವಿಲ್ಲ; ಆದರೆ ಸಂವಿಧಾನವು ನೀಡಿರುವ ಸ್ವಾತಂತ್ರ್ಯಕ್ಕನುಸಾರವೇ ಈ ಸಭೆಗಳು ನಡೆಯುತ್ತಿರುವುದರಿಂದ ಯಾರು ಎಷ್ಟೇ ಕೂಗಾಡಿದರೂ ಇದರ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ ! ‘ಮೂಲತಃ ನಿಷೇಧಕ್ಕೊಳಗಾದ ಜಿಹಾದಿ ಭಯೋತ್ಪಾದಕ ಸಂಘಟನೆಯ ರಾಜಕೀಯ ಶಾಖೆಗಳು ದೇಶದಲ್ಲಿ ಹೇಗೆ ಸಕ್ರಿಯವಾಗಿದೆ ?’, ಎಂದು ರಾಷ್ಟ್ರಪ್ರೇಮಿಗಳಿಗೆ ಪ್ರಶ್ನೆ ಕಾಡುತ್ತಿದೆ. ಜಿಹಾದಿ ಚಟುವಟಿಕೆಗೆ ಬಹಿರಂಗವಾಗಿ ಬೆಂಬಲಿಸುವ ಎಸ್.ಡಿ.ಪಿ.ಐ.ಯನ್ನು ಮೊದಲು ನಿಷೇಧಿಸಬೇಕು ! |