ಕೊಯಂಬತೂರಿನಲ್ಲಿ (ತಮಿಳುನಾಡು) ನಡೆದ ಬಾಂಬ ಸ್ಫೋಟದ ಹೊಣೆಯನ್ನು ಇಸ್ಲಾಮಿಕ ಸ್ಟೇಟ್‌ ಹೊತ್ತಿದೆ !

ಹಿಂದೂಗಳ ಮೇಲೆ ಸೇಡು ತೀರಿಸಿಕೊಳ್ಳಲು ಆಕ್ರಮಣಗಳನ್ನು ಮಾಡುತ್ತಿರುವುದಾಗಿ ಬೆದರಿಕೆ

ಕೊಯಂಬತೂರ (ತಮಿಳುನಾಡು) – ಇಲ್ಲಿ ಕೆಲವು ತಿಂಗಳುಗಳ ಹಿಂದೆ ದೇವಸ್ಥಾನದ ಬಳಿ ಇದ್ದ ಚತುಶ್ಚಕ್ರ ವಾಹನದಲ್ಲಿ ಬಾಂಬ್‌ಸ್ಫೋಟ ನಡೆದಿತ್ತು. ಇದರ ಹೊಣೆಯನ್ನು ‘ದ ಇಸ್ಲಾಮಿಕ ಸ್ಟೇಟ್‌ ಖೊರಾಸನ ಪ್ರೊವಿನ್ಸ್‌’ ಎಂಬ ಜಿಹಾದಿ ಭಯೋತ್ಪಾದಕ ಸಂಘಟನೆಯು ಹೊತ್ತಿದೆ. ‘ಹಿಂದೂಗಳ ಮೇಲೆ ಸೇಡು ತೀರಿಸಿಕೊಳ್ಳಲು, ಹಾಗೆಯೇ ಭಾರತದಲ್ಲಿ ರಕ್ತಪಾತ ಮಾಡಿಸಲು ಇನ್ನೂ ಆಕ್ರಮಣಗಳನ್ನು ಮಾಡಲಾಗುವುದು’ ಎಂದು ಈ ಸಂಘಟನೆಯು ಬೆದರಿಕೆ ಹಾಕಿದೆ. ಈ ವಿಷಯದಲ್ಲಿ ಭಾಜಪದ ತಮಿಳುನಾಡಿನ ಪ್ರದೇಶಾಧ್ಯಕ್ಷರಾದ ಅಣ್ಣಾಮಲೈರವರು ಮಾತನಾಡುತ್ತ ‘ಇಸ್ಲಾಮಿಕ ಸ್ಟೇಟ್‌ ಕೊಯಂಬತೂರಿನಲ್ಲಿ ನಡೆದ ಬಾಂಬ್‌ ಸ್ಫೋಟದ ಹೊಣೆ ಹೊತ್ತಿದೆ. ದ್ರಮುಕ(ದ್ರವಿಡ ಮುನ್ನೇತ್ರ ಕಳಘಮ್‌ – ದ್ರವಿಡ ಪ್ರಗತಿ ಸಂಘ)ದವರು ಈಗಲಾದರೂ ನಿದ್ರೆಯಿಂದ ಏಳುವರು ಹಾಗೂ ‘ಸಿಲಿಂಡರ್‌ನಲ್ಲಿ ಸ್ಫೋಟ ಸಂಭವಿಸಿತ್ತು’ ಎಂಬಂತಹ ಹೇಳಿಕೆ ನೀಡುವುದನ್ನು ನಿಲ್ಲಿಸುವರು ಎಂದು ಆಶಿಸುತ್ತೇನೆ ಎಂದು ಹೇಳಿದರು.

ರಾಷ್ಟ್ರೀಯ ತನಿಖಾ ದಳವು ಈ ಸ್ಫೋಟದ ತನಿಖೆಯನ್ನು ಮಾಡುತ್ತಿದೆ. ೨೩ ಅಕ್ಟೋಬರ ೨೦೨೨ರಂದು ಈ ಸ್ಫೋಟ ಸಂಭವಿಸಿತ್ತು. ಇದರಲ್ಲಿ ಮುಬಿನ ಎಂಬ ಹೆಸರಿನ ಯುವಕನು ಮೃತನಾಗಿದ್ದನು. ಅವನು ಈ ಬಾಂಬ್‌ನ್ನು ದೇವಸ್ಥಾನದ ಬಳಿ ಇಡಲಿದ್ದನು.

ಸಂಪಾದಕೀಯ ನಿಲುವು

ಹಿಂದೂಗಳ ಮೇಲೆ ಜಿಹಾದಿ ಭಯೋತ್ಪಾದಕರು ಸಾವಿರಾರು ಆಕ್ರಮಣಗಳನ್ನು ಮಾಡಿದರು; ಆದರೆ ಹಿಂದೂಗಳು ಯಾವಾಗಲೂ ಅದರ ಸೇಡು ತೀರಿಸಿಕೊಳ್ಳಲಿಲ್ಲ. ಬದಲಾಗಿ ‘ಭಯೋತ್ಪಾದಕರಿಗೆ ಧರ್ಮವಿರುವುದಿಲ್ಲ’, ಎಂದು ಪುರೋ(ಅಧೋ)ಗಾಮಿಗಳು ಹೇಳುತ್ತಲೇ ಉಳಿದರು, ಎಂಬುದನ್ನು ಗಮನದಲ್ಲಿಡಿ !