ಲೈಂಗಿಕ ಸಮಾನತೆಯನ್ನು ಪಡೆಯಲು ಇನ್ನೂ ೩೦೦ ವರ್ಷಗಳು ಬೇಕಾಗಬಹುದು !

ಸಂಯುಕ್ತ ರಾಷ್ಟ್ರಗಳ ಪ್ರಧಾನ ಕಾರ್ಯದರ್ಶಿಯಾದ ಅಂಟೋನಿಯೊ ಗುಟೆರಸರವರ ಖೇದ

ಅಂಟೋನಿಯೊ ಗುಟೆರಸರ

ನ್ಯೂಯಾರ್ಕ (ಅಮೇರಿಕಾ) – ಲೈಂಗಿಕ ಸಮಾನತೆಯ ದಿಶೆಯಲ್ಲಿ ಉಂಟಾಗ ಬೇಕಾದ ಪ್ರಗತಿಯು ಈಗ ನಮ್ಮ ದೃಷ್ಟಿಯಿಂದ ದೂರವಾಗಿದೆ. ಸದ್ಯದ ಅಂದಾಜಿನ ಅನುಸಾರ ಲೈಂಗಿಕ ಸಮಾನತೆ ಬರಲು ಜಗತ್ತಿಗೆ ಇನ್ನೂ ೩೦೦ ವರ್ಷಗಳು ತಗುಲಬಹುದು, ಎಂಬ ಖೇದಕರ ಹೇಳಿಕೆಯನ್ನು ಸಂಯುಕ್ತ ರಾಷ್ಟ್ರಗಳ ಪ್ರಧಾನ ಕಾರ್ಯದರ್ಶಿಯಾದ ಅಂಟೋನಿಯೊ ಗುಟರೆಸರವರು ವ್ಯಕ್ತಪಡಿಸಿದ್ದಾರೆ. ಅವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ನಿಮಿತ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಗುಟರೆಸರವರು ಅಫಘಾನಿಸ್ತಾನದೊಂದಿಗೆ ಇತರ ಕೆಲವು ದೇಶಗಳನ್ನು ಹೆಸರಿಸಿ, ಇಲ್ಲಿ ಕಡಿಮೆ ವಯಸ್ಸಿನಲ್ಲಿಯೇ ಹೆಣ್ಣುಮಕ್ಕಳ ಮದುವೆ ಮಾಡಿಕೊಡಲಾಗುತ್ತದೆ. ಅವರನ್ನು ಅಪಹರಿಸಲಾಗುತ್ತದೆ. ಅವರು ಶಾಲೆಗೆ ಹೋಗುವುದನ್ನು ವಿರೋಧಿಸಲಾಗುತ್ತದೆ. ಹಾಗೆಯೇ ಅವರ ಮೇಲೆ ಆಕ್ರಮಣಗಳನ್ನೂ ಮಾಡಲಾಗುತ್ತದೆ. ಇದರಿಂದಾಗಿ ‘ಲೈಂಗಿಕ ಸಮಾತನೆಯನ್ನು ಸಾಧಿಸುವುದು ಇನ್ನೂ ದೂರ ಹೋಗುತ್ತಿದೆ’ ಎಂಬುದು ಸ್ಪಷ್ಟವಾಗುತ್ತದೆ. ಜಗತ್ತಿನಾದ್ಯಂತ ಮಹಿಳೆಯರ ಅಧಿಕಾರಗಳ ದುರುಪಯೋಗ ಮಾಡಲಾಗುತ್ತದೆ. ಅವರಿಗೆ ಬೆದರಿಕೆಗಳನ್ನು ಹಾಕಲಾಗುತ್ತದೆ. ಮಹಿಳೆಯರು ಮತ್ತು ಮಕ್ಕಳನ್ನು ಸಾರ್ವಜನಿಕ ಜೀವನದಿಂದ ನಷ್ಟಗೊಳಿಸಲು ಪ್ರಯತ್ನಿಸಲಾಗುತ್ತದೆ, ಎಂದು ಹೇಳಿದರು.