ವೆಬ್ ಸರಣಿ ‘ಕಾಲೇಜ್ ರೋಮ್ಯಾನ್ಸ್’ನ ನಿರ್ದೇಶಕ ಮತ್ತು ನಟಿಯ ವಿರುದ್ಧ ದೂರು ದಾಖಲಿಸಲು ದೆಹಲಿ ಉಚ್ಚ ನ್ಯಾಯಾಲಯದಿಂದ ಆದೇಶ

ವೆಬ್ ಸರಣಿಯಲ್ಲಿನ ಭಾಷೆ ಅಶ್ಲೀಲ ಮತ್ತು ಅಸಭ್ಯ !

ನವ ದೆಹಲಿ – ದೆಹಲಿ ಉಚ್ಚ ನ್ಯಾಯಾಲಯದಿಂದ ವೆಬ್ ಸರಣಿ ‘ಕಾಲೇಜ್ ರೋಮ್ಯಾನ್ಸ್’ ನ ನಿರ್ದೇಶಕ ಸಿಮರಪ್ರೀತಿ ಸಿಂಹ ಮತ್ತು ನಟಿ ಅಪೂರ್ವಾ ಅರೋರ ಇವರ ವಿರುದ್ಧ ದೂರು ದಾಖಲಿಸುವ ಆದೇಶ ನೀಡಿದೆ. ನ್ಯಾಯಾಲಯವು, ‘ಈ ವೆಬ್ ಸರಣಿಯಲ್ಲಿ ಉಪಯೋಗಿಸಿರುವ ಭಾಷೆ ಅಶ್ಲೀಲ, ಅಸಭ್ಯ ಮತ್ತು ಬಿಭತ್ಸವಾಗಿದೆ. ಇದರಿಂದ ಯುವಕರ ಯೋಚನೆ ಕಲುಷಿತಗೊಳ್ಳುತ್ತದೆ’ ಎಂದು ಆದೇಶದಲ್ಲಿ ಹೇಳಿದೆ.
ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮ ಇವರು, ”ನಮ್ಮ ಚೆಂಬರನಲ್ಲಿ ಇಯರ್ ಫೋನ್ ಹಾಕಿಕೊಂಡು ನಾವು ಈ ವೆಬ್ ಸೀರೀಸ್ ನೋಡಬೇಕಾಯಿತು. ಅಷ್ಟೊಂದು ಅಶ್ಲೀಲ ಭಾಷೆ ಇದರಲ್ಲಿ ಉಪಯೋಗಿಸಿದ್ದಾರೆ. ಇದರಲ್ಲಿನ ಸಂವಾದ ಬೇರೆ ಯಾರಿಗು ಕೇಳಿಸಲು ಸಾಧ್ಯವಿಲ್ಲ. ವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಈ ರೀತಿಯ ಭಾಷೆಯ ಉಪಯೋಗ ಮಾಡಲು ಅನುಮತಿ ನೀಡಲು ಸಾಧ್ಯವಿಲ್ಲ. ಈ ಭಾಷೆ ಸಾಮಾನ್ಯ ನಾಗರೀಕರ ಮಾನಸಿಕತೆಯ ಯೋಚನೆ ಮಾಡುತ್ತಾ ಸಭ್ಯತೆಯ ಮಾನದಂಡಕ್ಕೆ ಯೋಗ್ಯವಾಗಿಲ್ಲ.” ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ವೆಬ್ ಸರಣಿ ಮೂಲಕ ಹಿಂಸೆ ಮತ್ತು ಅಶ್ಲೀಲತೆ ಪ್ರಸಾರ ಆಗುತ್ತದೆ, ಅದರ ಮೇಲೆ ನಿಯಂತ್ರಣ ಪಡೆಯುವುದಕ್ಕಾಗಿ ಸರಕಾರ ನಿಯಮಾವಳಿ ರೂಪಿಸಿದೆ; ಆದರೆ ಅದರ ಮೇಲೆ ಯಾರದೇ ನಿಯಂತ್ರಣವಿಲ್ಲ. ಆದ್ದರಿಂದ ಈ ರೀತಿ ನಡೆಯುತ್ತಿರುತ್ತದೆ. ಸರಕಾರ ಜನಹಿತವನ್ನು ಗಾಂಭೀರ್ಯತೆಯಿಂದ ನೋಡುವುದು ಅವಶ್ಯಕ !